The life story of Padma Shri Saalumarada Thimmakka will be made into a film.

ಸಿನಿಮಾ ರೂಪದಲ್ಲಿ ಬರಲಿದೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ - CineNewsKannada.com

ಸಿನಿಮಾ ರೂಪದಲ್ಲಿ ಬರಲಿದೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ

ವೃಕ್ಷಗಳನ್ನೇ ಮಕ್ಕಳಾನ್ನಾಗಿ ಕಂಡು ಲೆಕ್ಕವಿಲ್ಲದಷ್ಟು ಮರಗಳನ್ನು ಬೆಳೆಸಿ ಪೆÇೀಷಿಸಿ ಇಡೀ ಜಗತ್ತಿಗೆ ಮಾದರಿಯಾಗಿರುವ ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ ಈಗ ಸಿನಿಮಾ ರೂಪದಲ್ಲಿ ಬರಲಿದೆ.

ದಿಲೀಪ್ ಕುಮಾರ್ ಎಚ್ ಆರ್ , ಸೌಜನ್ಯ ಡಿ.ವಿ, ಎ ಸಂತೋಷ್ ಮುರಳಿ ಹಾಗೂ ಒರಟ ಶ್ರೀ ನಿರ್ಮಾಣದ ಈಚಿತ್ರ ಡಾ. ನೆಲ್ಲಿ ಕಟ್ಟೆ ಎಸ್ ಸಿದ್ದೇಶ್ ಅವರ “ವೃಕ್ಷಮಾತೆ ಸಾಲುಮರದ ತಿಮ್ಮಕ್ಕ” ಕೃತಿ ಆಧಾರಿತವಾಗಿದೆ.

” ಒರಟ ಐ ಲವ್ ಯು” ಖ್ಯಾತಿಯ ನಿರ್ದೇಶಕ ಒರಟ ಶ್ರೀ ಮೊದಲ ಬಾರಿಗೆ ಕಲಾತ್ಮಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು.. ನಟಿ ಸೌಜನ್ಯ ತಿಮ್ಮಕ್ಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನೀನಾಸಂ ಅಶ್ವಥ್ ತಿಮ್ಮಕ್ಕನ ಗಂಡನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಎಂ.ಕೆ ಮಠ, ಗಣೇಶ್ ಕೆ ಸರ್ಕಾರ್, ದೀಪ ಡಿ.ಕೆ ಅಂಜನಮ್ಮ, ಭೂಮಿಕಾ, ಪ್ರಕಾಶ್ ಶೆಟ್ಟಿ, ಮನು ಮುಂತಾದವರು ತಾರಾಬಳಗದಲ್ಲಿದ್ದಾರೆ.

ಇತ್ತೀಚೆಗೆ ಚಿತ್ರೀಕರಣ ಪ್ರಾರಂಭವಾಗಿದ್ದು,ತುಮಕೂರು ಜಿಲ್ಲೆಯ ಹುಲಿಕಲ್ ಹಾಗೂ ಮಧುಗಿರಿಯ ಸುತ್ತಮುತ್ತ ಚಿತ್ರಿಕರಣವಾಗಿದೆ. ಮೊದಲ ಹಂತದ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಮುಂದಿನ ವಾರದಲ್ಲಿ ಎರಡನೇ ಶೆಡ್ಯೂಲ್ ಆರಂಭವಾಗಲಿದೆ.

ನಾಗರಾಜ್ ಛಾಯಾಗ್ರಹಣ, ಕೆ ಗಿರೀಶ್ ಕುಮಾರ್ ಸಂಕಲನ, ಶ್ಯಾಮ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸಂಭಾಷಣೆ ಹಾಗೂ ಸಾಹಿತ್ಯವನ್ನು ನೆಲ್ಲಿಕಟ್ಟೆ ಸಿದ್ದೇಶ್ ಹಾಗೂ ಒರಟ ಶ್ರೀ ಬರೆದಿದ್ದಾರೆ.

ಇತ್ತೀಚೆಗೆ ಚಿತ್ರದ ಶೀರ್ಷಿಕೆಯನ್ನು ಹಿರಿಯ ಬರಹಗಾರ್ತಿ ಹಾಗೂ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಶ್ರೀಮತಿ ನಾಗಲಕ್ಷ್ಮಿ ಬಾಯಿ ಅನಾವರಣಗೊಳಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin