'Martin' to be screened on Zee Kannada on December 29th

ಡಿಸೆಂಬರ್ 29 ರಂದು ಜೀ ಕನ್ನಡ ವಾಹಿನಿಯಲ್ಲಿ ‘ಮಾರ್ಟಿನ್’ ಚಿತ್ರ ಪ್ರದರ್ಶನ - CineNewsKannada.com

ಡಿಸೆಂಬರ್ 29 ರಂದು ಜೀ ಕನ್ನಡ ವಾಹಿನಿಯಲ್ಲಿ ‘ಮಾರ್ಟಿನ್’ ಚಿತ್ರ ಪ್ರದರ್ಶನ

ಮನರಂಜನೆಗೆ ಮತ್ತೊಂದು ಹೆಸರೇ ಜೀû ಕನ್ನಡ. ಜನಪ್ರಿಯ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವಲ್ರ್ಡ್ ಟೆಲಿವಿಷನ್ ಪ್ರೀಮಿಯರ್‍ಗಳಿಂದ ಹೊಸತನದ ಮೆರುಗು ನೀಡಿ ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ಈ ವರ್ಷದ ಕೊನೆಗೆ ಪ್ರೇಕ್ಷಕಪ್ರಭುಗಳಿಗೆ ಮತ್ತೊಂದು ಸಪ್ರ್ರೈಸ್ ಕೊಡಲು ಸಜ್ಜಾಗಿದೆ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ, ಅಂಬಾರಿ ಖ್ಯಾತಿಯ ಎ.ಪಿ ಅರ್ಜುನ್ ನಿರ್ದೇಶಿಸಿರುವ ಗ್ಲೋಬಲ್ ಟೆಲಿವಿಷನ್ ಪ್ರೀಮಿಯರ್ ಮಾರ್ಟಿನ್ ಚಿತ್ರ ಇದೇ ಡಿಸೆಂಬರ್ 29 ರಂದು ಸಂಜೆ 4 ಗಂಟೆಗೆ ಜೀû ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆಕ್ಷನ್ ಪ್ರಿನ್ಸ್ ಗೆ ವೈಭವೀ ಶಾಂಡಿಲ್ಯ ಅವರು ಜೋಡಿಯಾಗಿದ್ದಾರೆ

ಚಿತ್ರದಲ್ಲಿ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವೂ ಬರೀಆಕ್ಷನ್ ಅಷ್ಟೇ ಅಲ್ಲದೇ ಎಲ್ಲಾ ತರಹದ ಭಾವನೆಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ. ಧ್ರುವ ಸರ್ಜಾ ಅಬ್ಬರ, ಆಕ್ಷನ್, ಹೃದಯಸ್ಪರ್ಶೀ ನಟನೆ ವೀಕ್ಷಕರನ್ನು ಸೋಜುಗಗೊಳಿಸುತ್ತದೆ. ಅಚ್ಯುತ್ ಕುಮಾರ್, ಸುಕೃತ ವಾಗ್ಲೆ ಮತ್ತು ನಿಕಿತಿನ್ ಧೀರ್ ಅವರ ನಟನೆಯೂ ಮನಮುಟ್ಟುವಂತಿದೆ.

`ಮಾರ್ಟಿನ್’ ಚಿತ್ರದಲ್ಲಿ ನಾಯಕ ಪಾಕಿಸ್ತಾನದಲ್ಲಿ ಸೆರೆಸಿಕ್ಕ ಭಾರತೀಯನಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ ಆತನಿಗೆ ತಾನು ಯಾರು ಎಂಬುದೇ ನೆನಪಿರುವುದಿಲ್ಲ. ತನ್ನ ಐಡೆಂಟಿಟಿ ಏನು ಎಂಬುದನ್ನು ಹುಡುಕಿಕೊಂಡು ಹೊರಟಾಗ ಅನೇಕ ಸಂಗತಿಗಳು ಮತ್ತು ಸವಾಲುಗಳು ಎದುರಾಗುತ್ತವೆ. ತನಗೆ ಎದುರಾದ ಕಷ್ಟಗಳಿಗೆಲ್ಲ ಮಾರ್ಟಿನ್ ಎಂಬುವವನು ಕಾರಣ ಎನ್ನುವುದು ಮಾರ್ಟಿನ್ ತಿರುಳಾಗಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin