ನಟ ರಾಜ್ ಬಿ ಶೆಟ್ಟಿ ಈಗ “ಸೋಲ್ ಸ್ಟಾರ್” : ಶಿವಣ್ಣ ಕೊಟ್ಟ ಬಿರುದು
ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅವರಿಗೆ ಶಿವಣ್ಣ ಎಸ್.ಎಸ್ ರಾಜ್ ಬಿ ಶೆಟ್ಟಿ ಎನ್ನುವ ಬಿರುದು ನೀಡಿದರು ಎಸ್ ಎಸ್ ಅಂದರೆ ಸೋಲ್ ಸ್ಟಾರ್ ಎಂದರು ಶಿವಣ್ಣ
ಶಿವಣ್ಣ ಅವರು ಸೋಲ್ ಸ್ಟಾರ್ ಎನ್ನುವ ಬಿರುದು ನೀಡುತ್ತಿದ್ದಂತೆ ವೇದಿಕೆ ಮೇಲೆ ರಾಜ್ ಬಿ ಶೆಟ್ಟಿ ಶಿವಣ್ಣ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ನಟ ಉಪೇಂದ್ರ, ನಿರ್ದೇಶಕ ಅರ್ಜುನ್ ಜನ್ಯಾ, ಛಾಯಾಗ್ರಾಹಕ ಸತ್ಯ ಹೆಗಡೆ ಮತ್ತಿತರರು ಚಪ್ಪಾಳೆ ತಟ್ಟಿ ಶಿವಣ್ಣ ಹೇಳಿದ ಬಿರುದಿಗೆ ಅಂಕಿತ ಹಾಕಿದರು
45 ಚಿತ್ರದಲ್ಲಿ ಶಿವಣ್ಣಮ ಉಪೇಂದ್ರ ಜೊತೆ ನಟಿಸಿರುವ ರಾಜ್ ಬಿ ಶೆಟ್ಟಿಗೆ ನಿರ್ದೇಶಕ ಅರ್ಜುನ್ ಜನ್ಯ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ರಾಜ್ ಬಿ ಶೆಟ್ಟಿಗೂ ಒಂದು ಟೈಟಲ್ ಕೊಟ್ಟಿದ್ದರಂತೆ.

ಈ ವೇಳೆ ಮಾತು ಹಂಚಿಕೊಂಡ ನಿರ್ದೇಶಕ ಅರ್ಜುನ್ ಜನ್ಯಾ, ಶಿವಣ್ಣ ಮತ್ತು ಉಪ್ಪಿ ಸಾರ್ ಗೆ ಬಿರುದು ಇರುವಂತೆ ರಾಜ್ ಶೆಟ್ಟಿಗೂ ಬಿರುದನ್ನು ಟೈಟಲ್ ಕಾರ್ಡ್ನಲ್ಲಿ ಹಾಕಿದ್ದೆ. ಅವರು ಕಾಲ್ ಮಾಡಿ ಅದನ್ನು ತೆಗೆಯಿರಿ, ಇಲ್ಲದಿದ್ದರೆ ಚಿತ್ರೀಕರಣಕ್ಕೆ ಬರುವುದಿಲ್ಲ ಎಂದರು ಹೀಗಾಗಿ ಹೀಂದೆ ಸರಿದೆ ಎಂದರು
ನಟ ರಾಜ್ ಶೆಟ್ಟಿ ಬಿರುದುಗಳಿಗಿಂತ ದೊಡ್ಡವರು , ಅವರಿಗೆ ಯಾವುದೇ ಪಟ್ಟ ಬೇಡ, ಯಾವುದೇ ಪಟ್ಟ ಮೀರಿದರು ಅವರು ಎಂದರು. ಈ ಹಂತದಲ್ಲಿ ನಿರ್ದೇಶಕ ಅರ್ಜುನ್ ಜನ್ಯ ಅವರ ಬಳಿ ಮೈಕ್ ಕಸಿದು ಸೋಲ್ ಸ್ಟಾರ್ ಎಂದು ಶಿವಣ್ಣ ಘೋಷಿಸಿಯೇ ಬಿಟ್ಟರು. ವೇದಿಕೆಯಲ್ಲಿದ್ದ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು.

