K. Directed by Sangamesh Patil, the short film ``Jivasakhi'' is released

ಕೆ. ಸಂಗಮೇಶ್ ಪಾಟೀಲ್ ನಿರ್ದೇಶನದ `ಜೀವಸಖಿ’ ಕಿರುಚಿತ್ರ ಬಿಡುಗಡೆ - CineNewsKannada.com

ಕೆ. ಸಂಗಮೇಶ್ ಪಾಟೀಲ್ ನಿರ್ದೇಶನದ `ಜೀವಸಖಿ’ ಕಿರುಚಿತ್ರ ಬಿಡುಗಡೆ

ಕೆ. ಸಂಗಮೇಶ್ ಪಾಟೀಲ್ ನಿರ್ದೇಶನದ ಕಿರುಚಿತ್ರ `ಜೀವಸಖಿ’ ಬಿಡುಗಡೆಗೊಂಡಿದೆ.ಅಚ್ಚುಕಟ್ಟಾದ ಸಮಾರಂಭದಲ್ಲಿ, ಸಂಗಮ್ ಟಾಕೀಸ್ ಯೂ ಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ.

ಜೀವಸಖಿ, ಅಲ್ಲಿದ್ದ ಪ್ರೇಕ್ಷಕ ವರ್ಗವನ್ನು ಆರಂಭಿಕವಾಗಿಯೇ ಸೆಳೆದುಕೊಂಡಿತ್ತು. ನೋಡಿದವರೆಲ್ಲರ ಕಡೆಯಿಂದ ಜೀವಸಖಿಯತ್ತ ಮೆಚ್ಚುಗೆಗಳು ಹರಿದು ಬಂದಿದ್ದವು. ಇದೀಗ ಅಂಥಾದ್ದೇ ಪೆÇ್ರೀತ್ಸಾಹದಾಯಕ ವಾತಾವರಣ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹಬ್ಬಿಕೊಂಡಿದೆ.

ನವಿರು ಪ್ರೇಮದ ಪುಳಕಗಳನ್ನು ಒಳಗೊಂಡಿರುವ ಕಿರುಚಿತ್ರ ಜೀವಸಖಿ. ಐದು ವರ್ಷಗಳ ಕಾಲ ನಾನಾ ನಿರ್ದೇಶಕರ ಜೊತೆ ಪಳಗಿಕೊಂಡಿದ್ದ ಸಂಗಮೇಶ್ ಪಾಟೀಲ್, ಈ ಕಿರುಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆಯಿಟ್ಟಿದ್ದಾರೆ. ಹಾಗೆ ಈ ಚೊಚ್ಚಲ ಪ್ರಯತ್ನದ ಫಲದಂತಿರುವ ಜೀವಸಖಿ ನಾನಾ ರೀತಿಯಲ್ಲಿ ಪ್ರೇಕ್ಷಕರನು ಸೆಳೆದುಕೊಳ್ಳುತ್ತಿರೋ ಖುಷಿ ಸಂಗಮೇಶ್ ರಲ್ಲಿದೆ.

ಜೀವಸಖಿ ಮೂವತೈದು ನಿಮಿಷಗಳ ಕಾಲಾವಧಿ ಹೊಂದಿರುವ ಕಿರು ಚಿತ್ರ. ಯುವರಾಜ್ ಪಾಟೀಲ್ ನಾಯಕನಾಗಿ ನಟಿಸಿದ್ದರೆ, ಈಗಾಗಲೇ ಒಂದಷ್ಟು ವೆಬ್ ಸೀರೀಸ್ ಗಳಲ್ಲಿ ಅಭಿನಿಸಿ ಅನುಭವ ಹೊಂದಿರುವ ಸೌಂದರ್ಯ ಗೌಡ ನಾಯಕಿಯಾಗಿ ಜೊತೆಯಾಗಿದ್ದಾರೆ. ಇದೀಗ ಸದರಿ ಚಿತ್ರದ ಪಾತ್ರಗಳಿಗೆ ಜೀವ ತುಂಬಿರುವ ಈ ಇಬ್ಬರ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.

ಒಂದು ಶಶಕ್ತವಾದ ತಂಡದೊಂದಿಗೆ ಸಂಗಮೇಶ್ ಪಾಟೀಲ್ ಈ ಕಿರುಚಿತ್ರವನ್ನು ರೂಪಿಸಿದ್ದಾರೆ. ಕಥೆ, ಚಿತ್ರಕಥೆ, ತಾರಾಗಣ ಮಾತ್ರವಲ್ಲದೇ, ತಾಂತ್ರಿಕವಾಗಿಯೂ ಪ್ರಧಾನವಾಗಿ ಗಮನ ಹರಿಸಿದ್ದಾರಂತೆ. ಸುನೀಲ್ ಎಲ್ ಎಸ್ ಆರ್ ಸಂಕಲನ, ಜೀವನ್ ಎಸ್ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಅಕ್ಷಯ್ ಬಿಂದುಸಾರ ಪ್ರಚಾರ, ರವಿ ಕರಳ್ಳಿ ವಿ ಎಫ್ ಎಕ್ಸ್, ರವಿ ಹಿರೇಮಠ್ ಸೌಂಡ್ ಡಿಸೈನ್ ವಿನ್ಯಾಸ ಈ ಚಿತ್ರಕ್ಕಿದೆ..

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin