Saik Jayantha's 'Mr Rani' releases on February 7

ಸೈಕ್ ಜಯಂತನ “ಮಿಸ್ಟರ್ ರಾಣಿ’ ಫೆಬ್ರವರಿ 7ಕ್ಕೆ ಬಿಡುಗಡೆ - CineNewsKannada.com

ಸೈಕ್ ಜಯಂತನ “ಮಿಸ್ಟರ್ ರಾಣಿ’ ಫೆಬ್ರವರಿ 7ಕ್ಕೆ ಬಿಡುಗಡೆ

“ಲಕ್ಷ್ಮೀ ನಿವಾಸ” ಧಾರಾವಾಹಿಯಲ್ಲಿ ಸೈಕೋ ಜಯಂತ್ ಆಗಿ ನಟಿಸುತ್ತಿರುವ ದೀಪಕ್ ಸುಬ್ರಮಣ್ಯ ಇದೀಗ “ಮಿಸ್ಟರ್ ರಾಣಿ” ಆಗಿರುವುದು ಎಲ್ಲರಿಗೆ ಗೊತ್ತಿದೆ. ಚಿತ್ರ ಇದೇ 7 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ

ಸೈಕೋ ಜಯಂತ್ ಅಲಿಯಾಸ್ ದೀಪಕ್ ಸುಬ್ರಹ್ಮಣ್ಯ “ಮಿಸ್ಟರ್ ರಾಣಿ” ಚಿತ್ರದಲ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ, ಹುಡುಗಿ ಎಂದು ಡ್ರಾಮ ಮಾಡಿ ಎಲ್ಲರನ್ನೂ ಹೆಂಗೆ ಯಾಮಾರಿಸಿದ ನಂಬರ್ ಓನ್ ಹೀರೋಯಿನ್ ಹೆಂಗೆ ಆದ ಎನ್ನುವ ಕಥೆಯ ತಿರುಳು ಹೊಂದಿರುವ ಚಿತ್ರ ಇದು.

ಸೆಲ್ಪಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾ ಮಾಡಿದಂತ ನಿರ್ದೇಶಕ ಮಧುಚಂದ್ರ ಸಿನಿಮಾದ ನಿರ್ದೇಶಕ..ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಮಂಜ ಸಿನಿಮಾದಲ್ಲಿ ಇನ್ನೂ ಜಾಸ್ತಿ ಮಜ ಕೊಡಲು ಮುಂದಾಗಿದ್ದಾರೆ

ರಾಣಿ ಹೀರೋಯಿನ್ ಆದ್ರೆ ಟ್ರೈಲರ್ ನಲ್ಲಿ ಇರೋ ಇನ್ನೊಬ್ಬಳು ಹೀರೋಯಿನ್ ಪಾರ್ವತಿ ನಾಯರ್ ಯಾವ ರೀತಿ ಟ್ವಿಸ್ಟ್ ಕೊಡ್ತಾರೆ ಎನ್ನುವದುನ್ನು ಚಿತ್ರದಲ್ಲಿ ನೋಡಬೇಕು

ಬಾಹುಬಲಿ ಸಿನಿಮಾದ ಅಸಿಸ್ಟೆಂಟ್ ಕ್ಯಾಮೆರಾ ಮೆನ್ ಆಗಿದ್ದ ರವೀಂದ್ರನಾಥ ಸಿನಿಮಾದ ಕ್ಯಾಮೆರಾ ಮೆನ್ ಆಗಿದ್ದಾರೆ.
ಸಿನಿಮಾ ಟ್ರೈಲರ್ ನಲ್ಲಿ ತೋರಿಸಿರುವ ಅನಿಮೇಷನ್ ಕ್ವಾಲಿಟಿ ಯಾವ ಬಾಲಿವುಡ್ ಲೆವೆಲ್ ಗೂ ಕಮ್ಮಿಯಿಲ್ಲ. ಹಲವು ವಿಶೇಷತೆ ಇರುವ ಚಿತ್ರ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin