Villain Kote Prabhakar released the trailer of "College Artist".

“ಕಾಲೇಜ್ ಕಲಾವಿದ” ಟ್ರೈಲರ್ ಬಿಡುಗಡೆ ಮಾಡಿದ ಖಳನಟ ಕೋಟೆ ಪ್ರಭಾಕರ್ - CineNewsKannada.com

“ಕಾಲೇಜ್ ಕಲಾವಿದ” ಟ್ರೈಲರ್ ಬಿಡುಗಡೆ ಮಾಡಿದ ಖಳನಟ ಕೋಟೆ ಪ್ರಭಾಕರ್

ಸಂಗೀತಮಯ ಪ್ರೇಮಕಥೆಯ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಯುವ ಪಡೆಗಳ ತಂಡ ಸೇರಿಕೊಂಡು ಸಿದ್ದಪಡೆಸಿರುವ “ಕಾಲೇಜ್ ಕಲಾವಿದ”. ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಟ್ರೈಲರ್ ಅನ್ನು ಹಿರಿಯ ಕಲಾವಿದ ಕೋಟೆ ಪ್ರಭಾಕರ್ ಬಿಡುಗಡೆ ಮಾಡಿ ಹಾರೈಸಿದರು

ಈ ವೇಳೆ ಕೋಟೆ ಪ್ರಭಾಕರ್ ಅವರೊಂದಿಗೆ ನಟ ನಿರ್ದೇಶಕ ನಾಗೇಂದ್ರ ಅರಸ್, ನಟರಾದ ಪ್ರಥಮ್ , ದಿನೇಶ್ ಸೇರಿದಂತೆ ಅನೇಕ ಗಣ್ಯರು ಸಾಥ್ ನೀಡಿ ಹೊಸ ತಂಡದ ಹೊಸ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದರು

ಖಳನಟ ಕೋಟೆ ಪ್ರಭಾಕರ್ ಮಾತನಾಡಿ ಚಿತ್ರ ಜೀವನದಲ್ಲಿ ಇದೇ ಮೊದಲ ಬಾರಿಗೆ ಚಿತ್ರ ಒಂದರ ಟ್ರೈಲರ್ ಬಿಡುಗಡೆ ಮಾಡಿದ್ದು ಮರೆಯಲಾಗದ ಸಂದರ್ಭ, ಚಿತ್ರದಲ್ಲಿ ಆಕ್ಟ್ ಮಾಡಿಲ್ಲ , ಆದರೂ ತಂಡ ಪ್ರೀತಿಯಿಂದ ನನ್ನನ್ನ ಕರೆದರು ಹಾಗಾಗಿ ಬಂದೆ ,ಕಾಲೇಜ್ ಕಲಾವಿದ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ನಾಗೇಂದ್ರ ಅರಸ್ ಮಾತನಾಡಿ ಚಿತ್ರ ನೋಡಿದ ಮೇಲೆ ಚಿತ್ರದ ಟ್ರೈಲರ್‍ಎಡಿಟ್ ಮಾಡಿದೆ. ಖಂಡಿತ ಮ್ಯೂಸಿಕಲ್ ಲವ್ ಚಿತ್ರದಲ್ಲಿ ಬಹಳಷ್ಟು ತಿರುವುಗಳಿದೆ , ಚಿತ್ರ ಸಕ್ಸಸ್ ಕಾಣಲಿ ಎಂದು ಶುಭ ಹಾರೈಸಿದರು.

ನಟ ಪ್ರಥಮ್ ಮಾತನಾಡಿ ಚಿತ್ರ ಯಶಸ್ವಿ ಕಾಣಲಿ ಎಂದು ಶುಭ ಹಾರೈಸಿದರು. ಜಯ ಕರ್ನಾಟಕದ ಮುಖ್ಯಸ್ಥರಾದ ಜಗದೀಶ್ ಮಾತನಾಡಿ ನಿರ್ಮಾಪಕ ತರುಣ್ ಶರ್ಮ 30ವರ್ಷದ ಸ್ನೇಹಿತ. ಚಿತ್ರದ ಟ್ರೈಲರ್ ಬಹಳ ಸೊಗಸಾಗಿ ಬಂದಿದೆ. ಹಾಗೆಯೇ ಡ್ರಗ್ ವಿಚಾರದ ಕುರಿತು ಚಿತ್ರದಲ್ಲಿ ಹೇಳಿದ್ದು , ಇವತ್ತಿನ ಕಾಲೇಜು ವಿದ್ಯಾರ್ಥಿಗಳ ಕಥೆಯು ಇದೆ. ಈ ಚಿತ್ರಕ್ಕೆ ರಾಜ್ಯದ ನಮ್ಮ ಜಯ ಕರ್ನಾಟಕ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ. ಚಿತ್ರಕ್ಕೆ ಶುಭವಾಗಲಿ ಎಂದರು.

ನಿರ್ದೇಶಕ ಸಂಜಯ್ ಮಳವಳ್ಳಿ ಮಾತನಾಡಿ ಚಿತ್ರೋದ್ಯಮದಲ್ಲಿ 15 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹಾಯಕ , ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ ಬರಹಗಾರ ಹಾಗೂ ಚಿತ್ರ ಸಾಹಿತಿಯು ಕೂಡ, ಗುರುಗಳಾದ ಮಂಡ್ಯ ರಮೇಶ್ ಮಾರ್ಗದರ್ಶನದಲ್ಲಿ ಸಾಗಿ ಬಂದು ನನ್ನ ಮೊದಲ ನಿರ್ದೇಶನದ ಪ್ರಯತ್ನವಾಗಿ ಕಾಲೇಜ್ ಕಲಾವಿದ ಚಿತ್ರವನ್ನು ಸಿದ್ಧಪಡಿಸಿದ್ದೇನೆ.ಪ್ರೇಮಮಯ ಚಿತ್ರ. ಮ್ಯೂಸಿಕಲ್ ಜರ್ನಿರುವ ಚಿತ್ರದಲ್ಲಿ ಡ್ರಗ್ಸ್ ವಿಚಾರವೂ ಒಳಪಟ್ಟಿದೆ. ಕಾಲೇಜು ವಿದ್ಯಾರ್ಥಿಗಳ ಸ್ನೇಹ , ಪ್ರೀತಿ , ಸಂಬಂಧ , ಹಾಸ್ಯ , ಫೈಟ್ ಸೇರಿದಂತೆ ಮನೋರಂಜನೆಯ ಎಲ್ಲಾ ಅಂಶವನ್ನು ಒಳಗೊಂಡಿರುವಂತಹ ಚಿತ್ರ ಇದಾಗಿದೆ ಎಂದರು

ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರಿಕರಿಸಲಾಗಿದೆ. ಜೂನ್ 6 ರಂದು ರಾಜ್ಯಾದ್ಯಂತ ನಮ್ಮ ಚಿತ್ರ ಬಿಡುಗಡೆ ಆಗಲಿದೆ ಎಲ್ಲರೂ ನೋಡಿ ಸಹಕರಿಸಿ ಎಂದು ಕೇಳಿಕೊಂಡರು.

ನಿರ್ಮಾಪಕ ತರುಣ್ ಶರ್ಮ ಮಾತನಾಡಿ ಐರನ್ ಅಂಡ್ ಸ್ಟೀಲ್ ಬಿಸಿನೆಸ್ ಮಾಡುತ್ತಿದ್ದೇನೆ. ಚಿತ್ರ ನಿರ್ಮಾಣ ಮಾಡುವ ಆಸೆ, ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಈಗ ಸಿನಿಮಾ ಚೆನ್ನಾಗಿ ಬಂದಿದೆ. ಜೂನ್ 6 ರಂದು ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶಾಲಿನಿ ಆರ್ಟ್ಸ್ ಡಿಸ್ಟ್ರಿಬುಷನ್ ಮೂಲಕ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ.ವಿಲ್ಲನ್ ಪಾತ್ರ ಮಾಡಿದ್ದೇನೆ. ಪಾತ್ರ ಹೇಗಿದೆ ಎಂಬುದನ್ನು ನೀವೆಲ್ಲರೂ ನೋಡಿ ಹೇಳಬೇಕು , ಮುಂದೆಯೂ ಚಿತ್ರ ನಿರ್ಮಾಣ ಮಾಡುತ್ತೇನೆ. ಅವಕಾಶ ಸಿಕ್ಕರೆ ಬೇರೆ ಚಿತ್ರಗಳಲ್ಲೂ ಕೂಡ ನಟಿಸುವೆ ಎಂದರು

ನಟ ಆರಾವ್ ಸೂರ್ಯ ಮಾತನಾಡಿ 2016ರಲ್ಲಿ ಸಿನಿಮಾಗಳಲ್ಲಿ ನಟಿಸುತ್ತಾ ಬಂದೆ , ತದನಂತರ ಸೀರಿಯಲ್ ಗಳಲ್ಲಿ ಅಭಿನಯಿಸಿದೆ. ಈಗ ಮತ್ತೆ ಸಿನಿಮಾಗೆ ಎಂಟ್ರಿ ಮಾಡಿದ್ದೇನೆ. ಇದೊಂದು ಸುಂದರ ಲವ್ ಸಬ್ಜೆಕ್ಟ್ , ಚಿತ್ರದಲ್ಲಿ ನಾನೊಬ್ಬ ಸ್ಕೆಚ್ ಆರ್ಟಿಸ್ಟ್ , ಕಾಲೇಜು ವಿದ್ಯಾರ್ಥಿಯಾಗಿ ನನ್ನದೊಂದು ಗೆಳೆಯರ ಗುಂಪು , ಅಮ್ಮನ ಪ್ರೀತಿ , ಸ್ನೇಹಿತರ ಸಹಕಾರದ ನಡುವೆ ಮುದ್ದಾದ ಹುಡುಗಿ ನನ್ನ ಮನಸ್ಸಿಗೆ ಪ್ರವೇಶ ಆದಾಗ ಆಗುವ ಏರಿಳಿತ ಕಥೆಯೇ ಜೊತೆಗೆ ಡ್ರಗ್ಸ್ ವಿಚಾರ ಸೇರಿದಂತೆ ಹಲವು ಘಟನೆಗಳು ಚಿತ್ರದ ಹೈಲೈಟ್ ಆಗಲಿದೆ. ಸಾಂಗ್ , ಫೈಟ್ , ಕಾಮಿಡಿ ಎಲ್ಲವೂ ಸೊಗಸಾಗಿ ಮೂಡಿಬಂದಿದೆ. ಹಾಡುಗಳು ನಮ್ಮ ಚಿತ್ರದ ಹೈಲೈಟ್ , ನಟನೆಗೆ ಒಳ್ಳೆ ಅವಕಾಶ ಸಿಕ್ಕಿದೆ ನೀವೆಲ್ಲರೂ ನಮ್ಮ ಚಿತ್ರವನ್ನ ನೋಡಿ ಹರಿಸಿ ಎಂದರು. ನಾಯಕಿಯಾಗಿ ಚೈತ್ರ ,ಪ್ರಮುಖ ಪಾತ್ರದಲ್ಲಿ ಕಾಮಿಡಿ ನಟ ಹುಲ್ಲಿ ಕಾರ್ತಿಕ್ ಅಭಿನಯಿಸಿದ್ದು , ಹಿರಿಯ ನಟ ರಮೇಶ್ ಭಟ್ , ನಟಿ ಹರಿಣಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ.

ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಮಾತನಾಡಿ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು , ಎರಡು ಹಾಡನ್ನು ನಾನೇ ಹಾಡಿದ್ದೇನೆ. ನಿರ್ದೇಶಕರು ಹೇಳಿದಂತೆ ಕೆಲಸ ಮಾಡಿದ್ದೇನೆ. ಎಲ್ಲಾ ಕ್ರೆಡಿಟ್ ಅವರಿಗೆ ಸಲ್ಲಬೇಕು , ಹಾಡುಗಳು , ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿ ಬಂದಿದೆ. ವಿಶೇಷವಾಗಿ ಈ ಚಿತ್ರಕ್ಕಾಗಿ ಥೀಮ್ ಮ್ಯೂಸಿಕ್ ಮಾಡಿದ್ದೇವೆ. ನನ್ನ ಹಿಂದಿನ ಎಲ್ಲಾ ಚಿತ್ರಕ್ಕಿಂತ ಈ ಚಿತ್ರ ಬಹಳ ವಿಶೇಷವಾದದ್ದು, ಸಂಭಾಷಣೆ , ಹಾಸ್ಯ , ಆಕ್ಷನ್ ಎಲ್ಲವೂ ಉತ್ತಮವಾಗಿ ಬಂದಿದೆ ಎಂದರು.

ಆನಂದ್ ಸುಂದರೇಶ್ ಛಾಯಾಗ್ರಾಹಣ , ಬಾಲ ನೃತ್ಯ ನಿರ್ದೇಶನವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin