“ಕೊರಗಜ್ಜ” ಹೊಸ ರೀತಿ ಸಂಗೀತ ನೀಡಲು ಸಹಕಾರಿ: ನಿರ್ದೇಶಕ ಗೋಪಿ ಸುಂದರ್
“ಕೊರಗಜ್ಜ” ಸಿನಿಮಾದ ಸಂಗೀತ ಕೇವಲ ರಾಗ ಸಂಯೋಜನೆ ಮಾತ್ರವಲ್ಲ ,ಇದು ಮತ್ತೊಂದು ರೀತಿಯ ಸಂಸ್ಕ್ರತಿಯ ಅನಾವರಣ ಗೊಳಿಸುವಂತೆ ಮಾಡಿದೆ ಎಂದು ಚಿತ್ರಕ್ಕೆ ಸಂಗೀತ ನೀಡಿರುವ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪೀ ಸುಂದರ್ ಹೇಳಿದ್ದಾರೆ

ಕೇವಲ ಮಾಮೂಲಿ ತಂದೆ-ಮಗಳ ಕಥೆಯಂತಲ್ಲ, ನಿರ್ದೇಶಕರು ಸಾಕಷ್ಟು ರೀ ಸರ್ಚ್ ಮಾಡಿ ಚಿತ್ರೀಕರಿಸಿದ್ದುದರಿಂದ ಮತ್ತು ಹೊಸ ಸಂಪ್ರದಾಯ ಮತ್ತು ವಿಶೇಷ ನಂಬಿಕೆಗಳ ಆಧಾರದ ಮೇಲೆ ನಿಂತಿರುವ ಚಿತ್ರವಾಗಿದ್ದುದರಿಂದ ಇದರ ಬಗ್ಗೆ ಅಭ್ಯಾಸ ಮಾಡಿ ಸಂಗೀತ ಸಂಯೋಜಿಸಲು ಹೆಚ್ಚು ಸಮಯ ಬೇಕಾಗಿತ್ತು. ಹೊಸ ಸಂಪ್ರದಾಯ ಅಭ್ಯಾಸ ಮಾಡಿ ರಚಿಸಿದ ಟ್ಯೂನ್ ಗಳನ್ನು ಚಿತ್ರದ ನಿರ್ದೇಶಕರಿಗೆ ಮೆಚ್ಚುಗೆ ಆದದ್ದು ನನ್ನ ನ್ನು ಖುಷಿ ಗೊಳಿಸಿದೆ ಎಂದು ಈ ಸಮಯದಲ್ಲಿ ಹೇಳಿದರು.
“ಕೊರಗಜ್ಜ” ಸಿನಿಮಾದ ಸಬ್ಜೆಕ್ಟ್ ನನಗೆ ಹೊಸ ರೀತಿಯ ಜಾನರ್ನ್ನು ಆವಿಷ್ಕಾರ ಮಾಡಲು ಸಹಾಯ ಮಾಡಿದೆ. ಸಂಗೀತ ಕ್ಷೇತ್ರದಲ್ಲಿ ಹೊಸಾ ಬಗೆಯ ಅನ್ವೇಷಣೆಯೋದಿಗೆ ಹಾಡುಗಳ ಕಂಪೋಸಿಂಗ್ ನಡೆಸಲು ಇದು ಹೆಚ್ಚು ಸಹಕಾರಿಯಾಗಿದೆ. ರೆಗ್ಯುಲರ್ ಸಿನಿಮಾದ ಮಾದರಿಯನ್ನು ಮೀರಿ ಯಾರೂ ಊಹಿಸದ ರೀತಿಯ ಬಗೆ ಬಗೆಯ ಸೂಕ್ಷ್ಮ ಪದರಗಳನ್ನು ಹೊಂದಿರುವ ಚಿತ್ರ ಹಾಗೂ ಅದಕ್ಕೆ ಒದಗಿ ಬರುತ್ತಿರುವ ಸಂಗೀತ-ಎಂದೂ, ಇಂತಹ ಚಿತ್ರಕ್ಕೆ ಸಂಗೀತ ನೀಡುವುದು ಅತ್ಯಂತ ಚಾಲೆಂಜಿಂಗ್ ಕೆಲಸ ಮತ್ತು ನನ್ನ ಸೌಭಾಗ್ಯ ಎಂದ್ದಾರೆ.

ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ನ ಅಡಿ ನಿರ್ಮಿಸಿರುವ ಕೊರಗಜ್ಜ ಚಿತ್ರದಲ್ಲಿ ಆರು ಹಾಡುಗಳಿದ್ದು, ಎಲ್ಲಾ ಹಾಡುಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ರೆಕಾರ್ಡಿಂಗ್ ವೇಳೆ – ಸಿನಿಮಾದ ಸಂಗೀತದ ಬಗ್ಗೆ , ಗೋಪಿ ಸುಂದರ್ ನ ಕಂಪೋಸಿಶನ್ ನ ರಾಗ- ಧಾಟಿ ಬಗ್ಗೆ ದೇಶದ ಅಗ್ರಗಣ್ಯ ಗಾಯಕರುಗಳಾದ ಶ್ರೇಯ ಘೋಶಾಲ್, ಶಂಕರ್ ಮಹದೇವನ್, ಸುನಿಧಿ ಚೌಹಾನ್, ಜಾವೇದ್ ಆಲಿ, ಶರೋನ್ ಪ್ರಭಾಕರ್ ಅರ್ಮನ್ ಮಲಿಕ್, ಸ್ವರೂಪ್ ಖಾನ್ ಮೊದಲಾದವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಶಂಕರ್ ಮಹದೇವನ್ ಹಾಡಿರುವ ಹಾಡಿನಲ್ಲಿ ರಾಮಾಯಣದ “ರಾವಣೇಶ್ವರ” ಬರೆದಿರುವ ಶಿವತಾಂಡವದ ತುಣುಕುಗಳನ್ನು ಸೇರಿಸಿರುವ ವಿಚಾರವನ್ನೂ ವಿವರಿಸಿದರು.ಕರಾವಳಿಯ ಅತ್ಯಂತ ಉಗ್ರ “ಗುಳಿಗ” ದೈವದ ಬಗ್ಗೆ ಜಾವೇದ್ ಆಲಿಯವರು ಹಾಡಿ, ರೆಕಾರ್ಡಿಂಗ್ ನಂತರ ತಮಗಾದ ರೋಮಾಂಚನದ ಬಗ್ಗೆಯೂ ವಿಚಾರ ಹಂಚಿಕೊಂಡರು.
ಎಲ್ಲಾ ಹಾಡುಗಳನ್ನು ಮೂರ್ನಾಲ್ಕು ಭಾಷೆಗಳಲ್ಲಿ ಸುಧೀರ್ ರಚಿಸಿರುವುದಲ್ಲದೆ, ವಿಭಿನ್ನ ಧಾಟಿಯಲ್ಲಿ ಹಾಡಿದ್ದಾರೆ. ಹೊಸ ಹೊಸ ಉಧ್ಗಾರಗಳ ಜೊತೆ ಆಶ್ಚರ್ಯ ಪಡುವ ರೀತಿಯ ಹೊಸ ಬಗೆಯ ಸೌಂಡಿಂಗ್ ಮತ್ತು ಭಾಷೆಯನ್ನು ತಮ್ಮ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ. ಇದು ಅತ್ಯಂತ ವಿಶಿಷ್ಟ ರೀತಿಯ ಹಾಡುಗಳನ್ನು ಸ್ರಷ್ಟಿಸಲು ಪೂರಕವಾಗಿದೆ ಎಂದು ಎಂದು ಗೋಪಿ ಹೇಳಿದರು.

