Muhurat for the film "Daiji" starring actor Ramesh Aravind

ನಟ ರಮೇಶ್ ಅರವಿಂದ್ ನಟನೆಯ “ದೈಜಿ” ಚಿತ್ರಕ್ಕೆ ಮುಹೂರ್ತ - CineNewsKannada.com

ನಟ ರಮೇಶ್ ಅರವಿಂದ್ ನಟನೆಯ “ದೈಜಿ” ಚಿತ್ರಕ್ಕೆ ಮುಹೂರ್ತ

ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರೂಪಕ ಸೇರಿದಂತೆ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವ ರಮೇಶ್ ಅರವಿಂದ್ ಅಭಿನಯದ 106ನೇ ಚಿತ್ರ “ದೈಜಿ” ಚಿತ್ರಕ್ಕೆ ಮುಹೂರ್ತ ನೆರವೇರಿದೆ.

ಶಿವಾಜಿ ಸೂರತ್ಕಲ್ ಭಾಗ-1 ಮತ್ತು ಶಿವಾಜಿ ಸೂರತ್ಕಲ್ ಭಾಗ 2 ನಂತರ ನಿರ್ದೇಶಕ ಆಕಾಶ್ ಶ್ರೀವತ್ಸ , ನಟ ರಮೇಶ್ ಅರವಿಂದ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ “ದೈಜಿ”

ಚಿತ್ರಕ್ಕೆ ವಿಭಾ ಕಶ್ಯಪ್ ಬಂಡವಾಳ ಹೂಡುತ್ತಿದ್ದಾರೆ. ಸಂಸ್ಥೆ ಮುಖ್ಯಸ್ಥ ರವಿಕಶ್ಯಪ್ , ಇದರ ನಿರ್ದೇಶಕರು ಆಕಾಶ್ ಶ್ರೀವತ್ಸ ರವರು ಈ ಹಿಂದೆ ಶಿವಾಜಿ ಸೂರತ್ಕಲ್ ಭಾಗ-1 ಮತ್ತು ಶಿವಾಜಿ ಸೂರತ್ಕಲ್ ಭಾಗ 2ನ್ನು ಸರಣಿಯಾಗಿ ನಿರ್ದೇಶಿಸಿದ್ದು ಇದೂ ಮೂರನೇ ಚಿತ್ರ

ನಾಯಕಿಯಾಗಿ ರಾಧಿಕಾ ನಾರಾಯಣ್ ನಟಿಸುತ್ತಿದ್ದಾರೆ. ಈ ಮುಂಚೆಯೂ ಸಹ ಶಿವಾಜಿ ಸುರತ್ಕಲ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ .ಚಿತ್ರಕ್ಕೆ ಶ್ರೀಶ ಕುದುವಳ್ಳಿ ಛಾಯಾಗ್ರಹಣವಿದೆ,ಚಿತ್ರದ ಚಿತ್ರೀಕರಣ ಅತಿ ಶೀಘ್ರದಲ್ಲಿ ವಿದೇಶದಲ್ಲಿ ಪ್ರಾರಂಭವಾಗಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin