Review : ಕರಾವಳಿ ಸೊಗಡಿನಲ್ಲಿ ಮೂಡಿಬಂದ ಮನರಂಜನೆಯ ರಸದೌತಣದ ಚಿತ್ರ “ಸು ಫ್ರಮ್ ಸೋ “
ಚಿತ್ರ: ಸು ಫ್ರಮ್ ಸೋ
ನಿರ್ದೇಶನ: ಜೆಪಿ ತುಮಿನಾಡ
ತಾರಾಗಣ: ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮತ್ತಿತರರು
ರೇಟಿಂಗ್ : **** 4 / 5
ಕರಾವಳಿ ಸೊಗಡಿನಲ್ಲಿ ಹಾಸ್ಯದ ರಸದೌತಣ ಉಣಬಡಿಸುತ್ತಲೇ ಕೆಲ ಗಂಭೀರ ವಿಷಯಗಳನ್ನು ತೆರೆಯ ಮೇಲೆ ಕಟ್ಟಿಕೊಟ್ಟಿರುವ ಚಿತ್ರ “ಸು ಫ್ರಮ್ ಸೋ”.
ಪ್ರೇತದ ಕಾಟ, ಸಂಬಂಧಿಕರಿಂದಲೇ ಕೀಟಲೆ, ಟಿವಿಯಲ್ಲಿ ಬರುವ ಸ್ವಾಮೀಜಿಗಳ ಅಸಲಿಯತ್ತು ಸೇರಿದಂತೆ ವಯಸ್ಸಾದರೂ ಹುಡುಗ, ಹುಡುಗಿ ಸಿಗದ ಪರಿಸ್ಥಿತಿ, ಜೊತೆಗೊಂದಿಷ್ಟು ಪ್ರೀತಿ ಪ್ರೇಮದ ಲೇಪನ ಹಚ್ಚಿ ಮನರಂಜನಾತ್ಮಕವಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ.
ನಿರ್ದೇಶಕ ಜೆಪಿ ತುಮಿನಾಡ, ಕರಾವಳಿ ಹಿನ್ನೆಲೆ, ಅಲ್ಲಿನ ಭಾಷೆ, ಸೊಗಡು ಜೊತೆಗೆ ಅಲ್ಲಿನ ಕಲಾವಿದರನ್ನೇ ಬಳಸಿಕೊಂಡು “ಸು ಫ್ರಮ್ ಸೋ” ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಇಂತಹ ನೆಲಮೂಲದ ಕಥೆಗೆ ಬಂಡವಾಳ ಹಾಕುವ ಧೈರ್ಯ ಮಾಡುವುದು ತ್ರಾಸದಾಯಕ ಅದನ್ನು ಮಾಡಿ ಯಶಸ್ವಿಯಾಗಿ ಚಿತ್ರವನ್ನು ತೆರೆಗೆ ತಂದಿದ್ದಾರೆ ನಟ, ನಿರ್ಮಾಪಕ ರಾಜ್ ಬಿ ಶೆಟ್ಟಿ
ಆ ಊರಲ್ಲಿ ಸಾವಿನಿಂದ ಆರಂಭವಾಗುವ ಕಥೆ, ತಿಥಿಯೂಟ, ಮದುವೆ ಅದರ ಸಂಭ್ರಮ ಜೊತೆಗೆ ಕುಡುಕದ ಲೋಕ,ಈ ನಡುವೆ ಊರಿನಲ್ಲಿ ತಮ್ಮದೇ ಗತ್ತು ಉಳಿಸಿಕೊಂಡ ರವಿ ಅಣ್ಣ ಆತನಿಗೆ ಎಲ್ಲಿರೂ ಗೌರವಿಸುತ್ತಾರೆ. ಅದೇ ಊರಿನ ಮತ್ತೊಬ್ಬ ಯುವಕ ರವಿ ಅಣ್ಣನಿಗೆ ಹೇಗಾದರೂ ಮಾಡಿ ಹೊಡಿಬೇಕು ಎನ್ನುವ ಆಸೆ, ಈ ನಡುವೆ ಪ್ರೀತಿಸಿದ ಹುಡುಗಿ ನೋಡಲು ಹೋಗಿ ಸಿಕ್ಕಿ ಹಾಕಿಕೊಂಡು ಬಿಡ್ತಾನೆ. ಅಲ್ಲಿಂದ ಕಥೆ ಮತ್ತೊಂದು ಮಗ್ಗಲು ತೆರೆದುಕೊಳ್ಳುತ್ತದೆ.
ಅಶೋಕ ತನ್ನ ತಪ್ಪು ಯಾರಿಗೂ ಗೊತ್ತಾಗಬಾರದು ಎಂದು ದೆವ್ವ ಬಂದವನಂತೆ ಆಡ್ತಾನೆ, ಇದೂ ಇಡೀ ಊರಿಗೆ ಹಬ್ಬಿ ಅದರ ಸುತ್ತಲೇ ಕಥೆ ಸಾಗಿದೆ, ಈ ನಡುವೆ ರವಿಅಣ್ಣ, ಬಾನು ಎನ್ನುವ ಹುಡುಗಿ ನೋಡಿಕೊಂಡು ಬಂದು 15 ವರ್ಷ ಆದರೂ ಮದುವೆಯಾಗದವ . ತಂದೆ-ತಾಯಿ ಇಲ್ಲದೆ ಆಕೆಯೂ ಕೂಡ. ಚಿಕ್ಕಪ್ಪನ ವಕ್ರದೃಷ್ಠಿ ಬೇರೆ. ದೆವ್ವ ಬಿಡಿಸಲು ಬಂದ ಟಿವಿಯಲ್ಲಿ ಬರುವ ಶಂಕರಾನಂಧ ಗುರೂಜಿ (ರಾಜ್ ಬಿ ಶೆಟ್ಟಿ) ನಿಜವಾಗಿಯೂ ಸ್ವಾಮೀಜಿನಾ, ಆತ ದೆವ್ವ ಬಿಡಿತ್ತಾನಾ,, ಸು ಫ್ರಮ್ ಸೋ.. ಅಂದರೆ ಸೋಮೇಶ್ವರದಿಂದ ಬಂದ ಸುಲೋಚನ ಯಾರು ಎನ್ನುವ ಕುತೂಹಲದ ಸಂಗತಿ ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿಸಿದೆ.
ಒಂದಷ್ಟು ಕುತೂಹಲಕಾರಿ ಮತ್ತು ಗಂಭೀರ ವಿಷಯಗಳನ್ನು ಚಿತ್ರದ ಮೂಲಕ ಕಟ್ಟಿಕೊಟ್ಟಿದ್ದು ಅದು ಏನು, ಸು ಫ್ರಮ್ ಸೋ..ಹಿನ್ನೆಲೆ ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಿದರೆ ಅದರ ಮಜವೇ ಬೇರೆ.
ನಿರ್ದೇಶಕ ಜೆಪಿ ತುಮಿನಾಡ, ಮೊದಲ ಪ್ರಯತ್ನದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿದ್ಧಾರೆ, ಜೊತೆಗೆ ನಾಯಕ ರಾಜ್ ಬಿ ಶೆಟ್ಟಿ ತಾವೊಬ್ಬ ದೇಸೀ ಕಲಾವಿದ ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವ ಜೊತೆಗೆ ಪ್ರೇಕ್ಷಕರನ್ನು ಸೆಳೆಯಬಲ್ಲೆ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ
ಉಳಿದಂತೆ ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡ, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮತ್ತಿತರರು ಚಿತ್ರದಲ್ಲಿ ಸಹಜಾಭಿನಯದ ಮೂಲಕ ಗಮನ ಸೆಳೆದಿದ್ಧಾರೆ, ಯಾವೊಬ್ಬ ಕಲಾವಿದ ನಟಿಸಿದ್ದಾರೆ ಎನ್ನುವುದೇ ಇಲ್ಲ ಅಷ್ಟರ ಮಟ್ಟಿಗೆ ಚಿತ್ರ ಮೂಡಿಬಂದಿದೆ, ಇದರ ಶ್ರೇಯ ನಿರ್ದೇಶಕರಿಗೆ ಸಲ್ಲಬೇಕು.
ಕರಾವಳಿ ಭಾಗದ ಜನರಿಗೆ ಚಿತ್ರ ಹಿಡಿಸಲಿದೆ, ಹಾಗೆ ಉಳಿದ ಭಾಗದ ಮಂದಿಗೆ ಹೊಸತರ ಚಿತ್ರ ನೋಡಿದ ಅನುಭವ ಆಗಲಿದೆ,
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

