“Tayavva” will be released across the state on May 30th.

ಮೇ 30 ರಂದು “ತಾಯವ್ವ” ಚಿತ್ರ ರಾಜ್ಯಾದ್ಯಂತ ಬಿಡುಗಡೆ - CineNewsKannada.com

ಮೇ 30 ರಂದು “ತಾಯವ್ವ” ಚಿತ್ರ ರಾಜ್ಯಾದ್ಯಂತ ಬಿಡುಗಡೆ

ನವ ಪ್ರತಿಭೆ ಗೀತಪ್ರಿಯಾ ಮೊದಲ ಬಾರಿಗೆ ನಿರ್ಮಿಸಿ ಜೊತೆಗೆ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ತಾಯವ್ವ’ ಚಿತ್ರ ರಾಜ್ಯದಾದ್ಯಂತ ಇದೇ ಮೇ. 30 ರ ಶುಕ್ರವಾರ ತೆರೆಗೆ ಬರಲಿದೆ.

ಸುಮಾರು ಮೂರು ದಶಕದ ಹಿಂದೆಯೇ ‘ತಾಯವ್ವ’ ಎಂಬ ಹೆಸರಿನಲ್ಲಿ ಚಿತ್ರ ತೆರೆಗೆ ಬಂದಿದ್ದು, ಆ ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಮತ್ತು ನಟ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. ಅದೇ ‘ತಾಯವ್ವ’ ಹೆಸರಿನಲ್ಲಿ ಹೊಸ ಚಿತ್ರ ತಯಾರಾಗಿದ್ದು, ಇದೇ ಶುಕ್ರವಾರ ತೆರೆಗೆ ಬರಲಿದೆ.

‘ತಾಯವ್ವ’ ಚಿತ್ರದ ಹೆಸರೇ ಹೇಳುವಂತೆ, ಇದು ಅಪ್ಪಟ ಗ್ರಾಮೀಣ ಸೊಗಡಿನ, ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಸಾಮಾಜಿಕ ಕಳಕಳಿಯ ಚಿತ್ರ. ಗ್ರಾಮೀಣ ಪ್ರದೇಶದ ಸೂಲಗಿತ್ತಿ ಮಹಿಳೆಯೊಬ್ಬಳು ಹೇಗೆ ಹೆಣ್ಣುಮಕ್ಕಳ ರಕ್ಷಣೆ ಮಾಡಿ, ಸಮಾಜಕ್ಕೆ ಮಾದರಿಯಾಗುತ್ತಾಳೆ ಎಂಬ ವಿಷಯದ ಸುತ್ತ ‘ತಾಯವ್ವ’ ಚಿತ್ರದ ಕಥಾಹಂದರ ಸಾಗುತ್ತದೆ. ಚಿತ್ರದಲ್ಲಿ ‘ತಾಯವ್ವ’ನಾಗಿ ಗೀತಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಜಾನಪದ ಶೈಲಿಯಲ್ಲಿ ಮೂಡಿ ಬಂದಿರುವ ‘ತಾಯವ್ವ’ ಚಿತ್ರದ ಹಾಡುಗಳಿಗೆ ಗೀತಪ್ರಿಯಾ ಅರೇ ಧ್ವನಿಯಾಗಿದ್ದಾರೆ. ‘ಅಮರ ಫಿಲಂಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ‘ತಾಯವ್ವ’ ಚಿತ್ರಕ್ಕೆ ಸಾತ್ವಿಕ ಪವನ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin