"The Gopi Diaries Growing App" book release by Dr Sudhamurthy.
ಡಾ.ಸುಧಾಮೂರ್ತಿ ಅವರ “ದ ಗೋಪಿ ಡೈರೀಸ್ ಗ್ರೋವಿಂಗ್ ಆಪ್” ಪುಸ್ತಕ ಬಿಡುಗಡೆ.

ಇನ್ಫೋಸಿಸ್ ಫೌಂಡೇಶನ್ ನ ಡಾ||ಸುಧಾಮೂರ್ತಿ ವಿರಚಿತ “ದ ಗೋಪಿ ಡೈರೀಸ್ ಗ್ರೋವಿಂಗ್ ಆಪ್” ಪುಸ್ತಕ ಇತ್ತೀಚೆಗೆ ಕೋರಮಂಗಲದ ಸ್ವಪ್ನ ಬುಕ್ ಹೌಸ್ ನಲ್ಲಿ ಲೋಕಾರ್ಪಣೆಯಾಯಿತು. ಗೋಪಿ ಸೇರಿದಂತೆ ಸಾಕುನಾಯಿಗಳು ಈ ಸಮಾರಂಭದಲ್ಲಿ ಹಾಜರಿದ್ದವು.

ನಂತರ ಸುಧಾಮೂರ್ತಿ ಮಕ್ಕಳ ಜೊತೆ ಸಂವಾದ ನಡೆಸಿದರು. ಸಾಕುಪ್ರಾಣಿಗಳ ನಿಸ್ವಾರ್ಥ ಪ್ರೀತಿ ಮಾತ್ರ, ಯಂತ್ರಮಯವಾದ ಬದುಕಿನಲ್ಲಿ ನೆಮ್ಮದಿ ತರುತ್ತದೆ. ಮಹಾನಗರದಲ್ಲಿ ಜೀವಿಸುವವರು ಒತ್ತಡದಲ್ಲಿರುತ್ತಾರೆ. ಸಾಕುಪ್ರಾಣಿಗಳು ನಮ್ಮೊಟ್ಟಿಗಿದ್ದರೆ ಒತ್ತಡ ನಿವಾರಣೆಯಾಗುತ್ತದೆ.

“ಗೋಪಿ” ಯನ್ನು ನಮ್ಮ ಮನೆಯವರು ಯಾರು ನಾಯಿ ಎಂದು ಭಾವಿಸಿಲ್ಲ. ಅವನು ನಮ್ಮಲೊಬ್ಬ ಎಂದುಕೊಂಡಿದ್ದೇವೆ. ಮೂರು ವರ್ಷದ ಹಿಂದೆ “ಗೋಪಿ” ಬಗ್ಗೆ ಪುಸ್ತಕ ಬರೆಯಬೇಕೆಂಬ ಆಲೋಚನೆ ಹೊಳೆಯಿತು ಎಂದು ತಿಳಿಸಿದ ಸುಧಾಮೂರ್ತಿ ಅವರು, ಗೋಪಿಯ ವಿಶೇಷ ವರ್ತನೆಗಳ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡರು.