ಉತ್ತರ ಕರ್ನಾಟಕದ ಕಥೆ ಹೇಳುವ ” ರಾಕ್ಷಸ ” ಫೆಬ್ರವರಿ 20 ರಿಂದ ಪ್ರಸಾರ
ಉತ್ತರ ಕರ್ನಾಟಕದ ಕಥೆ ಆಧರಿಸಿದ ಮೊಟ್ಟ ಮೊದಲ ವೆಬ್ ಸೀರೀಸ್” ರಾಕ್ಷಸ” ಪೆಬ್ರವರಿ 20 ರಿಂದ ಜೀ 5 ನಲ್ಲಿ ಪ್ರಸಾರ ಆಗಲಿದೆ. ನಿರ್ಮಾಪಕ ತರುಣ್ ಸುಧೀರ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದು ನಟ ವಿಜಯ್ ರಾಘವೇಂದ್ರ ಮತ್ತು ನಟಿ ಮಯೂರಿ ಮೊದಲ ಬಾರಿಗೆ ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. 7 ಎಪಿಸೋಡ್ ಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು ಪ್ರತಿ ಎಪಿಸೋಡ್ 20 ರಿಂದ 22 ನಿಮಿಷದ ಅವಧಿ ಪ್ರತಿ ವೆವ್ ಸೀರೀಸ್ ಅವಧಿ ಹೊಂದಿದೆ

ನಿರ್ಮಾಪಕ ತರುಣ್ ಸುದೀರ್ ಮಾತನಾಡಿ , ಒಂದು ವರ್ಷದ ಅವಧಿಯಲ್ಲಿ ಜೀ 5 ನಾಲ್ಕು ವೆಬ್ ಸೀರೀಸ್ ಮಾಡಿರುವುದು ಉತ್ತಮ ಬೆಳವಣಿಗೆ. ವೆಬ್ ಸಿರೀಸ್ ಮಾಡಲು ವೇದಿಕೆ ಬೇಕು. ಆಗ ಸಿಕ್ಕಿದ್ದೇ ಜೀ 5 . ರಾಕ್ಷಸ ವೆಬ್ ಸೀರೀಸ್ ಬಗ್ಗೆ ಪ್ರದೀಪ್ ಚರ್ಚೆ ಮಾಡಿದ್ದರು. ಸುಹಾನ್ ಹೇಳಿದ ಕಥೆ ಇಷ್ಟವಾಯಿತು. ಉತ್ತರ ಕರ್ನಾಟಕದ ಬಗ್ಗೆ ಮಾಡಲು ಪ್ರೀತಿ ಅಭಿಮಾನ. ನಮ್ಮ ಕುಟುಂಬಕ್ಕೆ ಉತ್ತರ ಕರ್ನಾಟಕ ತೋರಿಸಿದ ಪ್ರೀತಿಗೆ ನಮ್ಮ ಕೊಡುಗೆ ಇದು ಬಹುತೇಕ ಕಲಾವಿದರು ಉತ್ತರ ಕರ್ನಾಟಕದವರು ಸವದತ್ತಿಯಲ್ಲಿ ಚಿತ್ರೀಕರಣ ಮಾಡುವುದು ಸುಲಭವಲ್ಲಿ ತಮ್ಮ ತಂಡ ಉತ್ತಮವಾಗಿ ಕೆಲಸಮಾಡಿದ್ದಾರೆ ಎಂದರು..
30 ರಿಂದ 32 ದಿನ. ವೆಬ್ ಸೀರೀಸ್ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಕಾಲ್ ಶೀಟ್ ಹೆಚ್ಚಾಗಿದೆ , ಸಿನಿಮಾ ರೀತಿಯೇ ಚಿತ್ರೀಕರಣ ಮಾಡಲಾಗಿದೆ ಮಾಹಿತಿ ಹಂಚಿಕೊಂಡರು.
ನಟ ವಿಜಯ್ ರಾಘವೇಂದ್ರ ಮಾತನಾಡಿ ಮೊದಲ ಬಾರಿಗೆ ವೆಬ್ ಸೀರೀಸ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಉತ್ತರ ಕರ್ನಾಟಕದ ಭಾಷೆಯಲ್ಲಿ ಅವರ ಜೀವನದ ಕಥೆ ಮಾಡಬೇಕು ಎಂದು ಸವದತ್ತಿ ಎಲ್ಲಮ್ಮನ ಬಳಿ ಕೇಳಿಕೊಂಡಿದ್ದೆ. ಅದು ವೆಬ್ ಸೀರೀಸ್ ಮೂಲಕ ಬಂದಿದೆ. ಯಾವುದೇ ಕೆಲಸ ಮಾಡಿದರೂ ಮನುಷ್ಯ ಸಹಜ ಎಲ್ಲರಲ್ಲಿಯೂ ಕಾಡುತ್ತಿರುತ್ತದೆ. ಕಥೆ ಹೇಳುವಾಗ ನಿರ್ದೇಶಕರು ಕುತೂಹಲ ಹುಟ್ಟಿಸಿದ್ದರು ಎಂದರು
ವೆಬ್ ಸೀರೀಸ್ ನಲ್ಲಿ ಅಭಿಜಿತ್, ಅವಿನಾಶ್, ಜಹಂಗೀರ್, ಅಪ್ಪಣ್ಣ ಮಯೂರಿ ಸೇರಿದಂತೆ ಹಲವರ ಜೊತೆ ಕೆಲಸ ಮಾಡಿದ್ದು ಖುಷಿಯಾಗಿದೆ. ಖಾಕಿ ಮತ್ತು ಕೇಸ್ ನ ಸುತ್ತಲೇ ಪಾತ್ರ ಬರುತ್ತಿದೆ. ಸೀತಾರಾಮ್ ಬಿನೋಯ್ ಕೇಸ್ ಚಿತ್ರದಿಂದ ಪೊಲೀಸ್ ಪಾತ್ರಗಳೇ ಹೆಚ್ಚಾಗಿ ಬರುತ್ತಿವೆ. ನಾನು ಯಾವುದೇ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಪಾತ್ರಗಳೇ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಹನುಮಪ್ಪ ಪಾತ್ರದ ಸುತ್ರಲೇ ಕಥೆ ಸಾಗಿದೆ. ಉತ್ತರ ಕರ್ನಾಟಕ ಭಾಷೆಯ ಕಲಿತು ಮಾತನಾಡಿದ್ದೇನೆ. ಇದರಿಂದ ಆ ಜನ ಮತ್ತಷ್ಟು ಕನೆಕ್ಟ್ ಆಗಲಿದ್ದಾರೆ. ಕೆಲಸ ಮಾಡುತ್ತಿರಬೇಕು ಎನ್ನುವುದರಿಂದ ವೆನ್ ಸೀರೀಸ್ ಗೆ ಬಂದಿದ್ದೇನೆ ಎಂದರು.

ನಟಿ ಮಯೂರಿ ಮಾತನಾಡಿ ಹುಬ್ಬಳ್ಳಿ ಹುಡುಗಿ, ಮೊದಲ ವೆಬ್ ಸೀರೀಸ್. ಅದ್ಬುತ ಕಲಾವಿದರಿದ್ದಾರೆ. ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಜೊತೆ ಕೆಲಸ ಮಾಡುವ ಕನಸು ಈಗ ನನಸಾಗಿದೆ. ಜ್ಯೋತಿ ಎನ್ನುವ ಪಾತ್ರ ಮಾಡಿದ್ದೇನೆ. ಯಶಸ್ಸಿಗೆ ಎಲ್ಲರ ಸಹಕಾರವಿರಲಿ ನಮ್ಮ ಊರಿನ ಭಾಷೆಯಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಖುಷಿಯ ವಿಷಯ ಎಂದರು ಹೇಳಿದರು
ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ ಜೀ 5 ಕನ್ನಡದ ಮೂಲಕ, ನಮ್ಮ ಭಾಣೆ ನಮ್ಮ ಕಥೆಗಳನ್ನು ಜನರ ಮುಂದೆ ತರಲಾಗುತ್ತಿದೆ. ಕಥೆ ಪಕ್ಕದ ಮನೆ, ಊರಿನಲ್ಲಿ ನಡೆಯುವ ಕಥೆ ಆಗಿರಬಹುದು ಅನ್ನು ಬ್ಲೆಂಡ್ ಮಾಡಿ ಕಥೆಯನ್ನು ಮುಂದಿಟ್ಟುಕೊಂಡು ಮಾಡಲಾಗುತ್ತದೆ. ಕನ್ನಡ ಜೀ 5 ಈ ವರೆಗೆ 4 ಕಥೆಗಳನ್ನು ಜನರ ಮುಂದಿಡಲಾಗಿದೆ.ಸಿನಿಮಾ, ಸೀರಿಯಲ್ ನಡುವೆ ವೆಬ್ ಸೀರೀಸ್ ತರುವುದು ಕೂಡ ಸವಾಲಿನ ಕೆಲಸ . ಒಂದು ವರ್ಷದ ಅವಧಿಯಲ್ಲಿ ವಿಭಿನ್ನ ಕಥೆಯನ್ನು ಜನರಿಗರ ತಲುಪಿಸಿದ್ದೇವೆ. ಪ್ರತಿ ತಿಂಗಳು ಹೊಸತನದ ಕಥೆಯನ್ನು ನೀಡುವ ಉದ್ದೇಶಹೊಂದಲಾಗಿದೆ. ಉತ್ತರ ಕರ್ನಾಟಕದ ಕಥೆಯನ್ನು ಆಯ್ಕೆ ಮಾಡಲಾಗಿದೆ ಎಲ್ಲರ ಸಹಕಾರ ಇರಲಿ.ಏಪ್ರಿಲ್‌ನಿಂದ ಮತ್ತಷ್ಟು ಹೊಸ ಕಥೆಗಳು ಬರಲಿವೆ 7 ಎಪಿಸೋಡ್ ಕಥೆಗಳಿವೆ. ಪ್ರತಿ ಎಪಿಸೋಡ್ 20 ರಿಂದ 25 ನಿಮಿಷದ ಕಥೆ ಹೊಂದಿದೆ ಎಂದರು.

ನಿರ್ದೇಶಕ ಸುಹಾಸ್ ಮಾತನಾಡಿ ವೆಬ್ ಸೀರೀಸ್ ಫಾರ್ಮಾಟ್ ಭಿನ್ನವಾಗಿದೆ. ಕಥೆ ಮಾಡಿಕೊಂಡು ಸೀಟಿನ ತುದಿಯಲ್ಲಿ ಪ್ರೇಕ್ಷಕರು ನೋಡುವಂತೆ ಮಾಡಿದ್ದೇವೆ. ಉತ್ತರ ಕರ್ನಾಟಕದ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ನಿರ್ಮಾಪಕ ತರುಣ್ ಸುಧೀರ್ ಅವರ ಉತ್ತರ ಕರ್ನಾಟಕದ ಕಥೆ ಹೇಳಲು ಸೂಚಿಸಿದರು.ಅದರಂತೆ ರಾಕ್ಷಸ ವೆಬ್ ಸೀರೀಸ್ ಅನ್ನು ಪ್ರೇಕ್ಷಕರ ಮುಂದೆ ಇದೇ 20 ರಿಂದ ಜನರ ಮುಂದೆ ಇಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು
ಹಿರಿಯ ನಟ ಅಭಿಜಿತ್ ಮಾತನಾಡಿ ಡಿಸಿಪಿ ರುದ್ರಯ್ಯ ಪಾತ್ರ . ಪೇಮೆಂಟ್ ವಿಷಯದಲ್ಲಿ ನಿರ್ಮಾಪಕ ತರುಣ್ ಸುಧೀರ್ ಅವರ ಮೇಲಿನ ಪ್ರೀತಿಯಿಂದ ಮಾಡಿದ್ದೇನೆ. ನಿರ್ದೇಶಕ ಸುಹಾನ್ ಏನು ಬೇಕು ಅದನ್ನೇ ಮಾಡಿಕೊಳ್ಳುತ್ತಾರೆ. ಉತ್ತಮ ಕೆಲಸ ತೆಗೆಸಿದ್ದಾರೆ. ಸವದತ್ತಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ. ನಟ ವಿಜಯ್ ರಾಘವೇಂದ್ರ ಅವರನ್ನು ನೋಡಿಕೊಂಡು ಬೆಳದಿದ್ದೇನೆ . ಜೀ ಕನ್ನಡ ಕಷ್ಟದ ಸಮಯದಲ್ಲಿ ಕೈ ಹಿಡಿದಿದೆ ಎಂದರು

ಜೀ 5 ಮುಖ್ಯಸ್ಥ ಪ್ರದೀಪ್ ಮಾತನಾಡಿ ಎಲ್ಲರ ಕೈನಲ್ಲಿ ಮೊಬೈಲ್ ಇರುವುದರಿಂದ ಆಗ ಹೊಳೆದಿದ್ದೇ ವೆಬ್ ಸೀರಿಸ್. ಪ್ರತಿ ಊರರಲ್ಲಿ ಒಂದೊಂದು ಕಥೆ ಇದೆ. ಅದನ್ನು ಪ್ರೇಕ್ಣಕರ ಮುಂದೆ ಇಡುವ ಪ್ರಯತ್ನ ಮಾಡಲಾಗಿದೆ. ನಟ ವಿಜಯ್ ರಾಘವೇಂದ್ರ ವೆಬ್ ಸೀರೀಸ್ ಗೆ ಬಂದ ಹಿನ್ನೆಲೆಯಲ್ಲಿ ರೋಚಕ ಕಥೆ ಇದೆ ಎಂದರು


