ಕನ್ನಡದಲ್ಲೊಂದು ವಿಭಿನ್ನ ಚಿತ್ರ “ನಿಮಗೊಂದು ಸಿಹಿಸುದ್ದಿ” ಮೋಷನ್ ಪೋಸ್ಟರ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಬಗೆಯ ಕಥೆಗಳು ,ಕಂಟೆಂಟು ಸಿನಿಮಾಗಳು ತೆರೆಗೆ ಬರುತ್ತಿವೆ. ಅದರ ಸಾಲಿಗೆ ಮತ್ತೊಂದು ಸೇರ್ಪಡೆ” ನಿಮಗೊಂದು ಸಿಹಿ ಸುದ್ದಿ”, ಪುರುಷ ಗರ್ಭಿಣಿ ಆಗಿ ಆ ನಂತರದ ಸವಾಲು ಸಂಕಷ್ಟ ಎದುರಿಸುವ ಕತೆಯನ್ನು ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದಾರೆ ರಘು ಭಟ್.

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.ಯುವಕನೊಬ್ಬ ಗರ್ಭಧರಿಸುವುದು ಜಗತ್ತಿನ ಅಚ್ಚರಿ. ಇಂತಹ ವಿಷಯವನ್ನು ಮುಂದಿಟ್ಟುಕೊಂಡು ಸಿನಿಮಾ ರೂಪದಲ್ಲಿ ಜನರ ಮುಂದಿಡಲು ಮುಂದಾಗಿದ್ದಾರೆ ನಟ ನಿರ್ದೇಶಕ ಬರಹಗಾರ ಬಹುಮುಖ ಪ್ರತಿಭೆ ರಘು ಭಟ್.
ಪೋಸ್ಟರ್ ಬಿಡುಗಡೆಯ ಬಳಿಕ ಮಾತಿಗಿಳಿದ ನಟ, ನಿರ್ದೇಶಕ ರಘುಭಟ್, “ನಿಮಗೊಂದು ಸಿಹಿ ಸುದ್ದಿ” ವಿಭಿನ್ನ ಪ್ರಯತ್ನ ಮುಂದಿನ ದಿನಗಳಲ್ಲಿ ಸೀಮಂತ ಡೆಲಿವರಿ ಎಲ್ಲವೂ ಆಗುತ್ತೆ ಅದು ಹೇಗೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಚಿತ್ರದ ಕಥೆಗೆ ಮಹಾಭಾರತ ಸ್ಪೂರ್ತಿ. ಅದರಲ್ಲಿ ಕೃಷ್ಣ ಅರ್ಜುನರ ವಿಚಾರ ಅರ್ಜುನ ಬ್ರಾಹ್ಮಣ್ಯ ಆಗಿ ಒಂದಷ್ಟು ಜರ್ನಿ ಮಾಡಿದ್ದು ನನ್ನ ಕಣ್ಮುಂದೆ ಬಂತು, ಪ್ರಪಂಚದಾದ್ಯಂತ ಮಾಡಿದ ಸಂಶೋಧನೆಗಳಲ್ಲಿ ಗಂಡು ಗರ್ಭಿಣಿಯಾದಂತಹ ಘಟನೆ ನಡೆದಿವೆ, ಚಿತ್ರದಲ್ಲಿ ನನ್ನ ಹೆಸರು ಅರ್ಜುನ್, ಅರ್ಜುನ್ ಪಾತ್ರಧಾರಿ ಗರ್ಭಿಣಿಯಾಗುತ್ತಾನೆ, ಹೇಗಾಗುತ್ತಾನೆ ಅನ್ನೋದೇ ಚಿತ್ರದ ಟ್ವಿಸ್ಟ್ ಎಂದರು
ತಮಿಳುನಾಡಿನ ವಿಕ್ರಂ, ಸೂರ್ಯ ತರದ ನಟರು ತರಹದ ವಿಭಿನ್ನ ಪ್ರಯತ್ನ ಮಾಡಿ ಸಿನಿಮಾಗಳನ್ನು ಮಾಡುತ್ತಾರೆ ಅದೇ ಹಾದಿಯಲ್ಲಿ ನಡೆಯುವ ಪ್ರಯತ್ನ.ರೈತರಾಗಿ ಬಹಳಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಇದೆ. ನಾಯಕ ನಟನಾಗಿ ನಟಿಸುತ್ತಿರುವ ಮತ್ತೊಂದು ಸಿನಿಮಾ ನಡಿತಾ ಇದೆ, ನಿಮಗೊಂದು ಸಿಹಿ ಸುದ್ದಿ ಸಿನಿಮಾ ರಿಲೀಸ್ ಆದ ನಂತರ ಮುಂದಿನ ಮಾಹಿತಿ ನೀಡುವುದಾಗಿ ಹೇಳಿದರು

ಪುನೀತ್ ರಾಜ್ ಕುಮಾರ್ ಅಂದ್ರೆ ಪ್ರಾಣ
ನಿರ್ಮಾಪಕ ಹರೀಶ್ ಗೌಡ ಮಾತನಾಡಿ ಮೊದಲ ಪ್ರಯತ್ನ ಅಪ್ಪಟ ಕನ್ನಡ ಸಿನಿಮಾಗಳ ಅಭಿಮಾನಿ ಅದರಲ್ಲೂ ಡಾ. ಪುನೀತ್ ರಾಜಕುಮಾರ್ ಅಂದ್ರೆ ನಂಗೆ ಪ್ರಾಣ.ಗಂಡಸೊಬ್ಬ ಗರ್ಭಿಣಿ ಆಗುತ್ತಾನೆ ಅನ್ನೋದೇ ತುಂಬಾ ಇಂಟರೆಸ್ಟಿಂಗ್ ಆದಂತಹ ವಿಷಯ ಹೀಗಾಗಿ ಕಥೆ ನನಗೆ ಇಷ್ಟ ಆಯ್ತು ಇಂಥದೊಂದು ಪ್ರಯತ್ನ ಮಾಡಿರುವ ಚಿತ್ರಕ್ಕೆ ಬಂಡವಾಳ ಹಾಕಿದ್ದೇನೆ ಎಂದರು
ಹಿರಿಯ ನಟಿ ಹರಿಣಿ, ನಿಮಗೊಂದು ಸಿಹಿ ಸುದ್ದಿ ತುಂಬಾ ಒಳ್ಳೆಯ ಕಾನ್ಸೆಪ್ಟ್. ಕಥೆಯನ್ನು ತುಂಬಾ ಕುತೂಹಲದಿಂದ ಕೇಳಿ ಪಾತ್ರ ಒಪ್ಪಿಕೊಂಡಿದ್ದೇನೆ ಹೆಣ್ಣಿಗೆ ಪುನರ್ಜನ್ಮ ಸಿಗೋದೇ ತಾಯಿಯಾಗಿ ಆ ಫೀಲ್ ಅನುಭವಿಸಿದಾಗ ಮಾತ್ರ ಇಲ್ಲಿ ಗಂಡು ಗರ್ಭಿಣಿಯಾಗುತ್ತಾನೆ, ತಾಯಿಯ ಅನುಭವ ಪಡುತ್ತಾನೆ ಅನ್ನೋದೇ ದೊಡ್ಡ ಗಟ್ಟಿಯಾದಂತಹ ಕಥಾ ಹಂದರ ಹೊಂದಿದೆ. ಇಲ್ಲಿಯ ತನಕ ಮಾಡಿದ ಹಲವಾರು ಸಿನಿಮಾಗಳಲ್ಲಿನ ಪಾತ್ರಗಳಿಗಿಂತಲೂ ಇದೊಂದು ವಿಭಿನ್ನ ಪಾತ್ರ, ಚಿತ್ರದಲ್ಲಿ ನಾಯಕನ ಪಕ್ಕದ ಮನೆಯ ಆಂಟಿಯ ಪಾತ್ರ ಮಾಡಿದ್ದು ನಾಯಕನ ಕಷ್ಟಕ್ಕೆ ಸಹಾಯ ಮಾಡುವಂತದ್ದು ಎಂದು ಹೇಳಿದರು
ಚಿತ್ರದ ಸಾಹಿತಿ ಪ್ರಮೋದ್ ಮರವಂತೆ ಮಾತನಾಡಿ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದು ನನಗೆ ಖುಷಿ ಕೊಟ್ಟಿದೆ..ಸ್ಯಾಂಡಲ್ ವುಡ್ ನಲ್ಲಿ ಸಿಹಿ ಸುದ್ದಿಗಳು ಜಾಸ್ತಿ ಆಗಬೇಕು ಜಾಸ್ತಿ ಸಿಗಬೇಕು ಅದು ಸಕ್ಸಸ್‍ನ ಸಿಹಿ ಸುದ್ದಿ ಆಗಬೇಕು. ನಿಮಗೊಂದು ಸಿಹಿಸುದ್ದಿಚಿತ್ರಕ್ಕೆ ಕಥೆ ಬರೆದಂತಹ ರಘು ಭಟ್ ಮೂಲತಃ ಒಬ್ಬ ರೈಟರ್ ಆಗಿರುವುದರಿಂದ ಅವರಿಗೆ ಬರವಣಿಗೆಯ ಮೇಲೆ ಸಕ್ಕತ್ತು ಗ್ರಿಪ್ ಇದೆ ಸ್ವತಹ ರೈಟರ್ ಆಕ್ಟರ್ ಹಾಗೂ ಡೈರೆಕ್ಟರ್ ಆಗಿರುವ ಕಾರಣ ಚಿತ್ರಕ್ಕೆ ದೊಡ್ಡ ಮಟ್ಟದ ಪ್ಲಸ್ ಆಗುತ್ತೆ ಎಂದರು

ಹರೀಶ್ ಎನ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಸೂಕ್ಷ್ಮ ಹಾಗೂ ವಿಶಿಷ್ಟ ಕಥಾಹಂದರವನ್ನ ಹೊಂದಿರುವ ಚಿತ್ರದಲ್ಲಿ ರಘು ಭಟ್‍ಗೆ ಜೊತೆಯಾಗಿ ಕಾವ್ಯ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್ ಮತ್ತು ಪ್ರಜ್ವಲ್ ಸೇರಿದಂತೆ ಪ್ರತಿಭಾವಂತ ತಾರಾಬಳಗವಿದೆ.
ಆನಂದ್ ಸುಂದ್ರೇಶ್ ಛಾಯಾಗ್ರಹಣ, ಅಶ್ವಿನ್ ಹೇಮಂತ್ ಸಂಗೀತ, ನವೀನ್ ತೇಜ್ ಮತ್ತು ರಘುನಾಥ್ ಎಲ್ ಸಂಕಲನ ಚಿತ್ರಕ್ಕಿದೆ.