Watch 'Sarigamapa' grand finale before it even hits TV: Live broadcast on Zee5

ಟಿವಿಗೂ ಮೊದಲೇ ನೋಡಿ ‘ಸರಿಗಮಪ’ ಗ್ರ್ಯಾಂಡ್ ಫಿನಾಲೆ: ಜೀ5 ನಲ್ಲಿ ನೇರ ಪ್ರಸಾರ - CineNewsKannada.com

ಟಿವಿಗೂ ಮೊದಲೇ ನೋಡಿ ‘ಸರಿಗಮಪ’ ಗ್ರ್ಯಾಂಡ್ ಫಿನಾಲೆ: ಜೀ5 ನಲ್ಲಿ ನೇರ ಪ್ರಸಾರ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ನಾಟಕದ ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ ‘ಸ ರಿ ಗ ಮ ಪ’ ಗ್ರ್ಯಾಂಡ್ ಫಿನಾಲ್ ಸಮೀಪಿಸಿದೆ. ಕಂಟೆಸ್ಟೆಂಟ್‍ಗಳು ಸಕಲ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಿಮ ಸುತ್ತಿನ ಸ್ಪರ್ಧೆಯು ‘ಅಂತರ್ಜಾಲದಲ್ಲಿ ವಿಡಿಯೊಗಳನ್ನು ನೇರ ಪ್ರಸಾರ ಮಾಡುವ ಹಾಗೂ ಬಹುಭಾಷೆಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ದೇಶದ ಅತಿದೊಡ್ಡ, ಸ್ವದೇಶಿ ಡಿಜಿಟಲ್ ವೇದಿಕೆಯಾಗಿರುವ ಜೀ5ನಲ್ಲಿ ಪ್ರಸಾರವಾಗಲಿದೆ

ಮುಂದಿನ ತಿಂಗಳು ಜೂನ್ 5ರಂದು ‘ಸ ರಿ ಗ ಮ ಪ’ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಅಂತಿಮ ಸುತ್ತಿನ ಸ್ಪರ್ಧೆ ನೋಡಲು ಪ್ರೇಕ್ಷಕ ವರ್ಗ ಕಾತರರದಿಂದ ಕಾಯುತ್ತಿದೆ. ಅವರಿಗೆ ಅನುಕೂಲವಾಗಲೆಂದು ‘ಝೀ ಕನ್ನಡ’ದಲ್ಲಿ ನೇರ ಪ್ರಸಾರವಾಗುತ್ತಿದೆ ಎಂದು ತಿಳಿಸಲಾಗಿದೆ.

ಅಪಾರ ಸಂಖ್ಯೆಯಲ್ಲಿ ಸಂಗೀತ ಪ್ರಿಯ ಪ್ರೇಕ್ಷಕರನ್ನು ಆಕರ್ಷಿಸಿ ಮನರಂಜಿಸಲಿರುವಅಭೂತಪೂರ್ವ ಅವಿಸ್ಮರಣೀಯ ಕಾರ್ಯಕ್ರಮ ಜೀಓ-5 ವೇದಿಕೆಯ ಇತಿಹಾಸದಲ್ಲಿನ ಅತ್ಯಂತ ಮಹತ್ವಾಕಾಂಕ್ಷೆಯ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿ ಒಂದಾಗಿರಲಿದೆ. ಡಿಜಿಟಲ್ ಲೋಕದಲ್ಲಿ ಈ ಬಗೆಯ ನೇರ ಪ್ರಸಾರದ ಮೊದಲ ಕಾರ್ಯಕ್ರಮವೂ ಇದಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ರೋಚಕ ಕಾರ್ಯಕ್ರಮಗಳ ನೇರ ಪ್ರಸಾರಕ್ಕೆ ಇದು ಮುನ್ನುಡಿ ಬರೆಯಬಹುದೆಂದು ವಾಹಿನಿ ತಿಳಿಸಿದೆ.

ವಾಹಿನಿಯು ತನ್ನೆಲ್ಲ ಚಂದಾದಾರರಿಗೆ ಜನಪ್ರಿಯ ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಪರ್ಧೆ ಮುಂಚಿತವಾಗಿಯೇ ವೀಕ್ಷಿಸುವ ವಿಶೇಷ ಅವಕಾಶ ಕಲ್ಪಿಸಲಿದೆ. ಈ ಉಪಕ್ರಮ ಡಿಜಿಟಲ್ ಮನರಂಜನೆಗೆ ಪ್ರಮುಖ ತಾಣವನ್ನಾಗಿ ಜೀ5 ವೇದಿಕೆಯ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ. ಸಂಗೀತ ಪ್ರಿಯರು ಈ ತಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸಲು Zಇಇ5, ಈ ಋತುವಿನ “ಅತ್ಯಂತ ಜನಪ್ರಿಯ ಗಾಯಕ”ನ ಆಯ್ಕೆ ಅವಕಾಶವನ್ನೂ ಸಹ ಒದಗಿಸಲಿದೆ. ಮೇ 14 ರಿಂದ ಆರಂಭವಾದ ಮತದಾನದ ಆಯ್ಕೆ ಪ್ರಕ್ರಿಯೆ ಜೂನ್ 5 ರಂದು ನಡೆಯಲಿರುವ ಗ್ರ್ಯಾಂಡ್ ಫಿನಾಲೆಯ 2 ದಿನ ಮೊದಲು ಕೊನೆಗೊಳ್ಳಲಿದೆ.

ಇನ್ನೂ ಚಂದಾದಾರರು ತಮ್ಮ ಅಚ್ಚುಮೆಚ್ಚಿನ ಸ್ಪರ್ಧಿಗಳಿಗೆ ಮತ ಚಲಾಯಿಸಲು ಜೀ5ಗೆ ಲಾಗಿನ್ ಆಗಬಹುದು. ಇದರಲ್ಲಿ ಭಾಗವಹಿಸುವವರಿಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಒಬ್ಬ ಅದೃಷ್ಟಶಾಲಿ ಮತದಾರನು “ಅತ್ಯಂತ ನೆಚ್ಚಿನ ಮತದಾರ” ಅಭಿವಾದನಕ್ಕೂ ಪಾತ್ರವಾಗಬಹುದು. ಅಪರೂಪದ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಪಡೆಯಬಹುದು.

ನಿರೂಪಕಿ ಅನುಶ್ರೀ ನಡೆಸಿಕೊಡಲಿರುವ ಅಂತಿಮ ಸುತ್ತಿನಲ್ಲಿ ಕನ್ನಡ ಸಂಗೀತ ಲೋಕದ ದಂತಕಥೆಗಳಾಗಿರುವ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ಅವರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin