Actor Santosh Balaraj, son of Anekal Balaraj, passes away
ಆನೇಕಲ್ ಬಾಲರಾಜ್ ಪುತ್ರ ನಟ ಸಂತೋಷ್ ಬಾಲರಾಜ್ ನಿಧನ
ನಿರ್ಮಾಪಕ ಆನೇಕಲ್ ಬಾಲರಾಜ್ ಪುತ್ರ ನಟ ಸಂತೋಷ್ ಬಾಲರಾಜ್ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ

ಅನಾರೋಗ್ಯದಿಂದ ಬಳಲುತ್ತಿದ್ದ ಸಂತೋಷ್ ಕಳೆದ ತಿಂಗಳು ಜಾಂಡೀಸ್ ಗೆ ಚಿಕಿತ್ಸೆ ಪಡೆದಿದ್ದರು. ಆದರೆ ಮೊನ್ನೆಯಷ್ಟೇ ಅವರ ಆರೋಗ್ಯದಲ್ಲಿ ತೀವೃ ಏರುಪೇರಾಗಿದ್ದರಿಂದ ಕುಮಾರಸ್ವಾಮಿ ಲೇ ಔಟ್ ನ ಸಾಗರ್ ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಬಾಲರಾಜ್ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಗಣಪ, ಕರಿಯ-2, ಕೆಂಪ, ಬರ್ಕ್ಲೀ ಚಿತ್ರಗಳಲ್ಲಿ ನಟಿಸಿದ್ದ ಸಂತೋಷ್ ಅಭಿನಯದ “ಸತ್ಯ” ಚಿತ್ರ ಇನ್ನೂ ರಿಲೀಸಾಗಬೇಕಿತ್ತು. ಎಲ್ಲರ ಜತೆ ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಸಂತೋಷ್ ಒಂದೂವರೆ ವರ್ಷದ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದರು.
38 ವರ್ಷದ ಸಂತೋಷ್ ಬಾಲರಾಜ್ ಸದ್ಯದಲ್ಲೇ ಮದುವೆಯಾಗುವ ಸಿದ್ದತೆಯನ್ನೂ ನಡೆಸಿದ್ದರು. ಒಬ್ಬ ತಂಗಿ ಹಾಗೂ ತಾಯಿಯನ್ನು ಬಿಟ್ಟು ಸಂತೋಷ್ ಈಗ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

