Rapper Chandan Shetty is saying "What to do mama" for the new year

ಹೊಸವರ್ಷಕ್ಕೆ “ ವಾಟು ಟು ಡು ಮಾಮ” ಎನ್ನುತ್ತಿದ್ದಾರೆ ರಾಪರ್ ಚಂದನ್ ಶೆಟ್ಟಿ - CineNewsKannada.com

ಹೊಸವರ್ಷಕ್ಕೆ “ ವಾಟು ಟು ಡು ಮಾಮ” ಎನ್ನುತ್ತಿದ್ದಾರೆ ರಾಪರ್ ಚಂದನ್ ಶೆಟ್ಟಿ

ರಾಪರ್, ಸಂಗೀತ ನಿರ್ದೇಶಕ ಹಾಗು ನಟ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಹೊಸತನದ ಹಾಡು ನೀಡುತ್ತಿದ್ದು ಈ ಬಾರಿ ಹಿರಿಯ ಕಲಾವಿದ ರಂಗಾಯಣ ರಘು ಜತೆಗೂಡಿ “ ವಾಟು ಟು ಡು ಮಾಮ” ಎನ್ನುತ್ತಿದ್ದಾರೆ. ಈ ಅದ್ದೂರಿ ಟಪಂಗುಚಿ ಸಾಂಗ್ ಗೆ ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಿದ್ದಾರೆ ಖ್ಯಾತ ನಟ ರಂಗಾಯಣ ರಘು ಹಾಗೂ “ಗಿಚ್ಚಿ ಗಿಲಿಗಲಿ” ಯ ಕಲಾವಿದರು .

ಕರ್ನಾಟಕದ ಜನಪ್ರಿಯ ರಾಪರ್ ಚಂದನ್ ಶೆಟ್ಟಿ ಅಪಾರ ಅಭಿಮಾನಿ ಸಮೂಹವನ್ನು ಹೊಂದಿದ್ದಾರೆ. ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆಯಲ್ಲಿ ಚಂದನ್ ಶೆಟ್ಟಿ ಒಂದಲ್ಲಾ ಒಂದು ಸುಪ್ರಸಿದ್ದ ಹಾಡನ್ನು ಬಿಡುಗಡೆ ಮಾಡುತ್ತಲೇ ಬಂದಿದ್ದಾರೆ. ಡಿಸೆಂಬರ್ ತಿಂಗಳಲೇ ಬಿಡುಗಡೆಯಾಗುವ ಚಂದನ್ ಶೆಟ್ಟಿ ಅವರ ಹಾಡಿಗಾಗಿ ಕಾಯುವ ಅಭಿಮಾನಿಗಳ ದೊಡ್ಡ ದಂಡೇ ಇದೆ.

ಈ ಬಾರಿ ಕೂಡ ಚಂದನ್ ಶೆಟ್ಟಿ, ಇದೀಗ “ವಾಟು ಟು ಡು ಮಾಮ” ಎಂಬ ಅಪ್ಪಟ್ಟ ದೇಸಿ ಶೈಲಿಯ ಟಪಂಗುಚಿ ಹಾಡನ್ನು ಈ ವರ್ಷದ ಕೊನೆಗೆ ಬಿಡುಗಡೆ ಮಾಡಿದ್ದಾರೆ ತಮ್ಮದೇ ಆದ ಯೂಟ್ಯೂಬ್ ಚಾನಲ್ ನಲ್ಲಿ.

ಈ ಹಾಡು ಹದಿಹರೆಯದ ಹುಡುಗರಿಗೆ ಹೇಳಿ ಮಾಡಿಸಿದ ಹಾಡು. ಹುಡುಗರ “ಪ್ರಾಬ್ಲಮ್”ಗಳನ್ನು ಬಿಂಬಿಸುವ ಹಾಡಿದು. “ಪ್ರಾಬ್ಲಮ್ ಪ್ರಾಬ್ಲಮ್ ಪ್ರಾಬ್ಲಮ್ ವಾಟ್ ಟು ಡು ಮಾಮ” ಎಂದೇ ಹಾಡು ಆರಂಭವಾಗುತ್ತದೆ. ಇಷ್ಟು ದಿನ ಬಿಡುಗಡೆಯಾಗಿರುವ ಚಂದನ್ ಶೆಟ್ಟಿ ಅವರ ರಾಪ್ ಸಾಂಗ್ಸ್ ಹೆಚ್ಚಾಗಿ ಪಬ್ ಗಳ ಮೇಲೆ ಕೇಂದ್ರಿಕೃತವಾಗಿತ್ತಿತ್ತು..ಆದರೆ ಈ ಹಾಡು ಪಕ್ಕಾ ಲೋಕಲ್ ಸ್ಟೈಲ್ ನಲ್ಲಿ ಮೂಡಿಬಂದಿದೆ.

ಕಂಠೀರವ ಸ್ಟುಡಿಯೋದಲ್ಲಿ ಬಾರ್ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಚಂದನ್ ಶೆಟ್ಟಿ ಈ ಹಾಡಿನಲ್ಲಿ ಪಕ್ಕಾ ಲೋಕಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟ ರಂಗಾಯಣ ರಘು ಅವರು ಚಂದನ್ ಶೆಟ್ಟಿ ಅವರ ಸೋದರಮಾವನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ “ಗಿಚ್ಚಿ ಗಿಲಿಗಿಲಿ”ಯ ಕಲಾವಿದರಾದ ರಾಘವೇಂದ್ರ, ಆರ್ ಜೆ ವಿಕ್ಕಿ, ಹುಲಿ ಕಾರ್ತಿಕ್, ನಿತಿನ್ ಅಮಿನ್, ಶಿಡ್ ಶ್ಯಾಡೋ ಶಿವ, ಎನ್ ಸಿ ಅಯ್ಯಪ್ಪ ಮುಂತಾದವರು ಈ ಅದ್ದೂರಿ ಸಾಂಗ್ ನಲ್ಲಿ ನಟಿಸಿದ್ದಾರೆ.

ಇಷ್ಟು ದಿನ ಚಂದನ್ ಶೆಟ್ಟಿ ಅವರ ಸುಪ್ರಸಿದ್ದ ರಾಪ್ ಸಾಂಗ್ಸ್ ಗಳನ್ನು ಬೇರೆಬೇರೆ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ಅವರೆ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ವಿಜಯ್ ಈಶ್ವರ್ ಅವರ ಜೊತೆಗೂಡಿ ಹಾಡನ್ನು ಬರೆದಿದ್ದಾರೆ. ರಿಯಾಲಿಟಿ ಶೋ ನಲ್ಲಿ ಜನಪ್ರಿಯರಾಗಿರುವ ಮುರುಗ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಉದಯಲೀಲ ಛಾಯಾಗ್ರಹಣ, ಸತೀಶ್ ಚಂದ್ರ ಸಂಕಲನ ಹಾಗೂ ದಿವಾಕರ್ ಅವರ ಕಲಾ ನಿರ್ದೇಶನ ಈ ಹಾಡಿಗಿದೆ.

ಚಂದನ್ ಶೆಟ್ಟಿ ಅವರೆ ಸಂಗೀತ ಸಂಯೋಜಿಸಿ, ಹಾಡಿ ಹಾಗೂ ನಿರ್ದೇಶನವನ್ನೂ ಮಾಡಿರುವ ಈ ಹಾಡು ಹೊಸವರ್ಷದ ಆಗಮನದ ಸಮಯದಲ್ಲಿ ಬಿಡುಗಡೆಯಾಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದಂತೂ ಖಂಡಿತ..

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin