ವ್ಹರ್ಲ್ ಪೂಲ್ ಫ್ರೀಜರ್-ಟು-ಫ್ರಿಜ್ ಪರಿವರ್ತನೆ ಕೇವಲ 10 ನಿಮಿಷಗಳಲ್ಲಿ
ಇಂಡಿಯಾದಲ್ಲಿ ಗೃಹೋಪಯೋಗಿ ಸಾಧನಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮತ್ತು ವಿಶ್ವದ ಪ್ರಸಿದ್ಧ ವರ್ಲ್ಪೂಲ್ ಕಾರ್ಪೊರೇಷನ್ನ ಅಧೀನ ಸಂಸ್ಥೆಯಾಗಿರುವ ವರ್ಲ್ಪೂಲ್ ಆಫ್ ಇಂಡಿಯಾ ಭಾರತದ ಅತ್ಯಂತ ವೇಗದ ಕನ್ವರ್ಟಬಲ್ ರೆಫ್ರಿಜಿರೇಟರ್ ಅನ್ನು ಬಿಡುಗಡೆ ಮಾಡಿದೆ
ವರ್ಲ್ಪೂಲ್ ನ ಇಂಟೆಲಿಫ್ರೆಶ್ ಪ್ರೋ ಶ್ರೇಣಿಯ ಟಾಪ್ ಮೌಂಟ್ ಫ್ರಿಜ್ಗಳು ಹೆಚ್ಚುವರಿ ಆಹಾರವನ್ನು ಸುಧಾರಿತ ರೀತಿಯಲ್ಲಿ ಸಂಗ್ರಹಿಸಲು ಸ್ಮಾರ್ಟ್ ಪರಿಹಾರ ಒದಗಿಸುತ್ತವೆ. ಈ ಫ್ರಿಜ್ಗಳು ಕೇವಲ 10 ನಿಮಿಷಗಳಲ್ಲಿ ಫ್ರೀಜರ್ ಅನ್ನು ಫ್ರಿಜ್ ಆಗಿ ಪರಿವರ್ತಿಸಲಿದೆ.
ಇಂಡಿಯಾದ ಅತಿ ವೇಗದ ಕನ್ವರ್ಟಬಲ್ ಫ್ರಿಜ್ ಶ್ರೇಣಿ ಈಗ ಸಂಪೂರ್ಣ ಆಹಾರ ಸಂರಕ್ಷಣೆಯೊಂದಿಗೆ ನಿಮ್ಮ ಮನೆಯ ಅಗತ್ಯಗಳಿಗೆ ಅನುಗುಣವಾಗಿ ರೂಪುಗೊಂಡಿದೆ. ಇದರಲ್ಲಿ 2 ಪಟ್ಟು ಹೆಚ್ಚು ವಿಟಮಿನ್ ಶೇಖರಣಾ ಸಾಮರ್ಥ್ಯವಿದೆ ಮತ್ತು ಮೈಕ್ರೋಬ್ಲಾಕ್ ತಂತ್ರಜ್ಞಾನವನ್ನು ಒಳಗೊಂಡಿದೆ.
ಶೇಕಡಾ 99 ರಷ್ಡು ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ. ಹಾಗು ಆಹಾರವನ್ನು ಹೆಚ್ಚು ಕಾಲ ತಾಜಾ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಬಳಕೆದಾರರು ತಮ್ಮ ಜೀವನಶೈಲಿಗೆ ಅನುಗುಣವಾಗಿ ಫ್ರಿಜ್ ಸೆಟ್ಟಿಂಗ್ಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು.
ವರ್ಲ್ಪೂಲ್ ಆಫ್ ಇಂಡಿಯಾದ ಮಾರ್ಕೆಟಿಂಗ್ ಉಪಾಧ್ಯಕ್ಷ ನಕುಲ್ ತಿವಾರಿ ಮಾತನಾಡಿ ಕೇವಲ 10 ನಿಮಿಷಗಳಲ್ಲಿ ಫ್ರೀಜರ್ನಿಂದ ಫ್ರಿಡ್ಜ್ಗೆ ತಕ್ಷಣ ಪರಿವರ್ತನೆಯಾಗುವ ಸಾಮರ್ಥ್ಯದೊಂದಿಗೆ, ಇಂಟೆಲಿಫ್ರೆಶ್ ಪ್ರೋ ಶ್ರೇಣಿಯ ಕನ್ವರ್ಟಬಲ್ ಟಾಪ್ ಮೌಂಟ್ ಫ್ರಿಜ್ಗಳನ್ನು ಪರಿಚಯಿಸುವುದಕ್ಕೆ ಉತ್ಸುಕರಾಗಿದ್ದೇವೆ ಎಂದಿದ್ದಾರೆ
ಭಾರತದಲ್ಲಿನ ಅತಿವೇಗದ ಕನ್ವರ್ಟಬಲ್ ಫ್ರಿಡ್ಜ್ ಈಗ ಇನ್ನೂ ಹೆಚ್ಚು ಸೌಲಭ್ಯ ಮತ್ತು ಉಪಯುಕ್ತತೆಯನ್ನು ಒದಗಿಸಲಿದೆ . ವರ್ಲ್ಪೂಲ್ ಇಂಟೆಲ್ಲಿಫ್ರೆಶ್ ಪ್ರೊ ಶ್ರೇಣಿಯ ಕನ್ವರ್ಟಿಬಲ್ ಟಾಪ್ ಮೌಂಟ್ ಫ್ರಿಡ್ಜ್ಗಳು 235 ಲೀಟರ್ನಿಂದ 327 ಲೀಟರ್ ವರೆಗೆ ವಿಭಿನ್ನ ಸಾಮರ್ಥ್ಯಗಳಲ್ಲಿ ಲಭ್ಯವಿದ್ದು, 2 ಸ್ಟಾರ್ಗಳಿಂದ 3 ಸ್ಟಾರ್ಗಳವರೆಗೆ ರೇಟಿಂಗ್ ಹೊಂದಿದ್ದು, ಗೃಹೋಪಯೋಗಿ ಉಪಕರಣಗಳ ಅಂಗಡಿಗಳು ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಖರೀದಿಗೆ ಲಭ್ಯವಿದೆ.ರೂ. 35,000 ದಿಂದ ಪ್ರಾರಂಭವಾಗುವ ಈ ಫ್ರಿಡ್ಜ್ಗಳನ್ನು ವರ್ಲ್ಪೂಲ್ ನ ಅಧಿಕೃತ ವೆಬ್ಸೈಟ್ ಮತ್ತು ಭಾರತಾದ್ಯಂತದ ಪ್ರಮುಖ ಆನ್ಲೈನ್ ರಿಟೇಲರ್ಗಳಲ್ಲಿ ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ

