ರಾಜ್ಯದಲ್ಲಿ ಚಿತ್ರಮಂದಿರಗಳಲ್ಲಿ ಏಕರೂಪ ಪ್ರವೇಶ ದರ ನಿಗಧಿ ಸೇರಿ ಬೇಡಿಕೆ ಈಡೇರಿಕೆಗೆ ಸಿಎಂಗೆ ಮನವಿ

ನಿರ್ಮಾಪಕರಿಗೆ ಮತ್ತು ಪ್ರದರ್ಶಕರಿಗೆ ಪೂರಕ ತಂತ್ರಜ್ಞಾನ ಅಳವಡಿಕೆ, ಚಲನಚಿತ್ರವನ್ನು ಕೈಗಾರಿಕ್ಯೋದ್ಯಮವಾಗಿ ಪರಿಗಣನೆ,ರಾಜ್ಯಾದ್ಯಂತ ಚಲನಚಿತ್ರ ಮಂದಿರಗಳಲ್ಲಿ ಏಕರೂಪದ ಪ್ರವೇಶ ದರ ನಿಗಧಿ , ತಾತ್ಕಾಲಿಕ ಚಿತ್ರಮಂದಿರಗಳ ಅವಧಿ ವಿಸ್ತರಣೆ ಸೇರಿ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.

ನೆರೆ ರಾಜ್ಯಗಳಲ್ಲಿ ನಿಗಧಿ ಪಡಿಸಿರುವಂತೆ ರಾಜ್ಯದಲ್ಲಿಯೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ 250 ರೂಪಾಯಿ ದರ ಮೀರದಂತೆ ಹಾಗು ಏಕಪರದೆಯ ಚಿತ್ರಮಂದಿರದಲ್ಲಿ 150 ರೂಪಾಯಿ ಮೀರದಂತೆ ಟಿಕೆಟ್ ದರ ನಿಗಧಿ ಮಾಡಿ ಆದೇಶ ಹೊರಡಿಸುವಂತೆ ಮಂಡಳಿಯ ಅಧ್ಯಕ್ಷ ಭಾ.ಮ ಹರೀಶ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ನಿಯೋಗದಲ್ಲಿ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಸುಂದರ್ ರಾಜು, ಉಪಾಧ್ಯಕ್ಷ ಎಚ್, ಸಿ ಶ್ರೀನಿವಾಸ್, ಕಾರ್ಯದರ್ಶಿ ಎಲ್.ಸಿ ಕುಶಾಲ್ ,ಹಿರಿಯ ಕಲಾವಿದೆ ಪ್ರಮೀಳಾ ಜೋಷಾಯ್ ಸೇರಿದಂತೆ ಇನ್ನಿತರೆ ಪಧಾಧಿಕಾರಿಗಳ ನಿಯೋಗ ರಾಜ್ಯ ಸರ್ಕಾರಕ್ಕೆ ಕನ್ನಡ ಚಿತ್ರರಂಗದ ಬೆಳವಳಿಗೆಗೆ ಪೂರಕ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ವರ್ಷಕ್ಕೆ ಅಂದಾಜು 350 ಕನ್ನಡ ಚಲನಚಿತ್ರಗಳು ನಿರ್ಮಾಣಗೊಂಡು ಬಿಡುಗಡೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕನ್ನಡಚಲನಚಿತ್ರ ಅಕಾಡಮಿಯಲ್ಲಿ ಈಗಾಗಲೇ ಪ್ರೊಜೆಕ್ಟರ್ ಥಿಯೇಟರ್ ಅವಳವಡಿಸಿರುವ ಹಿನ್ನೆಲೆಯಲ್ಲಿ ಚಲನಚಿತ್ರ ಅಕಾಡಮಿ ಹಾಗು ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದಲ್ಲಿ ಅಂದಾಜು 20 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಜಿಟಲ್ ಡಿಸಿಪಿ ಯಂತ್ರೋಪಕರಣ ಸ್ಥಾಪಿಸಲು ಆಯವ್ಯಯದಲ್ಲಿ ಹಣ ನಿಗಧಿ ಮಾಡಬೇಡಿ ಕೊಡಿ, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ರೂಪದಲ್ಲಿ ತೆರಿಗೆ ಬರಲು ಸಹಕಾರಿಯಾಗಲಿದೆ ಎಂದು ಮನವಿಯಲ್ಲಿ ತಿಳಿಸಿದೆ.

ರಾಜ್ಯದ ಚಿತ್ರಮಂದಿರಗಳಲ್ಲಿ ಪ್ರೊಜೆಕ್ಟರ್ ವಿದೇಶದಿಂದ ತರಿಸಬೇಕಾಗಿದೆ. ಅದರಲ್ಲಿಯೂ ಒಬ್ಬರು ಇಬ್ಬರು ಸೇವಾ ಪೂರೈಕೆದಾರರು ಅಗತ್ಯವಿದೆ. ಈ ಕ್ರಮದಿಂದ ಚಿತ್ರಮಂದಿರಗಳು ಬಾಡಿಗೆ ರೂಪದಲ್ಲಿ ಪಡೆದು ಪ್ರದರ್ಶನ ಮಾಡುತ್ತಿವೆ. ಹೀಗಾಗಿ ಸ್ವಂತ ಪ್ರೊಜೆಕ್ಟರ್ ಖರೀದಿಗೆ 40 ರಿಂದ 50 ಲಕ್ಷ ಖರ್ಚಾಗಲಿದ್ದು ಇದಕ್ಕಾಗಿ 10 ರಿಂದ 15 ಲಕ್ಷ ಸಹಾಯಧನ ನೀಡಲು ಇದಕ್ಕಾಗಿ ಪ್ರಾರಂಭಿಕ ಹಂತದಲ್ಲಿ 20 ಕೋಟಿ ಹಣ ನಿಗಧಿ ಪಡಿಸಿ,ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ಸಂಗ್ರಹವಾಗಲಿದೆ ಎಂದು ಭಾ.ಮ ಹರೀಶ್ ನೇತೃತ್ವದ ನಿಯೋಗ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಸುಮಾರು 200 ತಾತ್ಕಾಲಿಕ ಮತ್ತು ಅರೆ ಖಾಯಂ ಚಿತ್ರಮಂದಿರಗಳನ್ನಾಗಿ ಪರಿವರ್ತಿಸಲು ಬಯಸಿರುವ ಕಾರಣ ನಿಯಮ 107 (2) (1)ಕ್ಕೆ 2030ರ ಡಿಸೆಂಬರ್ ತನಕ ವಿಸ್ತರಣೆ ಮಾಡಲು ತಿದ್ದುಪಡಿ ತರಲು ಗೃಹ ಇಲಾಖೆಗೆ ನಿರ್ದೇಶಿಸುವಂತೆ ಮನಿವ ಮಾಡಿದೆ.
ಚಲಚಿತ್ರೋದ್ಯೊಮವನ್ನು ಉದ್ಯಮ ಎಂದು ಪರಿಗಣಿಸಿ ಪೂರಕ ಕ್ರಮ ಕೈಗೊಳ್ಳಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನನು ಇಡೇರಿಸಿ ಚಿತ್ರರಂಗದ ಬೆಳವಣಿಗೆಗೆ ಸಹಕಾರ ನೀಡಿ ಎಂದು ಭಾ.ಮ ಹರೀಶ್ ಮತ್ತವರ ತಂಡ ಮನವಿ ಮಾಡಿದೆ.

ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿರುವ ತಾವು ಮೊದಲ ಅವಧಿಯಲ್ಲಿ ಚಿತ್ರರಂಗಕ್ಕೆ ಹೆಚ್ಚಿನ ಕೆಲಸ ಮಾಡಿದ್ದೀರಿ ಇದಕ್ಕಾಗಿ ಧನ್ಯವಾದ ಅರ್ಪಿಸುವುದು ನಮ್ಮ ಕೆಲಸ, ಇದೇ ವೇಳೆ ತಮ್ಮ ಈ ಅಧಿಕಾರಾವಧಿಯಲ್ಲಿ ಚಿತ್ರರಂಗದ ಪ್ರಮುಖ ಬೇಡಿಕೆ ಈಡೇರಿಸಿ ಚಿತ್ರರಂಗದ ಬೆಳವಣಿಗೆಗೆ ಮತ್ತಷ್ಟು ಪ್ರೋತ್ಸಾಹ ನೀಡಿ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮ ಹರೀರ್ಶ ಮತ್ತವರ ತಂಡ ಮನವಿ ಮಾಡಿದೆ.