Roland Garros joins key brands with Sony Vive to premium sport

ರೋಲ್ಯಾಂಡ್ ಗ್ಯಾರೋಸ್ ಪ್ರೀಮಿಯಂ ಕ್ರೀಡೆಗೆ ಸೋನಿ ವಿವ್ ಜೊತೆ ಮಹತ್ವದ ಬ್ರ್ಯಾಂಡ್‍ಗಳ ಸೇರ್ಪಡೆ - CineNewsKannada.com

ರೋಲ್ಯಾಂಡ್ ಗ್ಯಾರೋಸ್ ಪ್ರೀಮಿಯಂ ಕ್ರೀಡೆಗೆ ಸೋನಿ ವಿವ್ ಜೊತೆ ಮಹತ್ವದ ಬ್ರ್ಯಾಂಡ್‍ಗಳ ಸೇರ್ಪಡೆ

ರೋಲ್ಯಾಂಡ್ ಗ್ಯಾರೋಸ್ 2025 ಪ್ಯಾರಿಸ್‍ನಲ್ಲಿ ಆರಂಭವಾಗುತ್ತಿದ್ದಂತೆ, ಸೋನಿ ವಿವ್ ಜೂನ್ 8 ರವರೆಗೆ ಪ್ರತಿಷ್ಠಿತ ಗ್ರ್ಯಾಂಡ್ ಸ್ಲ್ಯಾಮ್‍ನ ನೇರ ಪ್ರಸಾರ ಮಾಡುತ್ತಿದೆ.

ಸೋನಿ ವಿವ್ ಕ್ರೀಡಾ ಕ್ಯಾಲೆಂಡರ್‍ನಲ್ಲಿ ಈ ಟೂರ್ನಮೆಂಟ್ ಅತ್ಯಂತ ನಿರೀಕ್ಷಿತ ಈವೆಂಟ್ ಆಗಿದ್ದು, ಪ್ಯಾರಿಸ್‍ನ ಐಕಾನಿಕ್ ಕ್ಲೇ ಕೋರ್ಟ್‍ಗಳ ಮೇಲೆ ನಡೆಯುವ ಹೈ-ಒಕ್ಟೇನ್ ಆಟ ಇಡೀ ದೇಶ ಅನುಭವಿಸಲಿದೆ.

ಈ ವರ್ಷದ ಟೂರ್ನಮೆಂಟ್‍ಗೆ ಪ್ರಮುಖ ಬ್ರಾಂಡ್‍ಗಳಾದ ಹುಂಡೈ ಮೋಟಾರ್ ಇಂಡಿಯಾ, ಲುಫ್ಥಾನ್ಸಾ ಮತ್ತು ಒನ್‍ಪ್ಲಸ್ ಸಹ-ಪ್ರಸ್ತುತಿ ಪ್ರಾಯೋಜಕರಾಗಿ ಸೇರಿಕೊಂಡಿವೆ. ಆಧುನಿಕ ವೈಲ್ತ್ ಮ್ಯಾನೇಜ್‍ಮೆಂಟ್ ಪ್ಲಾಟ್‍ಫಾರ್ಮ್ ಆezeಡಿv ಸಹ-ಪವರ್ಡ್ ಬೈ ಸ್ಪಾನ್ಸರ್ ಆಗಿ ಭಾಗವಹಿಸಿದೆ. ಪಾರ್ಟ್ನರ್ ಸ್ಪಾನ್ಸರ್‍ಗಳ ಪಟ್ಟಿಯಲ್ಲಿ ಜಾಗತಿಕ ಜೀವನಶೈಲಿ ಮತ್ತು ಗ್ರಾಹಕ ಬ್ರ್ಯಾಂಡ್‍ಗಳಾದ ಸನ್ಸಾರ್ ಎ ಡಿ’ಡೆಕೋರ್ ಬ್ರಾಂಡ್, ಡಿಸ್ನಿ ಅಡ್ವೆಂಚರ್ ಮತ್ತು ಜಿಎಚ್‍ಎ ಡಿಸ್ಕವರಿ ಕೂಡ ಸೇರಿದೆ.

ಈ ವರ್ಷ ಪ್ರಪಂಚದ ಅಗ್ರಶ್ರೇಣಿಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್, ವಿಶ್ವದ ನಂ. 1 ಜಾನಿಕ್ ಸಿನ್ನರ್, ಮೂರು ಬಾರಿ ಚಾಂಪಿಯನ್ ನೊವಾಕ್ ಜೊಕೊವಿಕ್, ಹಾಲಿ ಮಹಿಳಾ ಚಾಂಪಿಯನ್ ಇಗಾ ಸ್ವಿಟೆಕ್ ಮತ್ತು ಅರಿನಾ ಸಬಲೆಂಕಾ ಭಾಗವಹಿಸಲಿದ್ದಾರೆ. ಭಾರತದಿಂದ ರೋಹನ್ ಬೋಪಣ್ಣ, ಚೆಕ್ ರಿಪಬ್ಲಿಕ್‍ನ ಆಡಮ್ ಪಾವ್ಲಾಸೆಕ್ ಜೊತೆ ಡಬಲ್ಸ್‍ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಬಗ್ಗೆ ಮಾತನಾಡಿದ ಸೋನಿ ಲಿವ್ ನ ರೆವೆನ್ಯೂ ಹೆಡ್ ರಂಜನಾ ಮಂಗಳಾ ‘“ಪ್ರೀಮಿಯಂ ಕ್ರೀಡಾ ವಿಷಯಗಳು ಮತ್ತು ಹೆಸರುವಾಸಿಯ ಟೂರ್ನಮೆಂಟ್‍ಗಳು ನಮ್ಮ ಸ್ಪೋರ್ಟ್ಸ್ ಸ್ಟ್ರಾಟೆಜಿಯ ಹೃದಯಭಾಗವಾಗಿವೆ. ರೋಲ್ಯಾಂಡ್ ಗ್ಯಾರೋಸ್ ಎಂಬುದು ಜಗತ್ತಿನಾದ್ಯಾಂತ ಪ್ರಸಿದ್ಧಿಯುಳ್ಳ ಈವೆಂಟ್ ಆಗಿದ್ದು, ಉನ್ನತ ದರ್ಜೆಯ ಎಂಗೇಜ್ಮೆಂಟ್ ಮತ್ತು ದಿಟ್ಟ ಬ್ರ್ಯಾಂಡ್ ಅಲೈನ್ಮೆಂಟ್‍ಗಾಗಿ ಅಪರೂಪದ ಅವಕಾಶವನ್ನು ಒದಗಿಸುತ್ತದೆ ಎಂದರು.

ವಿರಾಟ್ ಖುಲ್ಲರ್, ವರ್ಟಿಕಲ್ ಹೆಡ್ ಮಾರ್ಕೆಟಿಂಗ್, ಹುಂಡೈ ಮೋಟಾರ್ಸ್ ಇಂಡಿಯಾ ಮಾತನಾಡಿ ‘ ರೋಲ್ಯಾಂಡ್-ಗ್ಯಾರೋಸ್‍ಗಾಗಿ ಸೋನಿ ಐIಗಿ ಜೊತೆಗಿನ ಸಹಯೋಗ, ವಿವೇಚನಾಶೀಲ ವೀಕ್ಷಕರಿಗೆ ಪ್ರೀಮಿಯಂ ಕ್ರೀಡಾ ಅನುಭವ ತರುವ ಬದ್ಧತೆ ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ಧಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin