Ram Ji, the wizard of the television world ``Rani'' to the audience in a chariot

ಕಿರುತೆರೆ ಲೋಕದ ಮಾಂತ್ರಿಕ ರಾಮ್ ಜಿ ಸಾರಥ್ಯದಲ್ಲಿ ಪ್ರೇಕ್ಷಕರ ಮನೆಗೆ `ರಾಣಿ’ - CineNewsKannada.com

ಕಿರುತೆರೆ ಲೋಕದ ಮಾಂತ್ರಿಕ ರಾಮ್ ಜಿ ಸಾರಥ್ಯದಲ್ಲಿ ಪ್ರೇಕ್ಷಕರ ಮನೆಗೆ `ರಾಣಿ’

ಕಿರುತೆರೆಯಲ್ಲಿ ದೊಡ್ಡ ಹೆಸರು ರಾಮ್ ಜಿ. ನಿರ್ದೇಶಕರಾಗಿ ನಿರ್ಮಾಪಕರಾಗಿ ನೂರಾರು ಕಲಾವಿದರು, ತಂತ್ರಜ್ಞರಿಗೆ ಕಲಾ ಬದುಕಿನಲ್ಲಿ ಬದುಕು ಕಟ್ಟಿಕೊಳ್ಳಲು ದಾರಿಯಾದವರು. ಇದೀಗ ರಾಮ್ ಜೀ, ಅವರ ಸಾರಥ್ರ್ಯದಲ್ಲಿ ಹೊಸ ಧಾರಾವಾಹಿ ಪ್ರೇಕ್ಷಕರ ಮನೆಗೆ ಬರುತ್ತಿದೆ “ರಾಣಿ” ಯಾಗಿ. ಜನ ಸ್ವೀಕಾರ ಮಾಡುತ್ತಾರೆ ಎನ್ನುವ ವಿಶ್ವಾಸವೂ ಇದೆ.

ಕಳೆದ 15 ವರ್ಷಗಳಿಂದ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ಹೊಸದೊಂದು ಧಾರವಾಹಿ ಪ್ರಾರಂಭಿಸುತ್ತಿದೆ. ಹೌದು ಈಗಾಗಲೇ ಸಾಕಷ್ಟು ಒಳ್ಳೆಯ ಸೀರಿಯಲ್‍ಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿರುವ ಸ್ಟಾರ್ ಸುವರ್ಣ ಈಗ ಮತ್ತೊಂದು ಸುಂದರ ಧಾರಾವಾಹಿಯನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಆ ಸೀರಿಯಲ್ ಹೆಸರೇ ರಾಣಿ'. ಇದೇ ಏಪ್ರಿಲ್ 3ರಿಂದ ಸೋಮವಾರದಿಂದ ಶನಿವಾರದ ತನಕ ಸಂಜೆ 6.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ವೇಳೆ ಮಾತಿಗಿಳಿದರಾಣಿ ಸೀರಿಯಲ್‍ಗೆ ಕಥೆ ಬರೆದು ನಿರ್ಮಾಣ ಮಾಡಿರುವ ನಿರ್ಮಾಪಕ ರಾಮ್ ಜೀ ,ನನ್ನ ಇಷ್ಟು ಸೀರಿಯಲ್ ಕಥೆಗಳಲ್ಲಿ ರಾಣಿ' ತುಂಬಾ ಇಷ್ಟ ಪಟ್ಟು ಬರೆದಂತ ಕಥೆ. ಇದಕ್ಕಾಗಿ ನಮ್ಮ ತಂಡ ತುಂಬಾನೇ ಶ್ರಮವಹಿಸಿ ಕೆಲಸ ಮಾಡುತ್ತಿದ್ದು, ವಿಶೇಷತೆಗಳಿಂದ ಕೂಡಿರಲಿದೆ. ಒಂದಿಷ್ಟು ಸಿನಿಮಾಗಳ ಪ್ರೇರಣೆಯಿಂದ ಈ ಕಥೆಗೆ ಪಾತ್ರಗಳನ್ನು ತೆಗೆದುಕೊಳ್ಳಲಾಗಿದೆ. ಈ ಕಥೆಯಲ್ಲಿ ನಾಯಕಿಗೆ ಕಿವಿ ಕೇಳುವುದಿಲ್ಲ, ಹಾಗಾಗಿ ನಾವು ಸೀರಿಯಲ್ ಪ್ರಸಾರವಾಗುವಾಗ ಚಿಕ್ಕ ಬಾಕ್ಸ್ನಲ್ಲಿ ಶ್ರವಣ ದೋಷ ಇದ್ದವರಿಗೆ ಅರ್ಥವಾಗುವಂತೆ ಹಾವ ಭಾವದ ಮೂಲಕ ಕೂಡ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.ರಾಣಿ’ಯಲ್ಲಿ ಚರಿ ಪಾತ್ರ ವಿಶೇಷವಾಗಿ ಬರಲಿದೆ. ನಾನು ಈ ಮೊದಲು ಸೋಸೆ',ಗೀತಾ’, `ರಾಮಾಚಾರಿ’ ಮುಂತಾದ ಸೀರಿಯಲ್‍ಗಳಿಗೆ ಕಥೆ ಬರೆದು ನಿರ್ಮಾಣ ಮಾಡಿದ್ದೇನೆ’ ಎಂದರು.

ನಿರ್ದೇಶಕ ಪ್ರಶಾಂತ್ ಮಾತನಾಡಿ, ನಿರ್ಮಾಪಕರು ಹೇಳಿದಂತೆ ಶೂಟಿಂಗ್ ಮಾಡಲಾಗುತ್ತಿದೆ. ನಾನು ಈ ಮೊದಲುಮುದ್ದು ಲಕ್ಷ್ಮೀ’, ಗೀತಾ',ರಾಮಾಚಾರಿ’ ಸೀರಿಯಲ್‍ಗಳಿಗೆ ಕೆಲಸ ಮಾಡಿದ್ದು ಈಗ ಹೊಸ ಅನುಭವದಿಂದ ರಾಣಿಯನ್ನು ನಿರ್ದೇಶಿಸುತ್ತಿದ್ದೇನೆ’ ಎನ್ನುವರು.

ರಾಣಿ ಪಾತ್ರದಾರಿ ಚಂದನ ಎಂ. ರಾವ್ ನಂಗೆ ನಟಿ ಆಗೋದು ಚಿಕ್ಕ ವಯಸ್ಸಿನ ಕನಸು. ಅದು ಇಡೇರಿದೆ. ಈ ವಾಹಿನಿಯಲ್ಲಿಯೇ ಈ ಮೊದಲುಆಕಾಶ ದೀಪ’ ಸೀರಿಯಲ್ ಮಾಡಿದ್ದೆ. ಈ `ರಾಣಿ’ ಪಾತ್ರ ಮಾಡೋದು ನಂಗೆ ಚಾಲೆಂಜ್ ಆಗಿತ್ತು. ಯಾಕಂದ್ರೆ ನಂಗೆ ಪ್ರಾಣಿ ಕಂಡ್ರೆ ಭಯ ಇದರಲ್ಲಿ ಕುರಿ ಜೊತೆ ನಟಿಸಬೇಕಿತ್ತು. ಹಾಗೂ ರಾಣಿ ಹಳ್ಳಿ ಹುಡುಗಿ ನಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು. ಹಾಗಾಗಿ ಈ ಪಾತ್ರಕ್ಕೆ ತಯಾರಿ ಮಾಡಿಕೊಂಡು ಮಾಡಲಾಗುತ್ತಿದ್ದು, ಇದಕ್ಕೆ ತಂಡದ ಸಪೋರ್ಟ್ ತುಂಬಾ ಇದೆ’ ಎನ್ನುವ ಮಾಹಿತಿ ಹಂಚಿಕೊಂಡರು.

ಅಂದ ಹಾಗೆ ಈ ಧಾರಾವಾಹಿಯಲ್ಲಿ ನಾಯಕನಾಗಿ ಅರ್ಜುನ ಪಾತ್ರ ನಿರ್ವಯಿಸಿದ್ದಾರೆ ಪ್ರವೀಣ್ ಅಥರ್ವ. ನಾಯಕನ ತಾಯಿ ಪಾತ್ರಕ್ಕೆ ಸ್ವಾತಿ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮಾನಸ. ಇವರೇಲ್ಲಾ ವೇದಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡರು.

ಬಾನಿಜಿ ಏಷಿಯಾ ಸಂಸ್ಥೆ ನಿರ್ಮಿಸುತ್ತಿರುವ `ರಾಣಿ’ ಹಳ್ಳಿಯಲ್ಲಿ ಬೆಳೆದ ಹುಡುಗಿಯ ಕಥೆ ಒಳಗೊಂಡಿದೆ. ತನ್ನೊಂದಿಗಿರುವ ಕುರಿ ಮರಿ ಚೆರ್ರಿ ಅಂದ್ರೆ ರಾಣಿಗೆ ಪಂಚಪ್ರಾಣ. ತಂದೆಯ ಪೋಷಣೆಯಲ್ಲಿ ಬೆಳೆದಿರುವ ಈಕೆ ಚಿಕ್ಕಂದಿನಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಿಂದಾಗಿ ತನ್ನ ತಾಯಿ ಹಾಗೂ ಅಣ್ಣನನ್ನು ಕಳೆದುಕೊಂಡಿರುತ್ತಾಳೆ. ಈಕೆಯ ಮಾತು ಸಿಡಿಲಿನಂತಾಗಿದ್ರು ಮನಸು ಮಾತ್ರ ತಾಯಿಯ ಮಡಿಲಿನಂತೆ.

ಇಂತಹ ಮುದ್ದು ಮೊಗದ ಚಲುವೆಗೆ ದೇವರು ಕೊಟ್ಟ ಶಾಪ ಅಂದ್ರೆ ಶ್ರವಣ ದೋಷ ಇರುವುದು. ತಾಯಿ, ಅಣ್ಣನ ಜೊತೆ ರಾಣಿ ತನ್ನ ಕಿವಿಯನ್ನು ಕಳೆದುಕೊಂಡಿರುತ್ತಾಳೆ. ಈ ಘಟನೆಗೆ ಕಾರಣವಾದವರನ್ನು ಸುಮ್ಮನೆ ಬಿಡಲ್ಲ ಎಂಬ ಪಣ ತೊಟ್ಟಿರುತ್ತಾಳೆ ರಾಣಿ. ಇತ್ತ ಕಥಾ ನಾಯಕ ಅರ್ಜುನ್‍ಗೆ ತಾಯಿ ಅಂದ್ರೆ ಜೀವ. ಅಮ್ಮನ ಮಾತು ಅಂದ್ರೆ ವೇದವಾಕ್ಯ. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಬಂದಿದ್ರು ಈತನಿಗೆ ಹಳ್ಳಿಯಲ್ಲಿರುವ ಹುಡುಗಿ ರಾಣಿಯ ಮೇಲೆ ಪ್ರೇಮವಾಗುತ್ತದೆ. ಆದರೆ ಅರ್ಜುನ್ ತಾಯಿ ಸೌದಾಮಿನಿಗೆ ರಾಣಿಯ ಮೇಲೆ ದ್ವೇಷವಿದೆ. ಇಂತ ಸಂದರ್ಭದಲ್ಲಿ ಅರ್ಜುನ್ ಪ್ರೀತಿ ಏನಾಗುತ್ತೆ, ಅಂದು ನಡೆದ ಘಟನೆಗೆ ಯಾರು ಕಾರಣ, ರಾಣಿಯ ಶ್ರವಣ ದೋಷ ಇದೆ ಎಂಬುದು ಅರ್ಜುನ್‍ಗೆ ಗೊತ್ತಾದ್ರೆ ಮುಂದೇನು ಎಂಬುದಕ್ಕೆ ಸೀರಿಯಲ್ ನೋಡಲೇ ಬೇಕು.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin