Hrithik Roshan's new film from Hombale Films
ಹೊಂಬಾಳೆ ಫಿಲಂಸ್‍ನಿಂದ ಹೃತಿಕ್ ರೋಷನ್ ಗೆ ಹೊಸ ಚಿತ್ರ
ಹೊಂಬಾಳೆ ಫಿಲಂಸ್ ಭಾರತೀಯ ಚಿತ್ರರಂಗದ ಪ್ರಮುಖ ನಟ ಹೃತಿಕ್ ರೋಷನ್ ಅವರೊಂದಿಗೆ ಹೊಸ ಚಿತ್ರ ಘೋಷಿಸಿದೆ. ಈ ಮೂಲಕ, ಕನ್ನಡ ನೆಲದಿಂದ ಜಾಗತಿಕ ರಂಗಕ್ಕೆ ತಮ್ಮ ಪಯಣವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ರಾಜಕುಮಾರ, ಯುವರತ್ನ, ಕೆಜಿಎಫ್, ಕಾಂತಾರ ಮತ್ತು ಬಘೀರಾದಂತಹ ಯಶಸ್ವಿ ಚಿತ್ರಗಳ ಮೂಲಕ ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡಿರುವ ಹೊಂಬಾಳೆ ಫಿಲಂಸ್, ಯಾವಾಗಲೂ ಮೌಲ್ಯಯುತ ಕಥೆಗಳನ್ನು ಹೇಳುವಲ್ಲಿ ಮತ್ತು ಉತ್ತಮ ಮನರಂಜನೆ ನೀಡುವಲ್ಲಿ ಬದ್ಧವಾಗಿದೆ.

ಈಗ, ಹೃತಿಕ್ ರೋಷನ್ ಅವರಂತಹ ಪ್ರತಿಭಾವಂತ ನಟರೊಂದಿಗೆ ಕೈಜೋಡಿಸಿ, ದೇಶದ ಗಡಿಗಳನ್ನು ಮೀರಿ, ಪ್ರಪಂಚದಾದ್ಯಂತ ಕಥೆಗಳನ್ನು ತಲುಪಿಸುವ ಕನಸು ಕಂಡಿದೆ. ಚಿತ್ರದ ನಿರ್ದೇಶಕರ ಕುರಿತಾದ ಹೆಚ್ಚಿನ ಮಾಹಿತಿಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಂಸ್ಥೆ ಮಾಹಿತಿ ಹಂಚಿಕೊಂಡಿದೆ

