ಶಿವಣ್ಣನ ಅಭಿಮಾನಿಗಳಿಗೆ `ಆರೋಗ್ಯ ಭಾಗ್ಯ’ದ ಗುರುತಿನ ಚೀಟಿ ಬಿಡುಗಡೆ
`ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್‍ಕುಮಾರ್ ಅವರ 64ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಹಾಗೂ ಸಿನಿಪ್ರೇಕ್ಷಕರಿಗೆ ಅಭೂತಪೂರ್ವ ಕೊಡುಗೆ ಪ್ರಕಟಿಸಲಾಗಿದೆ ಜನಸಾಮಾನ್ಯರ ಆರೋಗ್ಯ ಭದ್ರತೆಗಾಗಿ ವಿಶೇಷ ಹೆಲ್ತ್ ಕಾರ್ಡ್ ಬಿಡುಗಡೆಯಾಗಿದೆ

ಬೆಂಗಳೂರಿನ ಹೃದಯಭಾಗದಲ್ಲಿರುವ ಪ್ರತಿಷ್ಠಿತ ವಿ.ಎಸ್.ಎಚ್. ಆಸ್ಪತ್ರೆಯು ಡಾ. ಶಿವರಾಜ್‍ಕುಮಾರ್ ಅವರ ಜನ್ಮದಿನದ ಸಂಭ್ರಮಕ್ಕೆ ಅತ್ಯಂತ ಅರ್ಥಪೂರ್ಣ ಕೊಡುಗೆ ನೀಡಿದೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಹಾಗೂ ನಟಸಾರ್ವಭೌಮ ಡಾ. ರಾಜ್‍ಕುಮಾರ್ ಕುಟುಂಬದೊಂದಿಗೆ ದಶಕಗಳ ಆತ್ಮೀಯ ಬಾಂಧವ್ಯ ಹೊಂದಿರುವ ಆಸ್ಪತ್ರೆಯು, ಶಿವಣ್ಣನ ಹುಟ್ಟುಹಬ್ಬದ ಗೌರವಾರ್ಥವಾಗಿ `ಹ್ಯಾಟ್ರಿಕ್ ಹೀರೋ ಫ್ಯಾಮಿಲಿ ಹೆಲ್ತ್ ಕಾರ್ಡ್’ ಅನ್ನು ಬಿಡುಗಡೆ ಮಾಡಿದೆ.
ಆಸ್ಪತ್ರೆಯ `Minutes Matter’ ಎಂಬ ಧೈಯದ ಜಾಹೀರಾತಿನಲ್ಲಿ ಆಂಬುಲೆನ್ಸ್ ಚಾಲಕ, ವೈದ್ಯ, ಮನೋವೈದ್ಯ ಸೇರಿದಂತೆ 10 ವಿಭಿನ್ನ ಪಾತ್ರಗಳಲ್ಲಿ ಶಿವಣ್ಣ ನಟಿಸಿದ್ದಾರೆ. ಜಾಗತಿಕ ಮಟ್ಟದ ಹೃದಯ ತಜ್ಞರಾದ ಡಾ. ವಿ.ಕೆ. ಶ್ರೀನಿವಾಸ್ ಈ ಹಿಂದೆ ಶಿವಣ್ಣ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದರು. ಶಿವಣ್ಣ ಜಾಹೀರಾತಿನಲ್ಲಿ ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ನಟಿಸಿದ್ದು, ಆ ಹಣವನ್ನು ಅಭಿಮಾನಿಗಳ ಆರೋಗ್ಯ ಸೇವೆಗೆ ಬಳಸುವಂತೆ ಮಾಡಿದ್ದಾರೆ. ಎಲ್ಲ ವರ್ಗದ ಜನರಿಗೆ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ವಿ.ಎಸ್.ಎಚ್. ನಿರ್ದೇಶಕಿ ಡಾ. ಕಲ್ಪಜಾ ಅವರ ಕನಸಿಗೆ ಗೀತಾ ಶಿವರಾಜ್‍ಕುಮಾರ್ ಅವರ ಪೆÇ್ರೀತ್ಸಾಹವೂ ಬೆಂಬಲವಾಗಿ ನಿಂತಿದೆ.

ಒಂದು ಬಾರಿ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ತುರ್ತು ಆಂಬುಲೆನ್ಸ್ ಸೇವೆ.ಹೃದಯ ರೋಗ, ಕ್ಯಾನ್ಸರ್, ಡಯಾಲಿಸಿಸ್, ಹೊರರೋಗಿ/ಒಳರೋಗಿ ಸೇವೆಗಳು, ಲ್ಯಾಬ್ ಹಾಗೂ ರೇಡಿಯಾಲಜಿ ಪರೀಕ್ಷೆಗಳಿಗೆ ಆಸ್ಪತ್ರೆ ಶುಲ್ಕದಲ್ಲಿ ಶೇಕಡಾ 25ರಷ್ಟು ರಿಯಾಯಿತಿ ದೊರೆಯಲಿದೆ. 14 ವರ್ಷದೊಳಗಿನ ಮಕ್ಕಳ ಚಿಕಿತ್ಸೆಗೂ ಶೇಡಕಾ 25ರಷ್ಟು ರಿಯಾಯಿತಿ ದೊರೆಯಲಿದೆ

