"Orphaned cat shelter and adoption center starts: Actress Samyukta Horanadu a different endeavor

“ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ ಆರಂಭ: ನಟಿ ಸಂಯುಕ್ತ ಹೊರನಾಡು ವಿಭಿನ್ನ ಪ್ರಯತ್ನ - CineNewsKannada.com

“ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ ಆರಂಭ: ನಟಿ ಸಂಯುಕ್ತ ಹೊರನಾಡು ವಿಭಿನ್ನ ಪ್ರಯತ್ನ

ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆ ಟೆಕಿಯಾನ್ ಬೆಂಗಳೂರಿನಲ್ಲಿ “ಅನಾಥ ಬೆಕ್ಕುಗಳ ಆಶ್ರಯ ಮತ್ತು ದತ್ತು ಕೇಂದ್ರ” ತೆರೆಯಲು ಪ್ರಾಣಾ ಅನಿಮಲ್ ಫೌಂಡೇಶನ್‌ ನೊಂದಿಗೆ ಕೈಜೋಡಿಸಿದೆ. ನಟಿ ಸಂಯುಕ್ತ ಹೊರನಾಡು ವಿಭಿನ್ನ ಪ್ರಯತ್ನದ ಕೇಂದ್ರವಾಗಿದೆ.

ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ ಟೆಕಿಯಾನ್ ಸಂಸ್ಥೆಯ ಮುಂದುವರೆಸುತ್ತಿರುವ ಬದ್ಧತೆಯ ಭಾಗವಾಗಿದೆ.
ಕನಕಪುರ ರಸ್ತೆಯಲ್ಲಿರುವ ಕೇಂದ್ರ ಅನಾಥ, ಗಾಯಗೊಂಡ, ರಕ್ಷಿಸಲ್ಪಟ್ಟ ಮತ್ತು ಬೆಕ್ಕುಗಳಿಗೆ ಸಮಗ್ರ ಆರೈಕೆ ನೀಡುತ್ತದೆ. ಈ ಸೇವೆಯಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಆಶ್ರಯ ಮತ್ತು ದತ್ತು ಪಡೆಯುವ ಕ್ರಿಯೆಗಳು ಸೇರಿವೆ.

ಕೇಂದ್ರದ ಸೇವಾ ಸೌಲಭ್ಯಗಳ ಕುರಿತು ಟೆಕಿಯಾನ್‌ ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ರಾಣಾ ರಾಬಿಲಾರ್ಡ್ ಮಾತನಾಡಿ ” ಬೆಂಗಳೂರಿನ ದುರ್ಬಲ ಬೆಕ್ಕುಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಪ್ರಾಣಾ ಅನಿಮಲ್ ಫೌಂಡೇಶನ್‌ನೊಂದಿಗೆ ಪಾಲುದಾರರಾಗಲು ಹೆಮ್ಮೆಪಡುತ್ತೇವೆ ಮತ್ತು ಕೇಂದ್ರ ಅಗತ್ಯ ಆರೈಕೆ ಮಾತ್ರವಲ್ಲದೆ ಪ್ರಾಣಿ ಕಲ್ಯಾಣ ಮತ್ತು ಸಾಕುಪ್ರಾಣಿಗಳ ಜವಾಬ್ದಾರಿಯುತ ಮಾಲೀಕತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ” ಎಂದು ಹೇಳಿದರು.

ನಟಿ ಹಾಗೂ ಪ್ರಾಣಾ ಅನಿಮಲ್ ಫೌಂಡೇಶನ್‌ನ ಸಂಸ್ಥಾಪಕಿ ಸಂಯುಕ್ತಾ ಹೊರನಾಡು ಮಾತನಾಡಿ ಕೇಂದ್ರ ತೆರೆಯುತ್ತಿರುವುದು ನನ್ನ ಕನಸನ್ನು ನನಸು ಮಾಡಿದಂತಾಗಿದೆ, ಭಾರತದಲ್ಲಿ ಬೆಕ್ಕುಗಳಿಗೆ ಮೊದಲ ಆರೈಕೆ ಕೇಂದ್ರವಾಗಿದೆ, ಅನಾಥ ಬೆಕ್ಕುಗಳ ರಕ್ಷಣೆ ಮಾಡುವ ಸ್ವಯಂ ಸೇವಕವರಿಗೆ ಸಹಾಯವಾಗಲು ಮತ್ತು ದತ್ತು ಪಡೆಯುವವರೆಗೂ ಇರಿಸಿಕೊಳ್ಳಲು ಸ್ಥಳಾವಕಾಶಕ್ಕೆ ಸಹಾಯ ಹಸ್ತ ನೀಡಿದ ಟೆಕಿಯಾನ್ ನಮ್ಮ ಧನ್ಯವಾದ ಎಂದರು.

ಕೇಂದ್ರದಲ್ಲಿ ಅಪಘಾತದಿಂದ ಅಥವಾ ಗಾಯಗೊಂಡ ಬೆಕ್ಕುಗಳಿಗೆ ಆರೈಕೆ ಸೌಲಭ್ಯಗಳಿವೆ, ಬೆಕ್ಕುಗಳ ಶಾಶ್ವತ ಜೀವನಕ್ಕಾಗಿ ನಿಯಮಿತವಾಗಿ ದತ್ತು ಸ್ವೀಕಾರ ಕ್ರಿಯೆ ನಡೆಸಲಾಗುತ್ತದೆ. ಕ್ರಿಯಾತ್ಮಕತೆಯ ಭಾಗವಾಗಿ ಕೇಂದ್ರವು ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ಇತರ ಸ್ಥಳೀಯ ಕಲಾ ಕಾಲೇಜುಗಳ ವಿದ್ಯಾರ್ಥಿಗಳು ಚಿತ್ರಿಸಿದ ಬೆಕ್ಕುಗಳ ವಿಷಯದ ಭಿತ್ತಿಚಿತ್ರಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin