"Krishnam Pranaya Sakhi" on Sun Next after centenary celebrations
ಶತ ದಿನದ ಸಂಭ್ರಮದ ಬಳಿಕ ಸನ್ ನೆಕ್ಟ್ ನಲ್ಲಿ ” ಕೃಷ್ಣಂ ಪ್ರಣಯ ಸಖಿ”
ಗೋಲ್ಡನ್ ಸ್ಟಾರ್ ಗಣೇಶ್ ,ಮಾಳವಿಕ ನಾಯರ್ ನಾಯಕ,ನಾಯಕಿಯಾಗಿ ಕಾಣಿಸಿಕೊಂಡಿದ್ದ ಈ ವರ್ಷದ ಮೊದಲ ಶತದಿನೋತ್ಸವ ಕಂಡ ” ಕೃಷ್ಣಂ ಪ್ರಣಯ ಸಖಿ” ಚಿತ್ರ ಸನ್ ನೆಕ್ಟ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಕನ್ನಡಿಗರ ಮನಸ್ಸಿಗೆ ಮುದ ನೀಡಿದ ಈ ವರ್ಷದ ಸೂಪರ್ ಹಿಟ್ ಕೌಟಂಬಿಕ ಚಿತ್ರ ’ಕೃಷ್ಣ ಪ್ರಣಯ ಸಖಿ’ ಇದೇ ನವೆಂಬರ್ 29ರಿಂದ ’ಸನ್ ನೆಕ್ಸ್ಟ್’ ಡಿಜಿಟಲ್ ಪ್ರೀಮಿಯರ್ ಆಗಲಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಮೊದಲ ಬಾರಿ ನಾಯಕಿಯಾಗಿ ನಟಿಸಿದ ಯುವ ಪ್ರತಿಭೆ ಮಾಳವಿಕ ನಾಯರ್ ಚಿತ್ರವು ನೋಡುಗರ ಮನಸೂರೆಗೊಂಡು ಸದ್ದು ಮಾಡಿತ್ತು. ಇದೀಗ ಸನ್ ನೆಕ್ಸ್ಟ್ ಪ್ರೀಮಿಯರ್ ಆಗಿ ನಿಮ್ಮ ಮನಸ್ಸನ್ನು ಮತ್ತೋಮ್ಮೆ ಗೆಲ್ಲಲಿದೆ.
ಮುದ ನೀಡುವ ಹಾಡುಗಳು, ಹಾಸ್ಯ, ಪ್ರೇಮ ಸಲ್ಲಾಪದ ಜತೆ ಸಾಗುವ ಅನಿರೀಕ್ಷಿತ ಪಯಣವನ್ನು ಇದೇ 29ರಿಂದ ನೋಡಿ ಆನಂಂದಿಸಬಹುದಾಗಿದೆ.
ಚಿತ್ರದಲ್ಲಿ ಹಿರಿಯ ಕಲಾವಿದರಾದ ಶಶಿ ಕುಮಾರ್, ರಂಗಾಯಣ ರಘು, ಶೃತಿ, ಶಿವಧ್ವಜ್, ಯುವ ನಟಿ ಶರಣ್ಯ ಶೆಟ್ಟಿ, ಗಿರೀಶ್ ಚಿಕ್ಕಣ್ಣ ಸೇರಿದಂತೆ ಅತಿದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.