VK Films acquires distribution rights for `Vishwanath and Sons' in Karnataka

ಕರ್ನಾಟಕದಲ್ಲಿ `ವಿಶ್ವನಾಥ್ ಅಂಡ್ ಸನ್ಸ್’ ವಿತರಣೆಯ ಹಕ್ಕು ಪಡೆದ ವಿಕೆ ಫಿಲ್ಮ್ಸ್ - CineNewsKannada.com

ಕರ್ನಾಟಕದಲ್ಲಿ `ವಿಶ್ವನಾಥ್ ಅಂಡ್ ಸನ್ಸ್’ ವಿತರಣೆಯ ಹಕ್ಕು ಪಡೆದ ವಿಕೆ ಫಿಲ್ಮ್ಸ್

ಸೂರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ `ವಿಶ್ವನಾಥ್ ಅಂಡ್ ಸನ್ಸ್’ ಚಿತ್ರವನ್ನು ಖ್ಯಾತ ನಿರ್ದೇಶಕ ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ ಈ ಚಿತ್ರ ಆಗಸ್ಟ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

ಚಿತ್ರದಲ್ಲಿ ಸೂರ್ಯ, ಮಮಿತಾ ಬೈಜು, ರಾಧಿಕಾ ಶರತ್‍ಕುಮಾರ್, ರವೀನಾ ಟಂಡನ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ, ನಿಮಿಷ್ ರವಿ ಛಾಯಾಗ್ರಹಣ ಹಾಗೂ ನವೀನ್ ನೂಲಿ ಸಂಕಲನ ಚಿತ್ರಕ್ಕಿದೆ.

ಕುಟುಂಬದ ಭಾವನೆಗಳು, ಸಂಬಂಧಗಳ ಮಹತ್ವ ಮತ್ತು ತಲೆಮಾರುಗಳ ನಡುವಿನ ಬಾಂಧವ್ಯವನ್ನು ಮನಮುಟ್ಟುವ ರೀತಿಯಲ್ಲಿ ಹೇಳುವ ಈ ಚಿತ್ರವು ತನ್ನ ಶೀರ್ಷಿಕೆ, ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಸಿನಿಪ್ರಿಯರ ಗಮನ ಸೆಳೆದಿದೆ. ಬಿಡುಗಡೆಗೂ ಮುನ್ನವೇ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.

ಇದೀಗ ವಿಕೆ ಫಿಲ್ಮ್ಸ್ ಮೂಲಕ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿರುವ `ವಿಶ್ವನಾಥ್ ಅಂಡ್ ಸನ್ಸ್’, ರಾಜ್ಯದ ಪ್ರೇಕ್ಷಕರಿಗೆ ಈ ವರ್ಷದ ಅತ್ಯುತ್ತಮ ಕುಟುಂಬ ಮನರಂಜನಾ ಚಿತ್ರಗಳಲ್ಲಿ ಒಂದಾಗುವ ಭರವಸೆ ಮೂಡಿಸಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin