ಡೂಡ್ ಶೀರ್ಷಿಕೆ ಪ್ರಕಟ: ನಾಯಕ ತೇಜ್ ಅಸಮಾಧಾನ
ತ್ರಿಭಾಷಾ ಚಿತ್ರ “ಡೂಡ್” ಚಿತ್ರವನ್ನು ನಾಯಕ ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ತೇಜ್ ಪ್ರಕಟಿಸಿರುವುದು ಎಲ್ಲರಿಗೂ ಗೊತ್ತೇ ಇದೆ, ಈ ನಡುವೆ ಅದೇ ಹೆಸರಲ್ಲಿ ಮೈತ್ರಿ ಮೂವಿ ಮೇಕರ್ಸ್ “ಡೂಡ್” ಹೆಸರಲ್ಲಿ ಚಿತ್ರ ಮಾಡುವುದಾಗಿ ಘೋಷಿಸಿದೆ, ಇದಕ್ಕೆ ನಾಯಕ ತೇಜ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ

ನಿರ್ದೇಶಕ-ನಟ ಪ್ರದೀಪ್ ರಂಗನಾಥನ್ ಅವರ ಪ್ಯಾನ್-ಇಂಡಿಯಾ ಚಿತ್ರಕ್ಕೆ ಡೂಡ್ ಎಂಬ ಶೀರ್ಷಿಕೆ ಇಡಲಾಗಿದೆ. ಈಗಾಗಲೇ ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ನಟ, ನಿರ್ದೇಶಕ ತೇಜ್ ಡೂಡ್ ಚಿತ್ರದ ಶೀರ್ಷಿಕೆಯಡಿ ಕೆಲಸ ಮಾಡುತ್ತಿದ್ದಾರೆ’
ಈ ಕುರಿತು ಪ್ರತಿಕ್ರಯಿಸಿದ ನಾಯಕ ತೇಜ್ ಮೈತ್ರಿಯಂತಹ ಉನ್ನತ ಮಟ್ಟದ ನಿರ್ಮಾಣ ಸಂಸ್ಥೆಯ ವಿರುದ್ಧ ಹೋರಾಡುವ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು, ಆದರೆ ಈ ಈ ಎಲ್ಲಾ ಗೊಂದಲಗಳನ್ನು ನಿವಾರಿಸಲು ನಾವು ಮೈತ್ರಿ ಮೂವಿ ಮೇಕರ್ಸ್‍ನ ಕಾರ್ಯನಿರ್ವಾಹಕ ನಿರ್ಮಾಪಕ ಅನಿಲ್ ಅವರ ಗಮನಕ್ಕೆ ತಂದಿದ್ದು ಮತ್ತು ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದಾರೆ.
ತೇಜ್ ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತಯಾರಾಗುತ್ತಿರುವ ತ್ರಿಭಾಷಾ ಚಿತ್ರವಾದ ಆUಆಇ ನಲ್ಲಿ ನಿರ್ದೇಶನ ಮತ್ತು ನಟನೆ ಮಾಡುತ್ತಿದ್ದಾರೆ. ಫುಟ್ಬಾಲ್ ಸುತ್ತ ಕೇಂದ್ರೀಕೃತ ಮತ್ತು ತೀವ್ರವಾದ ಭಾವನೆಗಳಿಂದ ಕೂಡಿದ ಈ ಚಿತ್ರ ಉತ್ಸಾಹಿ ಫುಟ್ಬಾಲ್ ಪ್ರೇಮಿ ದಿವಂಗತ ಕನ್ನಡ ಸೂಪರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಸಮರ್ಪಿತವಾಗಿದೆ.

ಹಿರಿಯ ನಟ ರಂಗಾಯಣ ರಘು ಫುಟ್ಬಾಲ್ ತರಬೇತುದಾರನಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ.ಪೋಸ್ಟ್-ಪ್ರೊಡಕ್ಷನ್ ಕೂಡ ಏಕಕಾಲದಲ್ಲಿ ಪ್ರಗತಿಯಲ್ಲಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್‍ನಲ್ಲಿ ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಇದನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದಿದ್ಧಾರೆ
ರಾಘವೇಂದ್ರ ರಾಜ್‍ಕುಮಾರ್ ಅವರು ಯೋಜನೆಗೆ ಸ್ಕ್ರಿಪ್ಟ್ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರ ಸನ್ಯಾ ಕಾವೇರಮ್ಮ, ಮೇಘಾ, ಮೋಹಿತ್, ಧೃತಿ, ಅನಘ್ರ್ಯ, ದಿಪಾಲಿ ಪಾಂಡೆ, ಸಿರಿ, ಇವಾಂಜೆಲಿನ್, ಸೋನು ತೀರ್ಥ ಗೌಡ್, ಯಶಸ್ವಿನಿ, ಮರ್ಸಿ ಮತ್ತು ಮೋನಿಶ್ ಅವರಿಂದ ಚಿತ್ರಿಸಿದ ಮಹಿಳಾ ಫುಟ್‍ಬಾಲ್ ಆಟಗಾರರ ಪ್ರಬಲ ಸಮೂಹವನ್ನು ಒಳಗೊಂಡಿದೆ. ಇತರ ಪ್ರಮುಖ ಪಾತ್ರಗಳನ್ನು ಸುಂದರ್ ರಾಜ, ಸ್ಪರ್ಶ ರೇಖಾ ಮತ್ತು ವಿಜಯ್ ಚೆಂಡೂರ್ ನಿರ್ವಹಿಸಿದ್ದಾರೆ.

