Arundhati is the Black Rose in the serial Karimani: A source of curiosity

ಕರಿಮಣಿ ಧಾರಾವಾಹಿಯಲ್ಲಿ ಆರುಂಧತಿಯೇ ಬ್ಲಾಕ್ ರೋಸ್ : ಕುತೂಹಲಕ್ಕೆ ಎಡೆ - CineNewsKannada.com

ಕರಿಮಣಿ ಧಾರಾವಾಹಿಯಲ್ಲಿ ಆರುಂಧತಿಯೇ ಬ್ಲಾಕ್ ರೋಸ್ : ಕುತೂಹಲಕ್ಕೆ ಎಡೆ

ಕಲರ್ಸ್ ಕನ್ನಡದ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದು ‘ಕರಿಮಣಿ’. ಈ ಧಾರಾವಾಹಿಯಲ್ಲಿ ‘ಬ್ಲಾಕ್ ರೋಜ್’ ಯಾರು ಎನ್ನುವುದನ್ನು ಈಗಾಗಲೇ ಪ್ರೇಕ್ಷಕರಿಗೆ ರಿವೀಲ್ ಮಾಡಲಾಗಿದೆ.ಕರ್ಣನ ತಾಯಿ ಅರುಂಧತಿಯೇ ‘ಬ್ಲಾಕ್ ರೋಜ್’ ಎನ್ನುವ ರಹಸ್ಯ ನೋಡುಗರಿಗೇನೋ ಗೊತ್ತಾಗಿದೆ.

ಧಾರಾವಾಹಿಯ ನಾಯಕ ನಾಯಕಿಯಾಗಿ ಕರ್ಣ ಮತ್ತು ಸಾಹಿತ್ಯಾ ಜೋಡಿ ಜನರ ಮನಸ್ಸನ್ನ ಗೆಲ್ಲುತ್ತಾ ಬಂದಿದೆ. ಕುಟುಂಬದ ಸದಸ್ಯರೆಲ್ಲ ಮೆಚ್ಚಿ ನೋಡುವ ಈ ಧಾರಾವಾಹಿಯಲ್ಲಿ ಆದರೆ, ಸಾಹಿತ್ಯಾಗೆ ಮಾತ್ರ ಇದರ ಸುಳಿವಿಲ್ಲ.

ಇಂತಹ ಸಂಧರ್ಭದಲ್ಲಿ ಸದ್ಯದಲ್ಲಿಯೇ ಸಾಹಿತ್ಯಾಗೂ ಕೂಡಾ ತನ್ನ ಕುಟುಂಬದ ಸದಸ್ಯರಲ್ಲಿ ಇರುವ ಒಬ್ಬರೇ ‘ಬ್ಲಾಕ್ ರೋಜ್’ ಎನ್ನುವ ಸತ್ಯ ಗೊತ್ತಾಗಲಿದ್ದು, ಇದರಿಂದ ಕರ್ಣ ಮತ್ತು ಸಾಹಿತ್ಯಾ ರ ಜೀವನದಲ್ಲಿ, ಸಂಬಂಧಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ ಎನ್ನುವುದು ಆಸಕ್ತಿಕರ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ವಾರದ ಏಳೂ ದಿವಸ ಪ್ರತಿ ಸಂಜೆ 6ಕ್ಕೆ ಪ್ರಸಾರವಾಗುವ ‘ಕರಿಮಣಿ’ ಅತ್ಯಂತ ಕುತೂಹಲದಿಂದ ಸಾಗುವಲ್ಲಿ ಯಶಸ್ವಿಯಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin