ನಿರ್ದೇಶಕನಾಗುತ್ತೇನೆ ಎನ್ನುವ ಕಲ್ಪನೆಯೂ ಇರಲಿಲ್ಲ: ಅರ್ಜುನ್ ಜನ್ಯ

ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ “45” ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿದ್ದು ಚಿತ್ರದ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ.

ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲು ತಂಡ ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ಈ ವೇಳೆ ನಿರ್ಮಾಪಕ ಎಂ. ರಮೇಶ್ ರೆಡ್ಡಿ ಸೇರಿದಂತೆ ಚಿತ್ರತಂಡ ಉಪಸ್ಥಿತರಿದ್ದರು.
ಈ ವೇಳೆ ಮಾತಿಗಳಿ ನಿರ್ದೇಶಕ ಅರ್ಜುನ್ , 45 ಚಿತ್ರದ ಚಿತ್ರೀಕರಣ ಈಗಾಗಲೇ ಸಂಪೂರ್ಣ ಪೂರ್ಣಗೊಂಡಿದೆ. ಡಬ್ಬಿಂಗ್ ಸೇರಿದಂತೆ ಎಲ್ಲಾ ಕೆಲಸ ಮುಗಿದಿದೆ. ಚಿತ್ರದಲ್ಲಿ ಗ್ರಾಫಿಕ್ ಕೆಲಸ ಇದೆ. ಆ ಕಾರಣಕ್ಕಾಗಿಯೇ ಆಗಸ್ಟ್ 15 ರಂದು ಚಿತ್ರ ಬಿಡುಗಡೆಯ ದಿನಾಂಕ ಪ್ರಕಟಿಸಲಾಗಿದೆ., ಮೇ ತಿಂಗಳ ಅಂತ್ಯದ ವೇಳೆಗೆ ಗ್ರಾಫಿಕ್ ಕೆಲಸ ಮುಗಿಯಲಿದೆ., ಅಂತಿಮವಾಗಿ ಏನಾದರೂ ಕರೆಕ್ಷನ್ ಇದ್ದರೆ ಒಂದಷ್ಟು ಸಮಯ ತೆಗೆದುಕೊಂಡಿದ್ದೇವೆ ಎಂದರು.
ಶಿವಣ್ಣ ಅವರು ಅಮೇರಿಕಾದಲ್ಲಿ ಇದ್ದರೂ ಚಿತ್ರದ ಬಗ್ಗೆ ಮಾಹಿತಿ ಪಡೆದು ಬೈಟ್ ಕಳುಹಿಸಿಕೊಟ್ಟಿದ್ದಾರೆ ಅದುವೇ ಅವರ ದೊಡ್ಡ ಗುಣ. ಉಪೇಂದ್ರ ಅವರು ನಿರ್ದೇಶಕರ ನಿರ್ದೇಶಕ, ಅವರ ಜೊತೆ ಕೆಲಸ ಮಾಡುವುದೇ ನಮ್ಮ ಪುಣ್ಯ. ಒಂದು ಶಾಟ್‍ನ ಸನ್ನಿವೇಶ ಬೇಕೂ ಅಂದಾಗಲೂ ಯಾವುದಕ್ಕೂ ಬೇಜಾರು ಮಾಡಿಕೊಳ್ಳದೆ ಪ್ರಾಕ್ಟೀಸ್ ಮಾಡಿ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ನಟಿಸಲು ಒಪ್ಪಿಕೊಂಡಿರುವುದು ಖುಷಿ ಆಗಿದೆ. ಇನ್ನು ನಿರ್ಮಾಪಕ ರಮೇಶ್ ರೆಡ್ಡಿ ಅವರು ನಂಬಿ ಕೋಟ್ಯಂತರ ರೂಪಾಯಿ ಹಾಕಿದ್ದಾರೆ. ಅವರ ಋಣ ಹೇಗೆ ತೀರಿಸಬೇಕು ಗೊತ್ತಾಗುತ್ತಿಲ್ಲ. ನಾವು ಸದಾ ಅವರಿಗೆ ಋಣಿ ಎಂದರು.

ನಿರ್ದೇಶಕನಾಗುತ್ತೇನೆ ಎಂದೂ ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲ,. ತಾನಾಗಿಯೇ ಕತೆ ಬಂತು, ಆಮೇಲೆ ಕಥೆಗೆ ಇವರೇ ಸೂಟ್ ಆಗ್ತಾರೆ ಎಂತ ಯಾವ ಧೈರ್ಯದಲ್ಲಿ ಕೇಳಿದೆ ಇವಾಗ ನೆನಪಿಸಿಕೊಂಡರೂ ಆಶ್ಚರ್ಯವಾಗುತ್ತೆ. ನನಗೆ ಬಹುತಾರಾಗಣದ ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದು ಯಾವ ಗ್ಯಾರಂಟಿ ಇರಲಿಲ್ಲ, ನನ್ನ ಸಿನಿಮಾದಲ್ಲಿ ಶಿವಣ್ಣ ಇದ್ದಾರಾ, ಉಪ್ಪಿ ಸರ್ ನಟಿಸಿದ್ದಾರೆ, ರಾಜ್ ಬಿ ಶೆಟ್ಟಿ ಇದ್ದಾರೆ ಎನ್ನುವುದು ಈಗಲೂ ಕಾಡುತ್ತದೆ. ಕತೆ ಚಿತ್ರಕಥೆ ಚಿತ್ರದ ನಿಜವಾದ ಹೀರೋ ಅದು ಎಲ್ಲರನ್ನು ಹಿಡಿದಿಟ್ಟಿದೆ ಎಂದರು
ಶಿವಣ್ಣ 150 ಚಿತ್ರ ಮಾಡಿದ್ದಾರೆ. ಅವರೂ ಒಬ್ಬ ನಿರ್ದೇಶಕರಂತೆ ಮೂರು ದೊಡ್ಡ ನಿರ್ದೇಶಕರ ಜೊತೆ ಸಣ್ಣದಾಗಿ ನಿಂತಿದದ್ದೆ. ಎಲ್ಲರು ಸಹಕಾರ ಮಾಡಿದರು. ಹೀಗಾಗಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ವಿಎಫ್ ಎಕ್ಸ್ ಗಾಗಿ ಕಾಯುತ್ತಿದ್ದೇವೆ. ಚಿತ್ರ ನೋಡಿದರೆ ಲಾಜಿಕ್ ಮ್ಯಾಜಿಕ್ ಎಲ್ಲವೂ ಅರ್ಥವಾಗುತ್ತದೆ, 45 ಚಿತ್ರಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದರು