“ಮ್ಯಾರೇಜ್ ಪಾರ್ಟಿ” ಚಿತ್ರದ ಫಸ್ಟ್ ಲುಕ್ ಬಿಡುಗಡೆ : ಕುತೂಹಲ ಹೆಚ್ಚಳ
ಯುವ ನಿರ್ದೇಶಕ ಚಯನ್ ಶೆಟ್ಟಿ ನಿರ್ದೇಶನದಲ್ಲಿ ಸಂತೋಷ್ ವಿ ನಿರ್ಮಾಣ ಮಾಡಿರುವ `ಮ್ಯಾರೇಜ್ ಪಾರ್ಟಿ’ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು ಪ್ರೇಕ್ಷಕರ ಕುತೂಹಲ ಹೆಚ್ಚು ಮಾಡಿದೆ. ಚಿತ್ರ ಬಿಡುಗಡೆಗೆ ಸಜ್ಜಾಗಿದೆ

ಈ ಹಿಂದೆ ಬಿಗ್‍ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಚಿತ್ರ ನಿರ್ದೇಶನ ಮಾಡಿದ್ದ ಚಯನ್ ಶೆಟ್ಟಿ. ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ವಿಭಿನ್ನ ಕಥೆ ಆಧರಿಸಿ ಹಾಸ್ಯಪ್ರಧಾನ ಚಿತ್ರ ಮ್ಯಾರೇಜ್ ಪಾರ್ಟಿ ವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ
ಈಗಾಗಲೇ ಒಂದಷ್ಟು ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವ ವಿನೀತ್ ಕುಮಾರ್ ಮ್ಯಾರೇಜ್ ಪಾರ್ಟಿ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಕರಾವಳಿ ಭಾಗದಲ್ಲಿ ಘಟಿಸುವ ರಸವತ್ತಾದ ಕಥಾನಕದೊಂದಿಗೆ ಮ್ಯಾರೇಜ್ ಪಾರ್ಟಿ ಬಿಡುಗಡೆಗೆ ಅಣಿಗೊಂಡಿದೆ.

ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‍ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್‍ರಾವ್ ಮುಂತಾದವರ ತಾರಾಗಣವಿರುವ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ

