ಕ್ರೈಮ್ ಥ್ರಿಲ್ಲರ್ “ಆಪಲ್ ಕಟ್ “ಚಿತ್ರ ಮಾರ್ಚ್ 7 ಕ್ಕೆ ಬಿಡುಗಡೆ
ಸೈಕಾಲಜಿಕಲ್ ಥ್ರಿಲ್ಲರ್ ಕಥನದ “ಆಪಲ್ ಕಟ್” ಚಿತ್ರ ಮಾರ್ಚ್ 7 ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡಿಗಡೆಯಾಗಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಟ್ರೈಲರ್ ಬಿಡುಗಡೆ ಮಾಢಿ ಶುಭ ಹಾರೈಸಿದರು
ನಟ ಗಣೇಶ್ ಮಾತನಾಡಿ ಟ್ರೇಲರ್ ತುಂಬಾ ಚೆನ್ನಾಗಿದೆ. ಸಾಮಾನ್ಯವಾಗಿ ನನ್ನ ಚಿತ್ರದ ಹೊರತು ಬೇರೆ ಸಮಾರಂಭಗಳಿಗೆ ಹೋಗುವುದು ಕಡಿಮೆ. ಕನ್ನಡ ಚಿತ್ರರಂಗಕ್ಕೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ರಾಜಶೇಖರ್ ಅವರ ಪುತ್ರಿ ಚಿತ್ರದ ನಿರ್ದೇಶಕರು ಎಂದು ತಿಳಿದು ಸಂತೋಷವಾಯಿತು. ಆ ಕಾರಣಕ್ಕಾಗಿ ಹಾಗೂ ಸ್ನೇಹಿತ ದಾಸೇಗೌಡರ ಪ್ರೀತಿಯ ಆಹ್ವಾನಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಟ್ರೇಲರ್ ನೋಡಿದಾಗ ವಿಭಿನ್ನ ಕಂಟೆಂಟ್ ವುಳ್ಳ ಚಿತ್ರ ಎಂದು ತಿಳಿಯುತ್ತದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ನಿರ್ದೇಶಕಿ ಸಿಂಧುಗೌಡ ಮಾತನಾಡಿಕಥೆ ಹೇಳುವಾಗ ಯಾವ ಸಿನಿಮಾ ಮಾಡಿದ್ದೀರಾ ಎಂದು ಕೇಳ್ತಾರೆ. ಆದರೆ ನಿರ್ಮಾಪಕರು ಯಾವುದನ್ನೂ ಕೇಳದೆ ಮೊದಲ ಬಾರಿಗೆ ಚಿತ್ರ ನಿರ್ದೇಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. . ಐದು ಸ್ನೇಹಿಯರ ನಡುವೆ ನಡೆಯುವ ಕಥೆ, ಈಗಿನ ಯುವಜನತೆ ಡೇಟಿಂಗ್ ಅನ್ನು ಸುಲಭವಾಗಿ ತೆಗೆದುಕೊಂಡಿದ್ದಾರೆ. ಅದು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ಚಿತ್ರದ ತಿರುಳು ಮಾರ್ಚ್ 7 ರಂದು ಬಿಡುಗಡೆಯಾಗಲಿದೆ ಎಂದರು.

ನಾಯಕ ಸೂರ್ಯ ಮಾತನಾಡಿ , ನಟ ಗಣೇಶ್ ಚಿತ್ರದ ಡ್ರೈಲರ್ ಬಿಡುಗಡೆಗೆ ಮಾಡಿರುವುದು ಖುಷಿ ಆಗಿದೆ. ಗಣೇಶ್ ಸರ್ ಲಕ್ಕಿ ಹಾಂಡ್, ಹಿರಿಯ ನಿರ್ದೇಶಕ ರಾಜ್ ಕಿಶೋರ್ ಅವರ ಎರಡನೇ ಮಗಳು, ಮಾನವ ಶಾಸ್ತದ ಪ್ರಾಧ್ಯಾಪಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆಮ ಡೆಡ್ ಬಾಡಿ ತೆಗೆದು ಅದು ಗಂಡು ಅಥವಾ ಹೆಣ್ಣು ಎನ್ನುವುದನ್ನು ಪತ್ತೆ ಮಾಡುವಂತಹುದು ಎಂದರು.

ನಾಯಕಿ ಅಶ್ವಿನಿ ಪೋಲೇಪಲ್ಲಿ ಮಾತನಾಡಿ ಚಿತ್ರದಲ್ಲಿ ಅರಾದ್ಯ ಎಮ್ಮುವ ಸೈಕಾಲಜಿ ವಿದ್ಯಾರ್ಥಿ ಪಾತ್ರ, ಮರ್ಡರಿ ಮಿಸ್ಟರಿ ಕಥೆ ಬರುತ್ತಿವೆ. ಚಿತ್ರದಲ್ಲಿ ಮಾನವ ಶಾಸ್ತ್ರದ ಕಥೆಯನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ ಎಂದರೆ ಮತ್ತೊಬ್ಬ ನಾಯಕಿ ಅಮೃತ. ಮಾತನಾಡಿ ಜಾನ್ವಿ ಎನ್ನುವ ಪಾತ್ರ ಮಾಡಿದ್ದೇನೆ. ಹೊಸಬರಿಗೆ ಬೆಂಬಲ ನೀಡಿ ಎಂದರು
ನಿರ್ಮಾಪಕಿ ಶಿಲ್ಪ ಪ್ರಸನ್ನ ಮಾತನಾಡಿ, ಚಿತ್ರಕ್ಕಾಗಿ ನಿರ್ದೇಶಕರು ಶ್ರಮ ಹಾಕಿ ಕೆಲಸ ಮಾಡಿದ್ಸಾರೆ. ಜೊತೆಗೆ ನಾಯಕ ಸೂರ್ಯ ಕೂಡ, ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದ ಎಂದರು.

ಹಿರಿಯ ಕಲವಿದೆ ಮೀನಾಕ್ಷಿ, ನಾಯಕನ ತಾಯಿ ಪಾತ್ರ. ನನ್ನ 302 ನೇ ಚಿತ್ರ. ಒಳ್ಳೆಯ ಚಿತ್ರದಲ್ಲಿ ಅವಕಾಶ ಸಿಕ್ಕಿದೆ ಮಾರ್ಚ್ 7 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.
ವಿತರಕ ವೆಂಕಟ್ ಮಾತನಾಡಿ, ಕ್ರೈಮ್ ಥ್ರಿಲ್ಲರ್ ಚಿತ್ರ, ಚೆನ್ನಾಗಿ ಬಂದಿದೆ. 70 ರಿಂದ 75 ಚಿತ್ರ ಬಿಡುಗಡೆ ಮಾಡಲಾಗುವುದು ಎಂದರು

