ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಶಾಂಭವಿ” ಕಿರುತೆರೆಗೆ ಪ್ರವೇಶಿಸಿದ ನಿರ್ದೇಶಕ ಸಿಂಪಲ್ ಸುನಿ
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಕನ್ನಡ ಚಿತ್ರರಂದಲ್ಲಿ ತಾವೊಬ್ಬ ಭರವಸೆಯ ನಿರ್ದೇಶಕ ಎನ್ನುವುದನ್ನು ಸಾಬೀತು ಮಾಡಿದ ಸಿಂಪಲ್ ಸುನಿ, “ಶಾಂಭವಿ” ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದ್ಧಾರೆ.
ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ ಶಾಂಭವಿ” ಇದೇ ಸೋಮವಾರದಿಂದ ಶನಿವಾರದವರಗೆ ರಾತ್ರಿ 7.30 ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿಯನ್ನು ಸಿಂಪಲ್ ಸುನಿ, ನಿರ್ದೇಶಿಸಿ ನಿರ್ಮಾಣ ಮಾಡುತ್ತಿರುವುದು ವಿಶೇಷ.
ಹೊಸ ಥರದ ಕಥೆಗಳ ಮೂಲಕ ಪುಟಾಣಿಗಳಿಂದ ವಯೋವೃದ್ಧರವರೆಗೆ ಜನಮನ ಗೆಲ್ಲುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಲ್ಲಿ ಸಹಜತೆ, ಕೌತುಕಗಳ ಜೊತೆ ಸೃಜನಾತ್ಮಕ ವಿಷಯಗಳಿಂದ ವೀಕ್ಷಕರಿಗೆ ರಸದೌತಣ ನೀಡುತ್ತಿವೆ. ಕನ್ಯಾದಾನ, ಆನಂದರಾಗ, ಅಣ್ಣತಂಗಿ, ಸೇವಂತಿ, ಜನನಿ, ರಾಧಿಕಾ, ಗೌರಿಪುರದ ಗಯ್ಯಾಳಿಗಳು ಇತ್ಯಾದಿ ಕೌಟುಂಬಿಕ ಧಾರವಾಹಿಗಳಿಂದ ವೀಕ್ಷಕರನ್ನು ರಂಜಿಸುತ್ತಿರುವ ಉದಯ ಟಿವಿ ಈಗ ವಿನೂತನ ಶೈಲಿಯ ಅದ್ಭುತ ನಿರೂಪಣೆಯ ಅದ್ದೂರಿ “ಶಾಂಭವಿ” ಎಂಬ ಹೊಸ ಕಥಾನಕವನ್ನು ನಿಮ್ಮ ಮುಂದೆ ತರಲು ಸಜ್ಜಾಗುತ್ತಿದೆ.
ಶಾಂಭವಿ ಮುದ್ದಾದ ಆರು ವರ್ಷದ ಮಗು. ಇವಳ ಅಮ್ಮ ಶಿವಗಾಮಿ ಸಾವಿರಾರು ಕೋಟಿ ಆಸ್ತಿಯ ಒಡತಿ. ಶ್ರೀ ಶಾಂಭವಿ ಶಿಕ್ಷಣ ಸಂಸ್ಥೆ ಜೊತೆ ಇನ್ನೂ ಹಲವು ಉದ್ಯಮಗಳಿವೆ. ಇವಳಿಗೊಬ್ಬ ಅಣ್ಣ ಹರಿಪ್ರಸಾದ್. ಅಣ್ಣತಂಗಿಗೆ ಅವರಿಬ್ಬರೇ ಪ್ರಪಂಚ. ನಾಯಕ ಅಶೋಕ ಅವರ ಸಂಸ್ಥೆಯಲ್ಲಿ ಶಿಕ್ಷಕನಾಗಿ ಸೇರುವುದರೊಂದಿಗೆ ಕಥೆ ತಿರುವು ಪಡೆದುಕೊಳ್ಳುತ್ತದೆ. ಅಶೋಕನ ಮನೆಯವರು ದುಡ್ಡಿಗಾಗಿ ಹಪಹಪಿಸುವ ಮಂದಿ. ಅವನ ಅಮ್ಮ ಮತ್ತು ತಮ್ಮಂದಿರು ತುಂಬಾ ಖತರ್ನಾಕ್.
ಎಂತೆಂಥ ಸಂಬಂಧ ಬಂದರೂ ಮದುವೆಗೆ ಒಪ್ಪದಿದ್ದ ಶಿವಗಾಮಿ ಮಧ್ಯಮ ವರ್ಗದ ಅಶೋಕ್ ಪ್ರೀತಿಯಲ್ಲಿ ಬೀಳುತ್ತಾಳೆ. ಅವನ ಹಿಂದಿನ ಷಡ್ಯಂತ್ರದ ಬಲೆಯಲ್ಲಿ ಸಿಲುಕಿಕೊಳ್ಳುತ್ತಾಳೆ. ಮದುವೆಯೂ ಆಗುತ್ತದೆ. ಅವರಿಗೆ ಹುಟ್ಟಿದ ಮಗುವೇ ಶಾಂಭವಿ. ಮುಂದೆ ಒಂದು ದಿನ ಶಾಂಭವಿ ಕಾಣೆಯಾಗುತ್ತಾಳೆ. ಶಿವಗಾಮಿ ಹುಚ್ಚಿಯಾಗುತ್ತಾಳೆ. ಅದೇ ಸಮಯಕ್ಕೆ ಒಂದು ದೇವಿಯ ಪ್ರತಿಷ್ಠಾಪೆ ಆಗುತ್ತದೆ. ಕಾಣೆಯಾದ ಶಾಂಭವಿಗೂ ಈ ದೇವಿ ಇರುವ ಜಾಗಕ್ಕೂ ಸಂಬಂಧವಿದೆ. ಒಂದು ದಿನ ಶಾಂಭವಿ ಇನ್ನು ಮರಳಿ ಬರುವುದಿಲ್ಲ ಎಂದೇ ನಂಬಿದ್ದ ದುಷ್ಟಪಡೆಗೆ ಚಳ್ಳೆಹಣ್ಣು ತಿನ್ನಿಸಲು ಪುಟ್ಟ ಶಾಂಭವಿ ಮರಳಿ ಬರುತ್ತಾಳೆ. ಅವರ ಪಾಲಿಗೆ ಕಾಡುವ ದೆವ್ವವಾಗಿ, ಒಳ್ಳೆಯವರ ಪಾಲಿಗೆ ದೇವತೆಯಾಗಿ.
ಸುನಿ ಸಿನಿಮಾಸ್ ಸಂಸ್ಥೆಯ ಅಡಿಯಲ್ಲಿ “ಶಾಂಭವಿ” ನಿರ್ಮಾಣವಾಗುತ್ತಿದೆ. ಙಃಖ ಮನು ಛಾಯಾಗ್ರಹಣ, ಪರಂ ಅವರ ಸಂಕಲನವಿದೆ,ಜಗದೀಶ್ ದೊಡ್ಡೇರಿ ಸಹ-ನಿರ್ದೇಶನ ಪುಗಳ್ಮಣಿ ಅವರ ಕಥೆ ಚಿತ್ರಕಥೆ, ರಾಧಾ ವೆಂಕಟ್ರವರ ಸಂಭಾಷಣೆಯಿದೆ.ಶಿವಕುಮಾರ್ ಕ್ಯಾಶಿಯರ್, ಕವಿ ಡಾ.ನಾಗೇಂದ್ರ ಪ್ರಸಾದ್ ಸಂಗೀತ ಮತ್ತು ಸಾಹಿತ್ಯದ ಜವಾಬ್ದಾರಿ ಹೊತ್ತಿದ್ದಾರೆ.ಅಶೋಕ್ ನಿರ್ಮಾಣ-ನೀರ್ವಹಣೆ ಮತ್ತು ಚಂದ್ರಹಾಸ್ ಪೆÇ್ರೀಡಕ್ಷನ್ ಕಂಟ್ರೋಲ್ ಮಾಡಿತ್ತಿದ್ದಾರೆ.
ಶಾಂಭವಿಯ ಪಾತ್ರವನ್ನು ಬೇಬಿ ರಚನಾ ಟಿ.ಬಿ ನೀರ್ವಹಿಸುತ್ತಿದ್ದಾರೆ; ಪ್ರಮುಖ ಪಾತ್ರದಲ್ಲಿ ಐಶ್ವರ್ಯ ಸಿಂಧೋಗಿ, ಹರೀಶ್ ಟಿವಿ, ವಿನಯ ಗೌಡ, ಅಂಬುಜಾಕ್ಷಿ ನಟಿಸಿದರೆ ಪೂಜಿತಾ, ಡಾಲಿ ರಾಜೇಶ್, ಸೂರ್ಯ ಕುಂದಾಪುರ, ರೋಹಿತ್ ನಾಯರ್ ,ಶ್ಯಾಮಲಮ್ಮ ಮುಂತಾದವರ ಸಹತಾರಾಗಣವಿದೆ.
ಪುಟ್ಟ ಹುಡುಗಿಯಾಗಿ ಬಂದು ದೆವ್ವವಾಗಿ ದುಷ್ಟರನ್ನು ಶಿಕ್ಷಿಸುವ, ದೇವತೆಯಾಗಿ ಶಿಷ್ಟರನ್ನು ರಕ್ಷಿಸುವ “ಶಾಂಭವಿ” ಧಾರಾವಾಹಿ ಸೆಪ್ಟೆಂಬರ್ 11ರಿಂದ, ಸೋಮವಾರದಿಂದ ಕಿರುತೆರೆಯ ಮೂಲಕ ಮನೆ ಮನೆಗೆ ಬರಲು ಸಜ್ಜಾಗಿದ್ದಾಳೆ.