"Marutha" is a film that is both entertaining and haunting about a serious subject.

ಮನರಂಜನೆಯ ಜೊತೆಗೆ ಗಂಭೀರ ವಿಷಯದ ಸುತ್ತಾ ಕಾಡುವ ಚಿತ್ರ “ಮಾರುತ” - CineNewsKannada.com

ಮನರಂಜನೆಯ ಜೊತೆಗೆ ಗಂಭೀರ ವಿಷಯದ ಸುತ್ತಾ ಕಾಡುವ ಚಿತ್ರ “ಮಾರುತ”

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಲಾ ಸಾಮ್ರಾಟ್ ಎಸ್.ನಾರಾಯಣ್ ಬಹಳ ದಿನಗಳ ನಂತರ ನಟ ದುನಿಯಾ ವಿಜಯ್ ಮತ್ತು ನಿರ್ಮಾಪಕ ಕೆ, ಮಂಜು ಜೊತೆಗೂಡಿ ಇಡೀ ದೇಶವೇ ಗಮನ ಸೆಳೆಯುವ, ನಮ್ಮ ನಿಮ್ಮೆಲ್ಲರ ನಡುವೆ ಇರುವ ಗಂಭೀರ ವಿಷಯ ಮುಂದಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಅದುವೇ “ಮಾರುತ”.

ಚಿತ್ರದ ಕಥೆ ಹೇಳಲು ಅದನ್ನು ಅರ್ಥ ಮಾಡಿಸಲು ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವನ್ನೇ ಇಟ್ಟುಕೊಂಡಿದ್ದಾರೆ. ಮನರಂಜನೆಯ ಜೊತೆ ಜೊತೆಗೆ ಗಂಭೀರ ವಿಷಯವನ್ನು ಮನೆ ಮನ ಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಅದು ಯಾವುದು ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಚೆನ್ನ ಎನ್ನುವ ಕುತೂಹಲ ಕಾಯ್ದುಕೊಂಡಿದ್ದಾರೆ.

ಚಿತ್ರದಲ್ಲಿ ಸ್ಯಾಂಡಲ್‍ವುಡ್ ಸಲಗ ವಿಜಯ್ ಕುಮಾರ್, ಶ್ರೇಯಸ್ ಮಂಜು, ಹಿರಿಯ ಕಲಾವಿದರಾದ ರವಿಚಂದ್ರನ್, ರಂಗಾಯಣ ರಘು, ತಾರಾ ಅನುರಾದ , ಸಾಧುಕೋಕಿಲ, ಶರತ್ ಲೋಹಿತಾಶ್ವ, ರಾಜು ತಾಳಿಕೋಟೆ, ಪಾವಗಡ ಮಂಜು, ಸುಜಯ್ ಶಾಸ್ತ್ರಿ, ಕಲ್ಯಾಣಿ, ನಟಿಯರಾದ ಬೃಂದ ಆಚಾರ್ಯ, ನಿಶ್ವಿಕಾ ನಾಯ್ಡು ಸೇರಿದಂತೆ ಹಿರಿ ಕಿರಿಯ ಕಲಾವಿದರ ದಂದು ಚಿತ್ರದಲ್ಲಿದ್ಧಾರೆ. ಚಿತ್ರಕ್ಕೆ ಕೆ. ಮಂಜು ಮತ್ತು ರಮೇಶ್ ಯಾದವ್ ಬಂಡವಾಳ ಹಾಕಿದ್ದಾರೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ಎಸ್.ನಾರಾಯಣ್, ಈ ಮುಂಚೆ ದುನಿಯಾ ವಿಜಯ್ ಅವರ ಜೊತೆ ಚಂಡ ಮಾಡಿದ್ದೆ. ಈಗ ಮಾರುತ ಚಿತ್ರ ಮಾಡಿದ್ದೇವೆ., ಚಿತ್ರರಂಗಕ್ಕೆ ಚಂಡಮಾರತದ ರೀತಿ ದೊಡ್ಡ ಯಶಸ್ಸು ಸಿಗಲಿ, ನಿರ್ಮಾಪಕರು ಕಲಾವಿದರು ಮತ್ತು ಚಿತ್ರರಂಗಕ್ಕೆ ಒಳಿತಾಗಲಿ ಎಂದರು.

ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಎಚ್ಚರವಿರಲಿ, ಅವರ ಚಲನವಲನಗಳ ಬಗ್ಗೆ ನಿಗಾ ಇರಲಿ, ಅವರ ಕೈಯಲ್ಲಿ ಇರುವ ಮೊಬೈಲ್ ಚಟುವಟಿಕೆಗಳ ಬಗ್ಗೆ ತಿಳಿದಿರಲಿ, ವಾರಕ್ಕೊಮ್ಮೆ ಬಿಡುವು ಮಾಡಿಕೊಂಡು ಅವರೊಂದಿಗೆ ಕಾಲ ಕಳೆಯಿರಿ, ಅವರ ಮನಸ್ಸಿನ ಆಸೆ ಬಯಕೆ ಹಂಚಿಕೊಳ್ಳಿ, ಮಕ್ಕಳು ನಿಮ್ಮ ನಿಮ್ಮ ಸ್ವತ್ತು ಅದೇ ಮಕ್ಕಳು ದೇಶಕ್ಕೆ ಸಂಪತ್ತು ಇದೇ ಮಾರುತ ಚಿತ್ರದ ಕಥಾವಸ್ತು ಎಂದು ನಾಲ್ಕು ಸಾಲಿನಲ್ಲಿ ಕಥೆಯ ಎಳೆ ಬಿಚ್ಚಿಟ್ಟರು.

ಚಿತ್ರದ ಕಥೆ ಕೇಳಿದರೆ ಕವಿತೆ ಸಾಕ್ಷ್ಯಚಿತ್ರ ಅಂದುಕೊಳ್ಳಬಹುದು, ಆದರೆ ಗಂಭೀರವಾದ ವಿಷಯ ಚಿತ್ರದಲ್ಲಿದೆ. ನಮ್ಮ ಜೊತೆಯಲ್ಲಿಯೇ ಇರುವ ಭಯಾನಕ ವಿಷಯವನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದೇವೆ. ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುವ ವಿಷಯ. ಗಂಭೀರ ವಿಷಯ ಸಿನಿಮಾ ಮಾಡಿದ್ದೇವೆ. ಗಟ್ಟಿಯಾದ ಬಂಡೆಯನ್ನು ಸೀಳಲು ಅಷ್ಟೇ ಗಟ್ಟಿಯಾದ ಪಾತ್ರ ಬೇಕಿತ್ತು ಆಗ ಹೊಳೆದವರೆ ದುನಿಯಾ ವಿಜಯ್ ಎಂದರು.

ದುನಿಯಾ ವಿಜಯ್ “ಭೀಮ” ಚಿತ್ರದ ಮೂಲಕ ಮಾದಕ ವಸ್ತುಗಳ ಕುರಿತು ಚಿತ್ರ ಮಾಡಿ ಅದರಲ್ಲಿ ಯಶಸ್ಸು ಕಂಡವರು,ಈ ಹಿಂದೆ ಅಣ್ಣಾವ್ರ ನಟಿಸಿದ್ದ “ಶಬ್ದವೇದಿ” ಚಿತ್ರದಲ್ಲಿ ಇಂತಹುದೇ ಕಥೆ ಹೇಳಿದ್ದೆವು. ಮಾದಕ ವಸ್ತುಗಳಿಗಿಂತ ಗಂಭೀರವಾದ ವಿಷಯ ನಮ್ಮ ಜೊತೆಯಲ್ಲಿಟ್ಟುಕೊಂಡು ಮಾರುತ ಚಿತ್ರ ಮಾಡಿದ್ದೇವೆ. ಅದರ ರಹಸ್ಯ ಪತ್ತೆಹಚ್ಚಲು ಸಾಂಡಲ್‍ವುಡ್ ಸಲಗ ವಿಜಯ್ ಕುಮಾರ್ ಅವರೇ ಬೇಕಾಗಿತ್ತು. ಚಿತ್ರದಲ್ಲಿ ಅವರ ಬಾಡಿ ಲಾಂಗ್ವೇಜ್ ಬೇರೆ ಇದೆ. ಸೋಷಿಯಲ್ ಮೀಡಿಯಲ್ಲಿ ತಲ್ಲೀನರಾಗಿದ್ದೇವೆ, ಅದರ ದುಷ್ಟಪರಿಣಾಮ ಏನೆಲ್ಲಾ ಇದೆ ಎನ್ನುವುದನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಚಿತ್ರವನ್ನು ಯುವಕರು, ಪೋಷಕರು ತಪ್ಪದೇ ಸಿನಿಮಾ ನೋಡಬೇಕು ಎಂದು ಹೇಳಿದರು

ಮುಂದಿನ 5 -10 ವರ್ಷ ಮುಂದುವರಿದರೆ ಕೊರೋನಾಗಿಂತ ಕೆಟ್ಟ ಕಾಯಿಲೆ ಆಗಲಿದೆ. ಚಿತ್ರ ಪ್ರತಿ ಮನೆ ಮನಸ್ಸು ಕಾಡುತ್ತದೆ. ಜೊತೆಗೆ ಮನರಂಜೆನಯೂ ಸಿನಿಮಾ ಉಸಿರಾಗಿಸಿಕೊಂಡ ನಿರ್ಮಾಪಕರು ಚಿತ್ರರಂಗದಲ್ಲಿ ಗಟ್ಟಿಯಾಗಿ ಉಳಿಯಬೇಕು, ಆಗ ಮಾತ್ರ ಚಿತ್ರರಂಗ ಉಳಿಯಲು ಕಾರಣ. ನಟ ಶ್ರೇಯಸ್ ಮಂಜು ಮೂರು ಶೇಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

ನಟ ದುನಿಯಾ ವಿಜಯ್ ಮಾತನಾಡಿ, ಒಳ್ಳೆಯ ಚಿತ್ರ ಮಾಡಿದ್ದೇವೆ ಪ್ರಚಾರ ಮಾಡುವುದು ಅಗತ್ಯವಿದೆ.ಎಷ್ಟೇ ಒಳ್ಳೆಯ ಕಥೆ, ಸಿನಿಮಾ ಮಾಡಿದರೂ ಸರಿಯಾಗಿ ಪ್ರಚಾರ ಮಾಡಲಿಲ್ಲ ಆದರೆ ತೊಂದರೆ ಆಗಲಿದೆ. ಸೂಪರ್ ಹಿಟ್ ಆಗುವ ಫ್ಯಾಮಿಲಿ ಸಿನಿಮಾ ಕಳೆದು ಕೊಳ್ಳೋದು ಉಳಿಸಿಕೊಳ್ಳೋದು ನಿರ್ಮಾಪಕರ ಮೇಲಿದೆ. ಪ್ರಚಾರಕ್ಕೆ ಹೆಚ್ಚು ಆದ್ಯತೆ ಕೊಡಿ, ಭೀಮ ಚಿತ್ರದಲ್ಲಿ ಎಷ್ಟು ಕಷ್ಟಪಟ್ಟಿದ್ದೇನೆ ಎನ್ನುವುದು ಗೊತ್ತಿದೆ ಎಂದರು

ನಿರ್ದೇಶಕ ಎಸ್ ನಾರಾಯಣ್ ಅವರ ಜೊತೆ ದಕ್ಷ, ಚಂಡ ಹಾಗು ಈಗ ಮಾರುತ ಚಿತ್ರ ಮಾಡಿದ್ದೇನೆ ಒಳ್ಳೆಯ ಕಥೆ ಸಿದ್ದಪಡಿಸಿಕೊಳ್ಳಿ ಮತ್ತೊಮ್ಮೆ ಜೊತೆಯಾಗಿ ಕೆಲಸ ಮಾಡೋಣ ಎಂದು ವೇದಿಕೆಯ ಮೇಲೆ ನಿರ್ದೇಶಕ ಎಸ್, ನಾರಾಯಣ್ ಅವರಿಗೆ ನಟ ದುನಿಯಾ ವಿಜಯ್ ಹೇಳಿದರು

ನಟ ಶ್ರೇಯಸ್ ಮಂಜು ಮಾತನಾಡಿ ನಾರಾಯಣ್ ಸರ್ ಜೊತೆ ಕೆಲಸ ಮಾಡಿದರೆ ಕಲಿಕೆಗೆ ಅವಕಾಶ ಇರುತ್ತದೆ. ಒಂದು ರೀತಿ ವಿಶ್ವವಿದ್ಯಾಲಯ ಇದ್ದಂತೆ. ವಿಜಯ್ ಸರ್ 12 ವರ್ಷದಿಂದ ಪರಿಚಯ, ಅವರ ಸಿನಿಮಾ ನೋಡಿ ಬೆಳೆದವರು. ತುಂಬಾ ಬೆಂಬಲವಾಗಿ ನಿಂತಿದ್ದಾರೆ ಎಂದರು

ನಟಿ ಬೃಂದಾ ಆಚಾರ್ಯ ಮಾತನಾಡಿ ಸಿನಿಮಾ ಮಾಡುವಿದು ದೊಡ್ಡ ಸಂಭ್ರಮ.ಸಿನಿಮಾ ಮಾಡುವುದೇ ಇನ್ನೊಂದು ಖುಷಿ. ಮಾರುತ ಹಾಡು ಎನರ್ಜಿಟೆಕ್‍ಆಗಿ ಮೂಡಿಬಂದಿದೆ. ಮುಗ್ದವಾದ ಪಾತ್ರ.ಎಲ್ಲರಿಗೂ ಇಷ್ಟವಾಗುವ ಪಾತ್ರ ಎಂದು ಮಾಹಿತಿ ಹಂಚಿಕೊಂಡರು

ನಿರ್ಮಾಪಕ ಕೆ ಮಂಜು ಮಾತನಾಡಿ, ಎಸ್ ನಾರಾಯಣ್ ಅವರ ಜೊತೆ ಜಮೀನಾದ್ರು, ಶೈಲು ಚಿತ್ರದ ಬಳಿಕ ಮೂರನೇ ಚಿತ್ರ ಇದು. ನಟ ದುನಿಯಾ ವಿಜಯ್ ನಿರ್ದೇಶಕರಾದ ಮೇಲೆ ತುಂಬಾನೇ ಸಹಕಾರ ನೀಡಿದ್ದಾರೆ. ಕೆಲವು ಕಲಾವಿದರೂ ಸಕಾಲಕ್ಕೆ ಚಿತ್ರೀಕರಣಕ್ಕೆ ಬರದೆ ನಿರ್ಮಾಪಕರು ಪರದಾವುವಂತಗುದು. ಅಂತಹದರಲ್ಲಿ ದುನಿಯಾ ವಿಜಯ್ ಚಿತ್ರದಲ್ಲಿ ಕೆಲಸ ಮಾಡಿರುವುದು ಚಿತ್ರಕ್ಕೆ ಮತ್ತಷ್ಟು ತೂಕ ಬಂದಿದೆ ಬಂದಿದೆ ಎಂದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin