The much-awaited film "45" is releasing on August 15th: Curiosity is increasing

ಬಹುನಿರೀಕ್ಷಿತ ಚಿತ್ರ “45” ಆಗಸ್ಟ್ 15 ರಂದು ಬಿಡುಗಡೆ : ಕುತೂಹಲ ಹೆಚ್ಚಳ - CineNewsKannada.com

ಬಹುನಿರೀಕ್ಷಿತ ಚಿತ್ರ “45” ಆಗಸ್ಟ್ 15 ರಂದು ಬಿಡುಗಡೆ : ಕುತೂಹಲ ಹೆಚ್ಚಳ

2025ರ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ “45” ಆಗಸ್ಟ್ 15ರಂದು ಸ್ವಾತಂತ್ರ್ಯ ದಿನೋತ್ಸವದಂದು ಬಿಡುಗಡೆಯಾಗಲಿದೆ. ಈ ಮೂಲಕ ಕನ್ನಡz Àಸಿನಿಪ್ರೇಕ್ಷಕರಿಗೆ ಹೊಸ ಬಗೆಯ ವಿನೂತನ ಚಿತ್ರವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳಲ್ಲಿ ಕಾತುರ ಹೆಚ್ಚಾಗಿದೆ.

ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‍ಗಳಾದ ಡಾ.ಶಿವರಾಜ್ ಕುಮಾರ್, ಉಪೇಂದ್ರ, ಭರವಸೆಯ ನಟ ರಾಜ್ ಬಿ ಶೆಟ್ಟಿ ಸಮಾಗಮ ಒಂದೆಡೆಯಾದರೆ ಚಿತ್ರರಂಗದಲ್ಲಿ ಸಧಬಿರುಚಿತ್ರ ನಿರ್ಮಾಪಕ ಎಂದೇ ಖ್ಯಾತಿ ಪಡೆದಿರುವ ಎಂ ರಮೇಶ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸಿನಿಮಾ ಲೋಕದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಚಿತ್ರ ಬಗ್ಗೆ ಮತ್ತಷ್ಟು ಕುತೂಹಲ ಗರಿಗೆದರುವಂತೆ ಮಾಡಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು “45” ಚಿತ್ರದ ಬಿಡುಗಡೆ ದಿನಾಂಕ ಮತ್ತು ಹಾಡು ಬಿಡುಗಡೆ ದಿನಾಂಕ ಪ್ರಕಟಿಸಿ ಶುಭಕೋರಿದರು. ಈ ನಿರ್ಮಾಪಕರಾದ ಕೆ ವೆಂಕಟ್ ನಾರಾಯಣ್, ಕೆ. ಮಂಜು, ನಿರ್ದೇಶಕ ಇಂದ್ರಜಿತ್ ಲಂಕೇಶ್ ,ಸಾಹಸ ನಿರ್ದೇಶಕರಾದ ರವಿವರ್ಮ, ಡಿಫರೆಂಟ್ ಡ್ಯಾನಿ,ಛಾಯಾಗ್ರಾಹಕ ಸತ್ಯ ಹೆಗಡೆ ಸೇರಿದಂತೆ ಚಿತ್ರರಂಗದ ಅನೇಕರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

ಅಮೇರಿಕಾದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಶಿವರಾಜ್‍ಕುಮಾರ್ ಅವರು ಅಲ್ಲಿಂದಲೇ ಚಿತ್ರಕ್ಕೆ ಶುಭಕೋರಿದ್ದಾರೆ. ಇದು ಶಿವಣ್ಣ ಅವರಲ್ಲಿ ಸಿನಿಮಾ ಮತ್ತು ಚಿತ್ರತಂಡದ ಮೇಲಿರುವ ಪ್ರೀತಿಗೆ ಸಾಕ್ಷಿಯಾಗಿತ್ತು.

“45” ಚಿತ್ರ ಮೂಡಿ ಬಂದಿರುವ ಬಗೆ, ಅದರ ಮೊದಲ ಬಾರಿಗೆ ನಿರ್ದೇಶನ ಮಾಡಿದರೂ ಅನುಭವಿ ನಿರ್ದೇಶಕರಂತೆ ಸಿನಿಮಾ ಕಟ್ಟಿಕೊಟ್ಟಿರುವ ಅರ್ಜುನ್ ಜನ್ಯ ಅವರ ಪ್ರಯತ್ನವನ್ನು ಸಿನಿ ಗಣ್ಯರು ಹಾಡಿ ಹೊಡಗಳಿದ್ದು ಕನ್ನಡಕ್ಕೆ ಮತ್ತೊಬ್ಬ ಪ್ರಶಾಂತ್ ನೀಲ್ ಎಂದು ಗುಣಗಾನ ಮಾಡಿದ್ದು ಅರ್ಜುನ್ ಜನ್ಯ ಅವರ ಕೆಲಸಕ್ಕೆ ಕೈ ಗನ್ನಡಿಯಂತಿತ್ತು.

ನಿರ್ಮಾಪಕ ಎಂ.ರಮೇಶ್ ರೆಡ್ಡಿ ಮಾತನಾಡಿ, ಚಿತ್ರದಲ್ಲಿ ಕಂಟೆಂಟು ಹೇಗೆ ಇದೆ ಎನ್ನುವುದು ಮುಖ್ಯ. ಚಿತ್ರ ಒಂದು ಸಾವಿರ ಕೋಟಿ ರೂಪಾಯಿ ಮಾಡುತ್ತೋ, 100 ಕೋಟಿ ರೂಪಾಯಿ ಗಳಿಸುತ್ತೋ ಅಥವಾ 50 ಕೋಟಿ ಮಾಡುತ್ತೋ ದೇವರಿಗೆ ಗೊತ್ತು, ಆದರೆ ಚಿತ್ರ ಮೂಡಿ ಬಂದಿರುವ ಬಗೆ ಚಿತ್ರದ ಬಗೆಗಿನ ಕುತೂಹಲ ನೋಡಿದರೆ ಕನಿಷ್ಠ 100 ಕೋಟಿಗೂ ಅಧಿಕ ವ್ಯವಹಾರ ಮಾಡಲಿದೆ. ಚಿತ್ರ ಮತ್ತು ಕಥೆಗೆ ಎಷ್ಟು ಬಂಡವಾಳ ಬೇಕೋ ಅಷ್ಟು ಹಾಕಿದ್ದೇವೆ ಎಂದು ಹೇಳಿಕೊಂಡರು.

ನಟ ಉಪೇಂದ್ರ ಮಾತನಾಡಿ, ನಿರ್ದೇಶಕ ಮತ್ತು ನಿರ್ಮಾಪಕರ ಕಾಂಬಿನೇಷನ್ ಅದ್ಬುತ, ಎಲ್ಲಾ ಕಿರುಕುಳ ತಡೆದುಕೊಂಡು ತಂತ್ರಜ್ಞರಾಗಿ ನಿರ್ದೇಶಕ ಅರ್ಜುನ್ ಜನ್ಯ ಸಿನಿಮಾ ಮಾಡಿದ ಪರಿಗೆ ಮೆಚ್ಚುವಂತದ್ದು, ಶಿವಣ್ಣ, ನನ್ನದು ಮತ್ತು ರಾಜ್ ಬಿ ಶೆಟ್ಟಿ ಅವರದು ವಿಭಿನ್ನ ಲುಕ್, ವಿಚಿತ್ರವಾದ ಕತೆ, ಅದ್ಬುತವಾದ ವಿಷಯದ ಕತೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ.ಒಳ್ಳೆಯದಾಗಲಿ. ಚಿತ್ರತಂಡದ ಸಂಭ್ರಮ ನೋಡಿದರೆ ಚಿತ್ರದ ದಿನಾಂಕ ಪ್ರಕಟ ಅಲ್ಲ, ಬದಲಾಗಿ ಚಿತ್ರದ ಸಕ್ಸಸ್ ಮೀಟ್ ನಂತಿದೆ. ಶಿವಣ್ಣ ಅವರಿಗೆ ಎದುರು ನೋಡುತ್ತಿದ್ದೇವೆ. ಬೇಗ ಬನ್ನಿ ಎಂದರು.

ನಟ ರಾಜ್ ಬಿ ಶೆಟ್ಟಿ ಮತನಾಡಿ ,ಕನ್ನಡಿಗನಾಗಿ ಕನ್ನಡ ಸಿನಿಮಾ ಪ್ರೇಕ್ಷಕನಾಗಿ 45 ಚಿತ್ರ ಬಿಡುಗಡೆಗಾಗಿ ಎದುರು ನೋಡುತ್ತಿದ್ದೇನೆ. ಉತ್ತಮ ತಂತ್ರಜ್ಞರ ಜೊತೆ ಕೆಲಸ ಮಾಡಿದ್ದು ನನ್ನ ಭಾಗ್ಯ,. ಹೊಸ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಹೆಗಲು ಕೊಟ್ಟ ರೀತಿ ಮೆಚ್ಚುಗೆ ಇದೆ. ಈ ಚಿತ್ರದಲ್ಲಿ ಕೆಲಸ ಮಾಡಲ್ಲ ಎಂದು ಅರ್ಜುನ್ ಜನ್ಯ ಅವರ ಕಾಲಿಗೂ ಬಿದ್ದಿದ್ದೆ. ನಿರ್ದೇಶನ ಮಾಡಬೇಕಾಗಿದೆ. ಕಾಂಬಿನೇಷನ್ ಚಿತ್ರ ತಡೆ ಆಗಲಿದೆ ಎನ್ನುವದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಹೇಳಿದರು

“45” ಚಿತ್ರ ಮೂಡಿ ಬಂದ ಪರಿ ಅದ್ಬುತ, ಅರ್ಜುನ್ ಜನ್ಯ ಕೆಲಸ ಮಾಡಿದ ಪರಿ ಬೇರೆ ಯಾವ ನಿರ್ದೇಶಕರಲ್ಲಿ ನೋಡಿಲ್ಲ,. ಅದೇ ರೀತಿ ನಿರ್ಮಾಪಕ ರಮೇಶ್ ರೆಡ್ಡಿ ಅವರು ಚಿತ್ರಕ್ಕೆ ಏನು ಬೇಕೋ ಅದನ್ನು ನೀಡಿದ್ದಾರೆ. ಚಿಕ್ಕ ಕಲಾವಿದನಿಗೂ ಕೂಡ ಹೆಚ್ಚಿನ ಅವಕಾಶ ನೀಡಿದ ಶಿವಣ್ಣ ಮತ್ತು ಉಪೇಂದ್ರ ಅವರನ್ನು ಅಭಿಮಾಯಾಗಿ ಸಿನಿಮಾ ನೋಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಸಾಹಸ ನಿರ್ದೇಶಕರಾದ ಡಾ.ರವಿವರ್ಮ, ಛಾಯಾಗ್ರಾಹಕ ಸತ್ಯ ಹೆಗಡೆ ಸೇರಿದಂತೆ ಚಿತ್ರತಂಡದ ಸದಸ್ಯರು ಮತ್ತು ಗಣ್ಯರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin