ಡೆಡ್ಲಿ ಲವ್ವರ್ಸ್ ಚಿತ್ರದ ಟ್ರೈಲರ್ ಬಿಡುಗಡೆ: ಕುತೂಹಲ ಹೆಚ್ಚಳ
ಕನ್ನಡದಲ್ಲಿ ಇತ್ತೀಚೆಗೆ ವಿಭಿನ್ನ ಹೆಸರಿನ ಚಿತ್ರಗಳು ಸೆಟ್ಟೇರುತ್ತಿವೆ. ಅವುಗಳ ಸಾಲಿಗೆ ಮತ್ತೊಂದು ಸೇರ್ಪಡೆ ” ಡೆಡ್ಲಿ ಲವ್ವರ್ಸ್” . ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಕುತೂಹಲ ಹೆಚ್ಚು ಮಾಡಿದೆ

ನಾಗೇಂದ್ರ ಕಥೆ,ಚಿತ್ರಕಥೆ,ಸಂಭಾಷಣೆ,ಸಂಕಲನ, ನಿರ್ದೇಶನ ಜತೆಗೆ ನಿರ್ಮಾಣ ಮಾಡಿದ್ದಾರೆ. ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿವೇಲು ಚಿತ್ರದಲ್ಲಿ ಗೃಹ ಸಚಿವರ ಪಾತ್ರ ಮಾಡಿದ್ದಾರೆ.
ಚಿತ್ರದಲ್ಲಿ ನಾಯಕನಾಗಿ ಅಖಿಲ್ ಕುಮಾರ್. ನವಪ್ರತಿಭೆ ತನುಪ್ರಸಾದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರೇಮಾಗೌಡ, ಭಾಸ್ಕರ್, ವಿನೋಧ್, ಎ.ಆರ್.ಲೋಕೇಶ್ ಮುಂತಾದವರು ನಟಿಸಿದ್ದಾರೆ
ಲಹರಿ ವೇಲು ಮಾತನಾಡಿ ನಟನೆ ಮಾಡಲು ‘ಅವಳೇ ನನ್ನ ಹೆಂಡ್ತಿ’ ಚಿತ್ರದ ನಿರ್ದೇಶಕ ಎಸ್.ಉಮೇಶ್ ಕಾರಣ. ಚಿತ್ರದಲ್ಲಿ ಗೃಹ ಸಚಿವರ ಪಾತ್ರ ಮಾಡಿದ್ದೇನೆ. ಜನರು ಸಿನಿಮಾ ನೋಡೋಲ್ಲ ಅನ್ನೋದು ತಪ್ಪು. ಸಾಂಸಾರಿಕ, ಕಾದಂಬರಿ ಚಿತ್ರಗಳನ್ನು ಮರೆತು ಹೋಗಿದ್ದೇವೆ. ಹೊಸತನದ ಕಥೆ, ಅದಕ್ಕೆ ತಕ್ಕಂತೆ ನಿರ್ದೇಶಕರು, ನಿರ್ಮಾಪಕರು ಸಿಕ್ಕಿ ಉತ್ತಮ ಚಿತ್ರ ನೀಡಿದರೆ ಎಲ್ಲರು ಖಂಡಿತ ಚಿತ್ರಮಂದಿರಕ್ಕೆ ಬರುತ್ತಾರೆ. ನಮ್ಮಲ್ಲೆ ಕೆಲವರು ಉದ್ಯಮವನ್ನು ಹಾಳು ಮಾಡುತ್ತಿದ್ದಾರೆ ಎಂದರು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈರೆಸಿ ಮೇಲೆ ನಟ್ಟು,ಬೋಲ್ಟು ಟೈಟ್ ಮಾಡಿದಾಗ ಮಾತ್ರ ಚಿತ್ರರಂಗ ಉಳಿಯುತ್ತದೆ. ಸುಮ್ಮನೆ ಕಲಾವಿದರನ್ನು ದೋಷಿಸುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ಸರಿಯಲ್ಲ ಎಂದರು

ನಿರ್ದೇಶಕ ನಾಗೇಂದ್ರ ಮಾತನಾಡಿ ಪ್ರೇಮಿಗಳಿಬ್ಬರು ಭೂಗತಲೋಕಕ್ಕೆ ಎಂಟ್ರಿಕೊಟ್ಟು ಖಳನಾಯಕನಿಗೆ ಚಳ್ಳೆಹಣ್ಣು ತಿನ್ನಿಸಿ ಮಾದಕ ವಸ್ತು ಹಣ ಕದಿಯುತ್ತಾರೆ. ವಿಷಯ ಹೋಂ ಮಿನಿಸ್ಟರ್ಗೆ ತಿಳಿದು ಕೇಸನ್ನು ಎಸಿಪಿಗೆ ವಹಿಸುತ್ತಾರೆ. ಅಷ್ಟಕ್ಕೂ ಲವರ್ಸ್ಗಳೂ ಡೆಡ್ಲಿ ಆಗಲು ಕಾರಣವೇನು ಇವರಿಬ್ಬರ ಹಿನ್ನಲೆ ಏನು ಅಂತಿಮವಾಗಿ ದುಡ್ಡು ಯಾರಿಗೆ ದಕ್ಕುತ್ತದೆ? ಖಳನು ಸೇಡು ತೀರಿಸಿಕೊಂಡನಾ ಅಥವಾ ಪೋಲೀಸರು ಎನ್ಕೌಂಟರ್ ಮಾಡಿದರಾ ಇಂತಹ ಕುತೂಹಲ ಸನ್ನಿವೇಶಗಳು ಚಿತ್ರದಲ್ಲಿದೆ. ಮಂಚನ ಡ್ಯಾಂ, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂದು ಹೇಳಿದರು.

ನಿರ್ಮಾಪಕ ಪ್ರಶಾಂತ್ ನಾಯಕ್ ‘ತಾಂಡವ ಮೂವಿ ಮೇಕರ್ಸ್’ ಸಂಸ್ಥೆ ಹುಟ್ಟುಹಾಕಿ, ಇದರ ಮೂಲಕ ವಿತರಣೆ ಮಾಡುತ್ತಿದ್ದು, ಸುಮಾರು 50-60 ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ ರೂಪಿಸಿಕೊಂಡಿದ್ದಾರೆ. ಈ ವೇಳೆ.ಮ.ಹರೀಶ್. ಬಾ.ಮ.ಗಿರೀಶ್, ನಟ ಅಮಿತ್ ಉಪಸ್ತಿತರಿದ್ದರು

ಸಂಗೀತ ಲಯಕೋಕಿಲ, ಛಾಯಾಗ್ರಹಣ ಹೆಚ್.ಎನ್.ನರಸಿಂಹಮೂರ್ತಿ, ಸಾಹಸ ವಿಕ್ರಂಸಿಂಗ್, ಹಿನ್ನಲೆ ಶಬ್ದ ಶ್ರೀಸಾಷ್ಠ, ಕಾರ್ಯಕಾರಿ ನಿರ್ಮಾಪಕ ಎ.ಆರ್.ಲೋಕೇಶ್ ಅವರದಾಗಿದೆ.

