National Crush Rashmika Mandanna's first look in a new avatar from "Mysaa" released

“ಮೈಸಾ” ಹೊಸ ಅವತಾರದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ಬಿಡುಗಡೆ - CineNewsKannada.com

“ಮೈಸಾ” ಹೊಸ ಅವತಾರದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ಬಿಡುಗಡೆ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತೆಲುಗು,ತಮಿಳು, ಬಾಲಿವುಡ್‍ನಲ್ಲಿ ಮಿಂಚುತ್ತಿರುವ ನಡುವೆ ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ “ಮೈಸಾ”ದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. “ಮೈಸಾ”ದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಮೈಸಾ ಚಿತ್ರ ಗೊಂಡ್ ಬುಡಕಟ್ಟು ಜನಾಂಗದವರ ಆಸಕ್ತಿದಾಯಕ ಜಗತ್ತಿನಲ್ಲಿ ವಾಸಿಸುವ ಅತ್ಯಂತ ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ ಆಗಿದೆ ನಟಿ ರಶ್ಮಿಕಾ ಮಂದಣ್ಣ ಅವರ ಹೊಸ ಲುಕ್ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದ್ದು ಆಕ್ಷನ್-ಪ್ಯಾಕ್ಡ್ ಪೋಸ್ಟರ್ ನೊಂದಿಗೆ “ ಮೈಸಾ” ಬಿಡುಗಡೆಯಾಗಿದೆ.

ಮಹಿಳಾ ಪ್ರಧಾನ ಚಿತ್ರಕ್ಕೆ ಯಶಸ್ವಿ ನಿರ್ದೇಶಕ ಹನು ರಾಘವಪುಡಿ ಅವರ ಶಿಷ್ಯ ರವೀಂದ್ರ ಪುಲ್ಲೆ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಜಯ್ ಮತ್ತು ಅನಿಲ್ ಸಯ್ಯಾಪುರರೆಡ್ಡಿ ಚಿತ್ರಕ್ಕೆ ಬಂಡವಾಳೂ ಹೂಡಲು ಸಜ್ಜಾಗಿದ್ದು ಸಾಯಿ ಗೋಪಾ ಚಿತ್ರ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ವಿಭಿನ್ನ ಮತ್ತು ವಿಶೇಷ ಲುಕ್‍ನಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿರುವ ಫಸ್ಟ್ ಲುಕ್ ಕುತೂಹಲ ಕೆರಳಿಸಿದೆ.ನಿರ್ದೇಶಕ ಹನು ರಾಘವಪುಡಿ ತೆಲುಗು ಲುಕ್ ಮತ್ತು ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. ತಮಿಳು ನಟ ಧನುಷ್ ಮತ್ತು ಬಾಲಿವುಡ್ ವಿಕ್ಕಿ ಕೌಶಲ್ ತಮಿಳು ಮತ್ತು ಹಿಂದಿ ಮೊದಲ ನೋಟವನ್ನು ಬಿಡುಗಡೆ ಮಾಡಿ ಶುಭ ಕೋರಿದ್ಧಾರೆ

ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಪೆÇೀಸ್ಟರ್‍ಗಳನ್ನು ದುಲ್ಕರ್ ಸಲ್ಮಾನ್ ಮತ್ತು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದು ನಟಿ ರಶ್ಮಿಕಾ ಮಂದಣ್ಣ ಮತ್ತವರ ತಂಡದ “ಮೈಸಾ” ಚಿತ್ರಕ್ಕೆ ಶುಭ ಹಾರೈಸಿದ್ದಾರೆ

ಸಾಂಪ್ರದಾಯಿಕ ಸೀರೆ ಉಟ್ಟು, ಮೂಗುತಿ ಮತ್ತು ಕುತ್ತಿಗೆ ಆಭರಣ ಒಳಗೊಂಡಂತೆ ಬುಡಕಟ್ಟು ಆಭರಣಗಳಿಂದ ಅಲಂಕರಿಸಲ್ಪಟ್ಟ ರಶ್ಮಿಕಾ ಮಂದಣ್ಣ ಅವರ ರಕ್ತಸಿಕ್ತ ನೋಟ ಮತ್ತು ಕೈಯಲ್ಲಿ ಬಿಗಿಯಾಗಿ ಹಿಡಿದಿರುವ ವಸ್ತು ಎಲ್ಲವೂ ಆಕರ್ಷಕ ನಿರೂಪಣೆ ಲುಕ್ ಅಭಿಮಾನಿಗಳನ್ನು ಚಿತ್ರದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ

ನಿರ್ದೇಶಕ ರವೀಂದ್ರ ಪುಲ್ಲೆ ಮಾತನಾಡಿ “ಮೈಸಾ ಎರಡು ವರ್ಷಗಳ ಕಠಿಣ ಪರಿಶ್ರಮದ ಚಿತ್ರವಾಗಿದೆ ಪ್ರತಿಯೊಂದು ವಿವರ, ಪಾತ್ರಗಳು ಮತ್ತು ಕಥೆಯನ್ನು ಸರಿಯಾಗಿ ನಿರೂಪಿಸಲು ಆದ್ಯತೆ ನೀಡಿದ್ದೇವೆ, ಈ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಉತ್ತಮ ಚಿತ್ರ ನೀಡುವುದು ನಮ್ಮ ಉದ್ದೇಶ ಎಂದಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin