The content of the film "45" has not been released in Bollywood or Hollywood - Producer Ramesh Reddy

“45” ಚಿತ್ರದ ಕಂಟೆಂಟು ಬಾಲಿವುಡ್, ಹಾಲಿವುಡ್‍ನಲ್ಲಿ ಬಂದಿಲ್ಲ- ನಿರ್ಮಾಪಕ ರಮೇಶ್ ರೆಡ್ಡಿ - CineNewsKannada.com

“45” ಚಿತ್ರದ ಕಂಟೆಂಟು ಬಾಲಿವುಡ್, ಹಾಲಿವುಡ್‍ನಲ್ಲಿ ಬಂದಿಲ್ಲ- ನಿರ್ಮಾಪಕ ರಮೇಶ್ ರೆಡ್ಡಿ

ಬಹು ನಿರೀಕ್ಷಿತ “45” ಚಿತ್ರದ ಕಂಟೆಂಟು, ಕಥೆ, ವಿಶ್ಯುವಲ್ ಮೂಡಿ ಬಂದಿರುವ ರೀತಿಗೆ ಬೆರಗಾಗಿದ್ದೇನೆ, ಈ ರೀತಿಯ ಕಂಟೆಂಟು ಬಾಲಿವುಡ್ ಮಾತ್ರ ಅಲ್ಲ ಹಾಲಿವುಡ್ ನಲ್ಲಿಯೂ ಬಂದಿಲ್ಲ ಎಂದರು ನಿರ್ಮಾಪಕ ರಮೇಶ್ ರೆಡ್ಡಿ.

ಚಿತ್ರ ಮೂಡಿಬಂದಿರುವ ಪರಿಗೆ ಚಿತ್ರಕ್ಕೆ ಬಂಡವಾಳ ಹಾಕಿದ ನಿರ್ಮಾಪಕ ಇಷ್ಟವಾದರೆ ಚಿತ್ರ ಅರ್ದ ಗೆದ್ದಂತೆ, ಈ ವಿಷಯದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಅವರ ಮುಖದಲ್ಲಿ ಗೆಲುವಿನ ಲಕ್ಷಣಗಳು ಕಾಣಿಸಿದ್ದು “45” ಚಿತ್ರ ಗೆಲ್ಲುವ ಎಲ್ಲಾ ಲಕ್ಷಣ ಮತ್ತು ಭರವಸೆ ಮೂಡಿಸಿದೆ.ಅದರ ಶ್ರೇಯ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಚಿತ್ರದಲ್ಲಿ ನಟಿಸಿರುವ ಹಿರಿಯ ನಟರಾದ ಶಿವರಾಜ್ ಕುಮಾರ್, ಉಪೇಂದ್ರ ಮತ್ತು ಯುವ ನಟ ರಾಜ್ ಬಿ ಶೆಟ್ಟಿ ಅವರಿಗೆ ಸಲ್ಲಬೇಕು.

ಯುಗಾದಿ ಹಬ್ಬದ ದಿನದಂದು “45” ಚಿತ್ರದ ಟೀಸರ್ ಬಿಡುಗಡೆ ಇತ್ತು. ಈ ವೇಳೆ ಮಾತಿಗಿಳಿದ ನಿರ್ಮಾಪಕ ರಮೇಶ್ ರೆಡ್ಡಿ, ನಿರ್ದೇಶಕ ಅರ್ಜುನ್ ಜನ್ಯ ಕಥೆ ಹೇಳಿದಾಗ ಹಿರೋ ಯಾರು ಎಂದು ಕೇಳಿದೆ, ಅವರು ಶಿವರಾಜ್ ಕುಮಾರ್ ಎನ್ನುತ್ತಿದ್ದಂತೆ ಒಕೆ ಅಂದೆ, ಆ ಮೇಲೆ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಸೇರಿಕೊಂಡರು ಎಂದರು

Ramesh Reddy

ನಾನು ಮೊದಲಿನಿಂದಲೂ ಶಿವಣ್ಣನ ಅಭಿಮಾನಿ. ಅರ್ಜುನ್ ಜನ್ಯ ಹೇಳಿದ ಕಂಟೆಂಟು, ಕಥೆ, ವಿಷುಯಲ್ ಒಂದಕ್ಕಿಂತ ಒಂದು ಚೆನ್ನಾಗಿದೆ. ವಿಷ್ಯುವಲ್ ಮೂಲಕ ಎರಡೂವರೆ ಗಂಟೆ ಸಿನಿಮಾ ತೋರಿಸಿದರು. ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನ ಹೊಸದು, ವಿಷುವಲ್‍ನಲ್ಲಿ ಸಿನಿಮಾ ನೋಡಿ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಂಡೆ ಎಂದು ಚಿತ್ರ ಒಪ್ಪಿಕೊಂಡ ಬಗೆಯನ್ನು ವಿವರಿಸಿದರು’

45 ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯ ಸಿನಿಮಾ ಆಗಲಿದೆ. ಈ ರೀತಿಯ ಕಂಟೆಂಟು ಬಾಲಿವುಡ್ ಹಾಲಿವುಡ್ ಈ ರೀತಿಯ ಸಿನಿಮಾ ಬಂದಿಲ್ಲ, ನಿರ್ದೇಶಕ ಅರ್ಜುನ್ ಜನ್ಯ ಚಿತ್ರವನ್ನು ಕೂಲ್ ಆಗಿ ಮಾಡಿದ್ದಾರೆ. ಯಾವುದಕ್ಕೂ ಆತುರ ಪಡೆ ಆಯ್ತು ಅಣ್ಣ ಎನ್ನುತ್ತಲೇ ಎಲ್ಲರೂ ಇಷ್ಟ ಪಡುವ ಸಿನಿಮಾ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು

45 ಚಿತ್ರ ಮೂಡಿ ಬಂದಿರುವ ರೀತಿಗೆ ಖುಷಿ ಇದೆ, ಯುಗಾದಿ ಹಬ್ಬ ಬೇವಿಗಿಂತ ಬೆಲ್ಲವೇ ಜಾಸ್ತಿ,ಚಿತ್ರದಲ್ಲಿ ಇನ್ನೂ ಜಾಸ್ತಿ ಇದೆ, ಬಿಡ್ತಾ ಇರುತ್ತೇವೆ. ಸಿನಿಮಾ ಚೆನ್ನಾಗಿ ಇದೆ. ಭಾರತದಲ್ಲಿ ಈ ರೀತಿಯ ಕಥೆ ಬಂದಿಲ್ಲ, ಸಿಜಿ ಕೆಲಸ ಕೆನಡಾದಲ್ಲಿ ಮಾಡುತ್ತಿದ್ದೇವೆ. ಕ್ಲೈಮ್ಯಾಕ್ಸ್‍ನ ಸಿಜಿ ಸ್ವರ್ಗದ ರೀತಿ ಇದೆ ಎನ್ನುವ ಮೂಲಕ ಚಿತ್ರದ ಬಗ್ಗೆ ಕುತೂಹಲ ಹೆಚ್ಚು ಮಾಡಿದರು.

ಶಿವಣ್ಣನ ಪಾತ್ರ ಕ್ಲೈಮಾಕ್ಸ್ ಅದ್ಬುತವಾಗಿ ಮೂಡಿ ಬಂದಿದೆ. ಚಿತ್ರೀಕರಣ ಸಮಯದಲ್ಲಿ ಆರೋಗ್ಯ ಸಮಸ್ಯೆ ತೋರಿಸಿಕೊಳ್ಳದೆ ಕೆಲಸ ಮಾಡಿದ್ದಾರೆ.ಅವರ ಡೆಡಿಕೇಷನ್‍ಗೆ ನಾನಂತೂ ಮರಳುಗಾಗಿದ್ದೇನೆ. ಇನ್ನೂ ಉಪೇಂದ್ರ ಅವರಂತೂ ಗುರುಗಳೇ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಹೇಳಿದ್ದರು. ರಾಜ್ ಶೆಟ್ಟಿ ಅವರೂ ಕೂಡ ಉತ್ತಮವಾಗಿ ನಟಿಸಿದ್ದಾರೆ ಎಂದರು

45 ಚಿತ್ರದ ಚಿತ್ರೀಕರಣ ಆಗಿದ್ದೂ ಗೊತ್ತಿಲ್ಲ, ಸಿಜಿ ಕೆಲಸದಿಂದ ತಡವಾಗಿದೆ. ಕೆನಡಾದಲ್ಲಿ ಸಿಜಿ ಕೆಲಸ ಮಾಡ್ತಾ ಇದ್ದೇವೆ ಬೆಂಬಲ ನೀಡಿ, ಚಿತ್ರದಲ್ಲಿ ಇನ್ನು ಕಂಟೆಂಟು ಜಾಸ್ತಿ ಇದೆ, ಒದೊಂದೇ ಬಿಡ್ತಾ ಇರುತ್ತೇವೆ ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೇಕು ಎಂದು ಕೇಳಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin