Rohit out of Bangladesh Test cricket
ಬಾಂಗ್ಲಾ ಟೆಸ್ಟ್ ಕ್ರಿಕೆಟ್‍ನಿಂದ ರೋಹಿತ್ ಹೊರಕ್ಕೆ

ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಬಾಂಗ್ಲಾದೇಶದ ವಿರುದ್ದದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಉಪ ನಾಯಕ ಕೆ.ಎಲ್ ರಾಹುಲ್ ಮುನ್ನೆಡೆಸಲಿದ್ದಾರೆ. ಉಪ ನಾಯಕನಾಗಿ ಚೇತೇಶ್ವರ ಪೂಜಾರ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಎರಡನೇ ಪಂದ್ಯದ ವೇಳೆಗೆ ರೋಹಿತ್ ಶರ್ಮಾ ಚೇತರಿಸಿಕೊಂಡರೆ ಎರಡನೇ ಪಂದ್ಯಕ್ಕೆ ಲಭ್ಯ ಇರಲಿದ್ದಾರೆ. ಇಲ್ಲದಿದ್ದರೆ ಅವರ ಬದಲು ಬೇರೊಬ್ಬರಿಗೆ ಸ್ಥಾನ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ.
ಮೊದಲ ಟೆಸ್ಟ್ ಡಿಸೆಂಬರ್ 14 ರಿಂದ ಆರಂಭವಾಗಲಿದೆ