"Yudda Kanda" movie is a success: Actor-producer Ajay Rao wins

“ಯುದ್ದ ಕಾಂಡ” ಚಿತ್ರ ಯಶಸ್ವೀ : ನಟ,ನಿರ್ಮಾಪಕ ಅಜೇಯ್ ರಾವ್ ಗೆ ಗೆಲುವು - CineNewsKannada.com

“ಯುದ್ದ ಕಾಂಡ” ಚಿತ್ರ ಯಶಸ್ವೀ : ನಟ,ನಿರ್ಮಾಪಕ ಅಜೇಯ್ ರಾವ್ ಗೆ ಗೆಲುವು

ಸಾಲ ಮಾಡಿ ಚಿತ್ರ ಮಾಡಿದ್ದೇನೆ ಎಂದು ಚಿತ್ರ ಬಿಡುಗಡೆಗೂ ಮುನ್ನ ಹೇಳಿಕೊಂಡಿದ್ದ ನಟ, ನಿರ್ಮಾಪಕ ಅಜಯ್ ರಾವ್ ಅವರ “ಯುದ್ದಕಾಂಡ” ಚಿತ್ರಕ್ಕೆ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ನಗುಮೊಗದಲ್ಲಿದ್ಧಾರೆ

ಚಿತ್ರದ ಯಶಸ್ಸಿನ ಬಗ್ಗೆ ಹೇಳಿಕೊಳ್ಳಲು ಇಡೀ ತಂಡದೊಂದಿಗೆ ನಟ, ನಿರ್ಮಾಪಕ ಅಜಯ್ ರಾವ್ ಮಾಧ್ಯಮದ ಮುಂದೆ ಬಂದಿದ್ದರು, ಈ ವೇಳೆ ಮಾತಿಗಿಳಿದ ಅವರು ಚಿತ್ರ ನೋಡಿರುವ ಪ್ರೇಕ್ಷಕರಿಂದ ¸ ಚಿತ್ರದ ಬಗ್ಗೆ ನೆಗೆಟಿವ್ ಮಾತು ಬಂದಿಲ್ಲ ಎಲ್ಲರು ಮೆಚ್ಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಆಡಿರುವ ಪಾಸಿಟಿವ್ ಮಾತುಗಳೇ ಎನರ್ಜಿ ನೀಡಿದೆ. ನಾನು ಹೋದ ಮೇಲು ನೆನಪಿಸಿಕೊಳ್ಳುವ ಚಿತ್ರ “ಯುದ್ದಕಾಂಡ” ಎಂದರು

ಚಿತ್ರ ಮೊದಲು ನೋಡಿ ಬಿಡುಗಡೆಗೆ ಸಹಕರಿಸಿ ಜೊತೆಯಾಗಿ ನಿಂತವರು ನಟ ಯಶ್ ಅವರನ್ನು ಈ ಸಂದರ್ಭದಲ್ಲಿಮರೆಯುವಂತಿಲ್ಲ. “ಯುದ್ದಕಾಂಡ” ಟ್ರೇಲರ್ ಬಿಡುಗಡೆ ಮಾಡಿ ಜೊತೆಗೆ ಚಿತ್ರದ ಮೊದಲ ಟಿಕೇಟ್‍ಗೆ ಹಣ ನೀಡಿ ರವಿಚಂದ್ರನ್ ಸರ್ ನನಗೆ ಹಾರೈಸಿ ಮತ್ತು ಸದ್ಯದಲ್ಲೇ ಕುಟುಂಬ ಸಮೇತ ಚಿತ್ರ ನೋಡುವುದಾಗಿ ಹೇಳಿದ್ದಾರೆ. ನಟಿ ರಕ್ಷಿತ ಹಾಗೂ ನಿರ್ದೇಶಕ ಪ್ರೇಮ್ ಕರೆ ಮಾಡಿ ವಿಚಾರಿಸಿದ್ದಾರೆ. ನೆನಪಿರಲಿ ಪ್ರೇಮ್, ಓಂಪ್ರಕಾಶ್ ರಾವ್ ಮುಂತಾದವರು ಚಿತ್ರ ನೋಡಿ ವಿಡಿಯೋ ಸಂದೇಶದ ಮೂಲಕ ಹಾರೈಸಿದ್ದಾರೆ ಎಂದು ಹೇಳಿಕೊಂಡರು

ನಿರ್ದೇಶಕ ಪವನ್ ಭಟ್ ಮಾತನಾಡಿ,ಬಿಡುಗಡೆಗೂ ಮುಂಚೆ ನನಗೆ ಎಲ್ಲಾ ಆಲ್ ದಿ ಬೆಸ್ಟ್ ಹೇಳುತ್ತಿದ್ದರು. ಈಗ ಕಂಗ್ರಾಜುಲೇಷನ್ಸ್ ಹೇಳುತ್ತಿದ್ದಾರೆ. ಚಿತ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು

ಹಿರಿಯ ಕಲಾವಿದ ಪ್ರಕಾಶ್ ಬೆಳವಾಡಿ ಮಾತನಾಡಿ ಸಿನಿಮಾ ನೋಡಿದ ಹೆಂಡತಿ ಭಾವುಕರಾಗಿ ಚಿತ್ರಮಂದಿರದಿಂದಲೇ ಕರೆ ಮಾಡಿ ಪ್ರಶಂಸಿದರು. ಮುಂದೆ ಈತರಹದ ಪಾತ್ರ ಮಾತ್ರ ಒಪ್ಪಿಕೊಳ್ಳಿ ಎಂದು ಸಲಹೆ ನೀಡಿದರು. ಒಳ್ಳೆಯ ಚಿತ್ರ ಮಾಡಿ ನಿರ್ಮಾಪಕರು ಹಾಗೂ ನಿರ್ದೇಶಕರು ಗೆದಿದ್ದಾರೆ ಎಂದು ಹೇಳಿದರು

ನಟಿ ಅರ್ಚನಾ ಜೋಯಿಸ್ ಕೂಡ ತಮ್ಮ ಪಾತ್ರ ಹಾಗೂ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಸಂತಸ ವ್ಯಕ್ತ ಪಡಿಸಿದರು. ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್ ಹಾಗೂ ಕಲಾ ನಿರ್ದೇಶಕ ಅಮರ್. ಟಿ.ಎಸ್.ನಾಗಾಭರಣ ಈ ಚಿತ್ರದಲ್ಲಿ ನ್ಯಾಯಾಧೀಶರ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin