" Nodidavaru Enantaare" Film towords Fifty Days

ನೋಡಿದವರು ಏನಂತಾರೆ ” ಚಿತ್ರ ಐವತ್ತನೇ ದಿನದತ್ತ ಹೆಜ್ಜೆ - CineNewsKannada.com

ನೋಡಿದವರು ಏನಂತಾರೆ ” ಚಿತ್ರ ಐವತ್ತನೇ ದಿನದತ್ತ ಹೆಜ್ಜೆ

“ನೋಡಿದವರು ಏನಂತಾರೆ” ಚಿತ್ರ 25:ದಿನ ಪೂರೈಸಿ ಐವತ್ತನೇ ದಿನದತ್ತ ಹೆಜ್ಜೆ ಹಾಕಿದೆ. ಕನ್ನಡದಲ್ಲಿ ಇಂತಹ ಬೆಳವಣಿಗೆಗಳು ಇತ್ತೀಚೆಗೆ ತೀರಾ ವಿರಳ‌. ಅಂತಹುದರಲ್ಲಿ ” ನೋಡಿದವರು ಉತ್ತಮ‌” ಚಿತ್ರ ಎಂದು ಪ್ರಶಂಸೆ ವ್ಯಕ್ತಪಡಿಸಿರುವುದು ಚಿತ್ರತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ

ಕಂಟೆಂಟ್ ಚಿತ್ರವನ್ನು ಪ್ರೇಕ್ಷಕ ಯಾವತ್ತು ಕೈಬಿಡೋದಿಲ್ಲ ಎಂಬುವುದಕ್ಕೆ “ನೋಡಿದವರು ಏನಂತಾರೆ” ತಾಜಾ ಉದಾಹರಣೆ.

ಚಿತ್ರ 25 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಸಂಭ್ರಮ ಹಂಚಿಕೊಳ್ಳಲು ಇಡೀ ಚಿತ್ರತಂಡ ಮಾದ್ಯಮದ ಮುಂದೆ ಹಾಜರಿತ್ತು.

ಈ ವೇಳೆ ಮಾತನಾಡಿದ ನಿರ್ದೇಶಕ ಕುಲದೀಪ್,
ಒಂದು ಸಣ್ಣ ಕನಸಿನಿಂದ ಶುರುವಾದ ಪಯಣ ನೋಡಿದವರು ಏನಂತಾರೆ. ಅದು ಹೋಗ್ತಾ ಹೋಗ್ತಾ ಸಾಕಷ್ಟು ರೂಪಾಂತರ ಕಂಡು ತನ್ನದೇ ದಾರಿ ಕಂಡುಕೊಂಡು ಜನರ ಮುಂದೆ ಇಷ್ಟು ದೊಡ್ಡದಾಗಿ ನಿಲ್ಲುತ್ತದೆ ಎಂದುಕೊಂಡಿರಲಿಲ್ಲ. ಪಾಲಿಗೆ ದೊಡ್ಡ ಯಶಸ್ಸು.ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾದ ಎಲ್ಲರಿಗೂ ಧನ್ಯವಾದ ಎಂದು ಸಂತಸ ಹಂಚಿಕೊಂಡರು.

ನಾಯಕ ನವೀಶ್ ಶಂಕರ್, ಸಿನಿಮಾವನ್ನು ಮಾಡುವುದರಿಂದ ಹಿಡಿದು ಅದನ್ನು ತಲುಪಿಸುವ ಪ್ರತಿಯೊಂದು ಹಂತದವರೆಗೂ ಎಲ್ಲರಿಗೂ ಕನಸು ಇರುತ್ತದೆ. ಆದರೆ ಹಂತಕ್ಕೆ ತಲುಪುವುದು ಕೆಲವೇ ಕೆಲವು ಸಿನಿಮಾಗಳು ಮಾತ್ರ. ವರ್ಷದಲ್ಲಿ 200 ರಿಂದ 300 ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ‌ ನೆನಪಿನಲ್ಲಿ ಉಳಿಯುವಂತದ್ದು 10 ರಿಂದ 15 ಸಿನಿಮಾಗಳು ಮಾತ್ರ. ಈ ಲೀಸ್ಟ್ ನಲ್ಲಿ ನಾವು ಇದ್ದೇವೆ ಎನ್ನುವುದೇ ಖುಷಿ ಎಂದರು.

ನಿರ್ಮಾಪಕ ನಾಗೇಶ್ ಗೋಪಾಲ್ ಮಾತನಾಡಿ, ಎಲ್ಲರಿಗೂ ಯಾವ ರೀತಿ ಧನ್ಯವಾದ ತಿಳಿಸಬೇಕು ಎಂದು ಗೊತ್ತಿಲ್ಲ. ಕುಲದೀಪ್ ನನ್ನ ಸ್ನೇಹಿತ. ಈ ಚಿತ್ರವನ್ನು ನಮಗೆ ಕೊಟ್ಟಿದ್ದಕ್ಕೆ ಧನ್ಯವಾದ. ಇಡೀ ಚಿತ್ರತಂಡದ ಬೆಂಬಲದಿಂದ ಒಂದೊಳ್ಳೆ ಸಿನಿಮಾವಾಗಿದೆ ಎಂದು ಹೇಳಿದರು.

ನೋಡಿದವರು ಏನಂತಾರೆ ಎಂಬ ಶೀರ್ಷಿಕೆಯೇ ಬಹಳ ವಿಶೇಷವಾಗಿದೆ. ಈ ಶೀರ್ಷಿಕೆಗೆ ತಕ್ಕಂತೆಯೇ ಇಡೀ ಕಥೆಯನ್ನು ಹೆಣೆಯಲಾಗಿದ್ದು, ಪ್ರೇಕ್ಷಕರು ಕೂಡ ಕಥೆ ಅಭಿನಯ ಅಪ್ಪಿಕೊಂಡಿದ್ದಾರೆ. ನಿರ್ದೇಶಕ ಕುಲದೀಪ್ ಕಾರಿಯಪ್ಪ ಬರೆದ ವಿಭಿನ್ನ ಕಥೆ ಮತ್ತು ಪಾತ್ರಕ್ಕೆ ನಾಯಕ ನವೀಶ್ ಶಂಕರ್ ಅಷ್ಟೇ ಅದ್ಭುತವಾಗಿ ಜೀವ ತುಂಬಿದ್ದಾರೆ

ನಾಯಕಿ ಅಪೂರ್ವ ಭಾರದ್ವಾಜ್ ಸೊಗಸಾಗಿ ಅಭಿನಯಿಸಿದ್ದಾರೆ. ನಾಗೇಶ್ ಗೋಪಾಲ್ ನಿರ್ಮಾಣದ ಚಿತ್ರಕ್ಕೆ ಆಶ್ವಿನ್ ಕೆನೆಡಿ ಛಾಯಾಗ್ರಾಹಣ, ಮಯೂರೆಶ್ ಅಧಿಕಾರಿ ಹೃದಯಸ್ಪರ್ಶಿ ಸಂಗೀತವನ್ನು ಸಂಯೋಜಿಸಿದ್ದು, ಮನು ಶೆಡಗಾರ್ ಸಂಕಲನ ಚಿತ್ರಕ್ಕಿದೆ. ಕುಲದೀಪ್ ಕಾರಿಯಪ್ಪ ಅವರು ಬರೆದ ಕಥೆ ಮತ್ತು ಚಿತ್ರಕಥೆಗೆ ಅವರೊಂದಿಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್, ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin