Movie Review : Kanneri a heartwarming film
ಮನಮಿಡಿಯುವ ಚಿತ್ರ ಕನ್ನೇರಿ
ಚಿತ್ರ: ಕನ್ನೇರಿ
ನಿರ್ದೇಶನ: ನೀನಾಸಂ ಮಂಜು
ತಾರಾಗಣ: ಅರ್ಚನಾ, ಅನಿತಾಭಟ್, ಎಂ.ಕೆ ಮಠ, ಅರುಣ್ ಸಾಗರ್, ಸರ್ದಾರ್ ಸತ್ಯ,ನಿಹಾಲ್ , ಕರಿ ಸುಬ್ಬು ಮತ್ತಿತರರು
ರೇಟಿಂಗ್ : **
ಆದಿವಾಸಿಗಳ ಬದುಕು,ಬವಣೆ,ನೋವಿನ ಸರಮಾಲೆಯನ್ನು ಮನಮಿಡಿಯುವಂತೆ ತೆರೆಯ ಮೇಲೆ ಕಟ್ಟಿಕೊಟ್ಟಿರುವ ಚಿತ್ರ “ ಕನ್ನೇರಿ”.
ಆಧುನೀಕರಣ, ಪರಿಸರ ನಾಶದ ಹೆಸರಲ್ಲಿ ವನವಾಸಿಗಳನ್ನು ಒಕ್ಕಲೆಬ್ಬಿಸಿ ಅವರ ಕನಸು ಕಮರಿಸಿ,ಬದುಕಿಗೆ ಬೆಂಕಿ ಇಟ್ಟು ಬೀದಿ ಪಾಲಾಗುವಂತೆ ಮಾಡಿದ್ದೂ ಅಲ್ಲದೆ ಇಲ್ಲ ಸಲ್ಲದ ಪ್ರಕರಣ ದಾಖಲಿಸಿ ಅಮಾಯಕರನ್ನು ಅಮಾನುಷವಾಗಿ ನೋಡಿಕೊಳ್ಳುವ ನೈಜ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ಕಟ್ಟಿಕೊಡಲಾಗಿದೆ.
ಮೈಸೂರು ಮತ್ತು ಕೊಡುಗು ಭಾಗದಲ್ಲಿ ನಡೆದ ನೈಜ ಘಟನೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ನೀನಾಸಂ ಮಂಜು ಅವರು, ಹೃದಯ ತಟ್ಟುವ, ಮನಮುಟ್ಟುವ ಕಥನವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ಚಿತ್ರಿಸಿಕೊಟ್ಟಿದ್ದಾರೆ.

