"Nee Iralu Joteyalli" serial starts from August 11 on Star Suvarna

ಸ್ಟಾರ್ ಸುವರ್ಣದಲ್ಲಿ ಆಗಸ್ಟ್ 11 ರಿಂದ “ನೀ ಇರಲು ಜೊತೆಯಲ್ಲಿ” ಧಾರಾವಾಹಿ ಆರಂಭ - CineNewsKannada.com

ಸ್ಟಾರ್ ಸುವರ್ಣದಲ್ಲಿ ಆಗಸ್ಟ್ 11 ರಿಂದ “ನೀ ಇರಲು ಜೊತೆಯಲ್ಲಿ” ಧಾರಾವಾಹಿ ಆರಂಭ

ಕನ್ನಡ ಕಿರುತೆರೆ ವೀಕ್ಷಕರಿಗೆ ಸದಕಾಲ ವಿಭಿನ್ನತೆಯ ಕಾರ್ಯಕ್ರಮ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ “ನೀ ಇರಲು ಜೊತೆಯಲ್ಲಿ” ಎಂಬ ಹೊಸ ಧಾರಾವಾಹಿ ಪ್ರಸಾರ ಮಾಡಲು ಸಜ್ಜಾಗಿದೆ. ನಿರ್ದೇಶಕ ಧರಣಿ ಜಿ ರಮೇಶ್ ಈ ಧಾರಾವಾಹಿಗೆ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಹಿರಿಯ ನಟ ಮೋಹನ್ , ನಟಿ ರಜನಿ ಸೇರಿದಂತೆ ಧಾರಾವಾಹಿಯ ಹಲವು ಅನುಭವಿ ಕಲಾವಿದರದ ದಂಡು ಧಾರಾವಾಹಿಯಲ್ಲಿದ್ದು ವಿಭಿನ್ನ ಕಥೆಯನ್ನು ಜನರ ಮುಂದಿಡಲು ಮುಂದಾಗಿದ್ದಾರೆ

ಈ ವೇಳೆ ಮಾತಿಗಳಿದ ಧರಣಿ ಜಿ ರಮೇಶ್ ಮಾತನಾಡಿ ನಿರ್ದೇಶನ ಮಾಡಿಕೊಂಡಿದ್ದವನನ್ನು ನಿರ್ಮಾಣ ಮಾಡಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ವಾಹಿನಿ ನಾನ್ ಪಿಕ್ಷನ್ ಮುಖ್ಯಸ್ಥರಾದ ಶೋಭಾ ಅವರ ಸಹಕಾರದಿಂದ ಸಾಧ್ಯವಾಗಿದೆ, ಜೊತೆಗೆ ಕಲಾವಿದರ ಮೇಕಪ್ ನಿಂದ ಪ್ರತಿಯೊಂದು ಜವಾಬ್ದಾರಿಯನ್ನು ಸೂಕ್ಷವಾಗಿ ಗಮನಿಸುತ್ತಿದ್ದಾರೆ. ರಿಮೇಕ್ ಧಾರಾವಾಹಿ ಆಗಿರುವುದರಿಂದ ಸದ್ಯ ಅದರ ಕಥೆ, ಚಿತ್ರಕಥೆಯೊಂದಿದೆ. ಇಲ್ಲಿಯ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿದೆ. ಜನ ಇಷ್ಟಪಟ್ಟರೆ ಸಾವಿರ ಸಂಚಿಕೆಯನ್ನೂ ಮಾಡುವ ಉದ್ದೇಶವಿದೆ ಎಂದರು

ಹಿರಿಯ ಕಲಾವಿದ ಮೋಹನ್ ಮಾತನಾಡಿ ಸಿನಿಮಾದಲ್ಲಿ ನಿರ್ಮಾಣ ಮಾಡಿ ಕೈತುಂಬ ಸಾಲ ಮಾಡಿಕೊಂಡ ಸಮಯದಲ್ಲಿ ಕಷ್ಟಕಾಲದಲ್ಲಿ ಕೈ ಹಿಡಿದಿದ್ದು ಧಾರಾವಾಹಿ ಚಿತ್ರರಂಗ ಬದುಕು ನೀಡಿದರೆ ಧಾರಾವಾಹಿ ಉಸಿರು ನೀಡಿದೆ, ಮತ್ತೊಂದು ಧಾರಾವಾಹಿಯಲ್ಲಿ ಶಿಕ್ಷಣ ಸಚಿವನಾಗಿ ನಟಿಸುತ್ತಿದ್ದೇನೆ, ಈ ಧಾರಾವಾಹಿಯಲ್ಲಿ ಓದು ಬರಹ ಬರದ ಅನಕ್ಷರಸ್ಥ: ಮಗಳೇ ಆತನ ಸ್ವರ್ವಸ್ವ ಎಂದ ಅವರ ಸದ್ಯದಲ್ಲಿಯೇ ಸಿನಿಮಾನೂ ಮಾಡುತ್ತೇನೆ ಎಂದು ಪ್ರಕಟಿಸಿದರು

ಹಿರಿಯ ನಟಿ ರಜನಿ ಮಾತನಾಡಿ ಮುಗ್ದತೆಯ ಪಾತ್ರ ಮಾಡುತ್ತಿದ್ದೆ ತಮಗೆ ವಿಲನ್ ಪಾತ್ರ ನೀಡಿದ್ದಾರೆ. ಮನೆಯ ದೊಡ್ಡ ಸೊಸೆ, ಈಕೆಯದೇ ನಡೆಯಬೇಕು ಎನ್ನುವ ಹಠ, ಅದಕ್ಕೆ ಮೈದುನ ಅಡ್ಡಗಾಲು ಹಾಕುತ್ತಾನೆ. ಯಾಕೆ, ಈಕೆ ಈ ರೀತಿ ವರ್ತಿಸಲು ಕಾರಣವೂ ಇರತ್ತದೆ. ಅದು ಏನು ಎನ್ನುವುದನ್ನು ಧಾರಾವಾಹಿಯಲ್ಲಿ ನೋಡಬೇಕು, ಇತ್ತೀಚೆಗೆ ಹೆದರಿಸುವುದು ಮತ್ತು ಹೆದರಿಕೊಳ್ಳುವುದು ಹೆಚ್ಚು ಕ್ಲಿಕ್ ಆಗುತ್ತದೆ. ಇಲ್ಲಿಯ ತನಕ ಹೆದರಿಕೊಳ್ಳುತ್ತಿದ್ದ ಪಾತ್ರ ಮಾಡುತ್ತಿದ್ದೆ. ಈಗ ಹೆದರಿಸುವ ಪಾತ್ರ ಮಾಡುತ್ತಿದ್ದೇನೆ ಎಂದರು ಹೇಳಿದರು

ಧಾರಾವಾಹಿಯ ಕಥೆ ಏನು

ಮಾತಿನಲ್ಲಿ ತುಂಟತನವನ್ನೊಳಗೊಂಡ ಕಥಾನಾಯಕ ಕೃಷ್ಣನದ್ದು ಸ್ವಾತಂತ್ಯ ಹೋರಾಟಗಾರರ ಕುಟುಂಬ. ಕೆಲಸದಲ್ಲಿ ಜಾಣ್ಮೆ, ನಿಪುಣತೆ ಹೊಂದಿರುವ ಈತ, ತಂತ್ರದಲ್ಲಿ ಕಪಟಿಯಾಗಿದ್ದರೂ ಮಾಡಿದ ಸಹಾಯಕ್ಕೆ ಪ್ರತಿಫಲವನ್ನು ನಿರೀಕ್ಷಿಸದ ಅಧುನಿಕ ಯುಗದ ಶ್ರೀ ಕೃಷ್ಣ. ಆದರೆ ಈ ಕೃಷ್ಣನಿಗೆ ಪೂತನಿಯಂತೆ ಕಾಟ ಕೊಡೋಳು ಅತ್ತಿಗೆ ಊರ್ಮಿಳಾ ದಿವಾನ್. ನನ್ನದೇ ನಡಿಬೇಕು, ನನ್ನಿಂದಲೇ ಎಲ್ಲಾ ಎಂಬ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾ, ಅಹಂಕಾರವನ್ನೇ ಒಡವೆಯನ್ನಾಗಿಸಿಕೊಂಡು ಮನೆಮಂದಿಯನ್ನೆಲ್ಲಾ ತನ್ನ ಕೈಗೊಂಬೆಯಾಗಿಸಿರ್ತಾಳೆ.
.
ತಂದೆಯ ಮುದ್ದಿನ ಮಗಳು ಕಥಾನಾಯಕಿ ರಚನಾ ಪಟೇಲ್. ಓದಿನಲ್ಲಿ ಅತ್ಯಂತ ಪ್ರತಿಭಾವಂತೆ, ಯಾರನ್ನು ನೋಯಿಸದ ಮಾತೃ ಹೃದಯಿ. ಸೌಂದರ್ಯವನ್ನು ಮುಖದಲ್ಲಿ ಮಾತ್ರವಲ್ಲದೆ ನಡವಳಿಕೆಯಲ್ಲಿಯೂ ಒಗ್ಗೂಡಿಸಿರುವ ಈಕೆಗೆ, ಸಾಧನೆಯ ಶಿಖರವೇರಿರುವ ಊರ್ಮಿಳಾ ದಿವಾನೇ ಆದರ್ಶ. ಆಕೆಯಂತೆ ಏನನ್ನಾದರೂ ಸಾಧಿಸಬೇಕೆಂಬ ಛಲ ರಚನಾಳದ್ದು.

ಹೀಗೆ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾಗೆ ಮುಂದೆ ಕೃಷ್ಣ ತಕ್ಕ ಪಾಠ ಕಲಿಸ್ತಾನ, ತದ್ವಿರುದ್ಧ ಭಾವಗಳನ್ನು ಹೊಂದಿರುವ ಕೃಷ್ಣ,ರಚನಾ ಹೇಗೆ ಒಂದಾಗ್ತಾರೆ ರಚನಾಗೆ ಆದರ್ಶವಾಗಿರೋ ಊರ್ಮಿಳಾ, ತನ್ನನ್ನೇ ಎದುರಾಳಿಯಾಗಿ ನೋಡಿದ್ರೆ ಮುಂದೇನಾಗಬಹುದು ಎಂಬುದೇ ಮುಖ್ಯ ಕಥಾ ಹಂದರ.
.
ಕನ್ನಡ ಕಿರುತೆರೆಯಲ್ಲಿ ಸುವರ್ಣ ಇತಿಹಾಸ ಬರೆದಿರೋ “ಅಮೃತವರ್ಷಿಣಿ” ಧಾರಾವಾಹಿ ಖ್ಯಾತಿಯ ರಜಿನಿ, ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ಪರಿವಾರಕ್ಕೆ ಕಮ್ ಬ್ಯಾಕ್ ಆಗಿದ್ದು ಊರ್ಮಿಳಾ ದಿವಾನ್ ಎಂಬ ಮುಖ್ಯ ಖಳನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕನಾಗಿ ಪವನ್ ರವೀಂದ್ರ ಹಾಗು ನಾಯಕಿಯಾಗಿ ಸಲೋಮಿ ಡಿಸೋಜಾ ಬಣ್ಣ ಹಚ್ಚಿದ್ದಾರೆ. ಜೊತೆಗೆ ನಟ ಮೋಹನ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ನಟ-ನಟಿಯರು ಅಭಿನಯಿಸುತ್ತಿದ್ದಾರೆ.

ಮುದ್ದುಲಕ್ಷ್ಮಿ, ಮರಳಿ ಬಂದಳು ಸೀತೆ, ಮರಳಿ ಮನಸಾಗಿದೆ ಸೇರಿದಂತೆ ಇನ್ನೂ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿರುವ ಧರಣಿ ಜಿ.ರಮೇಶ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ “ನೀ ಇರಲು ಜೊತೆಯಲ್ಲಿ” ಧಾರಾವಾಹಿ ಮೂಡಿ ಬರಲಿದೆ. “ನೀ ಇರಲು ಜೊತೆಯಲ್ಲಿ” ಇದೇ ಆಗಸ್ಟ್ 11 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin