Review: Junior - An emotional journey of a father-son that highlights the importance of relationships

Review : ಜೂನಿಯರ್- ಸಂಬಂಧಗಳ ಮಹತ್ವ ಸಾರುವ ತಂದೆ-ಮಗನ ಭಾವನಾತ್ಮಕ ಪಯಣ - CineNewsKannada.com

Review : ಜೂನಿಯರ್- ಸಂಬಂಧಗಳ ಮಹತ್ವ ಸಾರುವ ತಂದೆ-ಮಗನ ಭಾವನಾತ್ಮಕ ಪಯಣ

ಚಿತ್ರ: ಜೂನಿಯರ್
ನಿರ್ದೇಶನ:ರಾಧಾ ಕೃಷ್ಣ ರೆಡ್ಡಿ
ತಾರಾಗಣ: ಕಿರೀಟಿ, ಶ್ರೀಲೀಲಾ, ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಸುಧಾರಾಣಿ ಮತ್ತಿತರರು
ರೇಟಿಂಗ್ : *** 3.5/5

ಬಣ್ಣದ ಬದುಕಿನಲ್ಲಿ ತಮ್ಮದೂ ಛಾಪು ಮೂಡಿಸಬೇಕು ತಾವೂ ಇತರರಂತೆ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಂಬಲ ಅನೇಕರದ್ದು,ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಭರವಸೆ ಮೂಡಿಸುವ ನಟನ ಆಗಮನವಾಗಿದೆ, ಅದುವೇ ಕಿರೀಟಿ.

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ಚೊಚ್ಚಲ ಬಾರಿಗೆ ಅಭಿನಯಿಸಿರುವ “ಜೂನಿಯರ್” ಚಿತ್ರ ಈ ವಾರ ತೆರೆಗೆ ಬಂದಿದ್ದು ಅಪ್ಪ ಮಗನ ಭಾವನಾತ್ಮಕ ಪಯಣದ ಜೊತೆಗೆ ಮುದ್ದಾದ ಲವ್ ಸ್ಟೋರಿ ಸೇರಿದಂತೆ ಪ್ರೇಕ್ಷಕರಿಗೆ ಹಿಡಿಸಬಹುದಾದ ಎಲ್ಲಾ ಅಂಶಗಳನ್ನು ಹದಗೊಳಿಸಿ ಚಿತ್ರವನ್ನು ತೆರೆಗೆ ತರಲಾಗಿದೆ

ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಅವರು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದಿಟಿದ್ದಾರೆ. ಚಿತ್ರದಲ್ಲಿ ಹೆಚ್ಚಾಗಿ ತೆಲುಗ ಸೊಗಡು ಎದ್ದು ಕಾಣುತ್ತಿದೆ, ಜೊತೆಗೆ ಪ್ರೇಕ್ಷಕರಿಗೆ ಇಷ್ಟವಾಗುವ ಸಿನಿಮಾ ಜೂನಿಯರ್, ಈ ಮೂಲಕ ಕನ್ನಡದಲ್ಲಿ ಮತ್ತೊಬ್ಬ ಭರವಸೆ ನಟನಾಗಬಲ್ಲ ಎಲ್ಲ ಲಕ್ಷಣಗಳಿವೆ.

ಕೋದಂಡಪಾಣಿ (ರವಿಚಂದ್ರನ್) ಶ್ಯಾಮಲಾ (ಸುಧಾರಾಣಿ) ದಂಪತಿಗೆ ತಡವಾಗಿ ಮಗು ಜನನವಾಗುತ್ತದೆ, ಇದರಿಂದ ಪೋಷಕರು ಒಂದಷ್ಟು ಸಮಸ್ಯೆ ಹಾಗು ಟೀಕೆ ಟಿಪ್ಪಣಿ ಎದುರಿಸುತ್ತಾರೆ. ಹೀಗಾಗಿ ದಂಪತಿ ಗ್ರಾಮ ಬಿಡುವ ಸ್ಥಿತಿ ನಿರ್ಮಾಣವಾಗಲಿದೆ. ತಾಯಿ ಕಳೆದಕೊಂಡ ಅಭಿ ( ಕಿರೀಟಿ)ಗೆ ಅಪ್ಪ-ಅಮ್ಮನಾಗಿ ಅಪ್ಪನೇ ಮುದ್ದಿನಿಂದ ಬೆಳೆಸುತ್ತಾರೆ.

ಬೆಳೆದು ದೊಡ್ಡವನಾದ ಅಭಿ ಇಂಜಿನಿಯರ್ ಕಾಲೇಜು ಸೇರಿಕೊಳ್ತಾನೆ. ಅಲ್ಲಿ ಸ್ಪೂರ್ತಿ (ಶ್ರೀಲೀಲಾ) ಪರಿಚಯ, ಪ್ರೀತಿ, ಈ ನಡುವೆ ಕಂಪನಿ ಸೇರಿಕೊಳ್ಳುತ್ತಾನೆ. ಕಂಪನಿಯ ಮಾಲೀಕನ ಮಗಳ ಜೆನಿಲಿಯಾ ಡಿಸೋಜಾ ಪ್ರವೇಶದ ಬಳಿಕ ಚಿತ್ರದ ಕಥೆ ಮತ್ತೊಂದು ಮಗ್ಗುಲು ಪಡೆದುಕೊಳ್ಳುತ್ತದೆ. ಈ ನಡುವೆ ಅಭಿ ದೊಡ್ಡ ಹಗರಣ ಬಯಲು ಮಾಡುತ್ತಾನೆ. ಅದು ಏನು ಎನ್ನುವ ಪ್ರಶ್ನೆಗಳಿಗೆ ಜೂನಿಯರ್ ಉತ್ತರ ನೀಡುತ್ತಾನೆ, ಅದು ಏನು ಎನ್ನುವುದನ್ನು ಸಿನಿಮಾದಲ್ಲಿ ನೀಡಿದರೆ ಚೆನ್ನ.

ನಿರ್ದೇಶಕ ರಾಧಾಕೃಷ್ಣ ರೆಡ್ಡಿ ತೆಲುಗಿ ಸೊಗಡನ್ನು ಚಿತ್ರದಲ್ಲಿ ಹೆಚ್ಚಾಗಿ ಬಳಿಸಿಕೊಂಡಿದ್ದಾರೆ. ಜೊತೆಗೆ ಬಣ್ಣದ ಲೋಕಕ್ಕೆ ಭರವಸೆ ನಟನನ್ನು ಪರಿಚಯಿಸಿದ್ದಾರೆ.

ನಟ ಕಿರೀಟಿ, ಮೊದಲ ಚಿತ್ರದಲ್ಲಿಯೇ ಹಾಡು,ಮ ಫೈಟು,ನಟನೆಯಲ್ಲಿ ಗಮನ ಸೆಳೆದಿದ್ಧಾರೆ ಕನ್ನಡಕ್ಕೆ ಮತ್ತೊಬ್ಬ ಸುರದ್ರೂಪಿ ಭರವಸೆಯ ನಟ ಸಿಕ್ಕಂತಾಗಿದೆ

ನಟಿ ಶ್ರೀಲೀಲಾ, ರವಿಚಂದ್ರನ್, ಜೆನಿಲಿಯಾ ಡಿಸೋಜಾ ಸೇರಿದಂತೆ ಹಲವು ಮಂದಿ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.ಜೂನಿಯರ್ ಚಿತ್ರ ಕೊಟ್ಟ ಕಾಸಿಗೆ ಮೋಸ ಮಾಡುವುದಿಲ್ಲ

ದೇವಿಶ್ರೀಪ್ರಸಾದ್ ಸಂಗೀತ, ಸೆಂಥಿಲ್‍ಕುಮಾರ್ ಚಿತ್ರಕ್ಕೆ ಪೂರಕವಾಗಿದೆ. ಹೊಸತನ ಇಷ್ಟಪಡುವ ಮಂದಿಗೆ ಜ್ಯೂನಿಯರ್ ಕೂಡ ಇಷ್ಟ ಆಗುತ್ತಾನೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin