ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ” ಸೋಲ್ ಮೇಟ್ಸ್ ” ಚಿತ್ರ ಮುಂದಿನ ತಿಂಗಳು ತೆರೆಗೆ
ಪರಿಸರ ರಕ್ಷಣೆಯ ಬಗ್ಗೆ ಕಾಳಜಿ ಮೂಡಿಸುವ ಹಲವು ಚಿತ್ರಗಳು ತೆರೆಗೆ ಬಂದಿವೆ. ಇದೀಗ ವಿಭಿನ್ನ ಕಥಾ ಹಂದರದೊಂದಿಗೆ ಪರಿಸರ ಕಾಳಜಿ ಮೂಡಿಸುವ ಚಿತ್ರ ” ಸೋಲ್ ಮೇಟ್ಸ್ ” ತೆರೆಗೆ ಬರಲು ಸಜ್ಜಾಗಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಮೊದಲ ವಾರ ಇಲ್ಲವೆ ಎರಡನೇ ವಾರ ಚಿತ್ರ ತೆರೆಗೆ ಬರುವ ಸಾದ್ಯತೆ ಇದೆ

ನಾದ ಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆಯಲ್ಲಿ ಚಿತ್ರ ಮೂಡಿ ಬಂದಿದ್ದು ಹಾಡುಗಳು ಗಮನ ಸೆಳೆದಿವೆ. ಡಾ. ವಿಷ್ಣುವರ್ಧನ್ ಅಪ್ಪಟ ಅಭಿಮಾನಿ ಪಿ.ವಿ ಶಂಕರ್ ನಿರ್ದೇಶನ ಜೊತೆ ನಿರ್ಮಾಣದ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ.
ಹಂಸಲೇಖ ಸಾಹಿತ್ಯವಿರುವ ಕಿಲಕಿಲ ಹಾಡಿಗೆ ಅನಿರುದ್ಧ್ ಶಾಸ್ತ್ರಿ, ಅಂಕಿತಾ ಕುಂಡು ಧನಿಯಾಗಿದ್ದಾರೆ. ಸೋಲ್ ಮೇಟ್ಸ್ ಪರಿಸರ ಪ್ರೇಮಿ ಅನ್ನೋ ಟ್ಯಾಗ್ ಲೈನ್ ಇರೋ ಚಿತ್ರದಲ್ಲಿ ಇಬ್ಬರು ನಾಯಕ ನಟರು ಇಬ್ಬರು ನಾಯಕಿಯರು ಅಭಿನಯಿಸಿದ್ದಾರೆ.
ರಂಗ್ ಬಿ ರಂಗ್ ಖ್ಯಾತಿಯ ಶ್ರೀಜಿತ್ ಸೂರ್ಯ, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರದ ಇನಾಯತ್ ಖ್ಯಾತಿಯ ಪ್ರಸನ್ನ ಶೆಟ್ಟಿ, ಯಶ್ವಿಕಾ ನಿಷ್ಕಲ, ರಜನಿ, ಅಲ್ಮಾಸ್, ಯಶ್ ಶೆಟ್ಟಿ, ಶರತ್ ಲೋಹಿತಾಶ್ವ, ಅರವಿಂದ್ ರಾವ್, ಅರುಣಾ ಬಾಲರಾಜ್, ಅರಸು ಮಹಾರಾಜ್, ಪ್ರಶಾಂತ್ ನಟನ, ಗೌತಮ್, ತಾರಕ್,ನವೀನ್ ಡಿ ಪಡೀಲ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಶಂಕರ್ ಪಿ ವಿ ನಿರ್ದೇಶನದ ಜೊತೆಗೆ ಜಿ. ಆರ್. ಅರ್ಚನಾ ಅವರೊಟ್ಟಿದೆ ಚಿತ್ರ ನಿರ್ಮಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು, ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಮತ್ತಿತರು ಆಗಮಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನರಸಿಂಹುಲು,ಸಿನಿಮಾ ಮಾಡಲು ಹೋಗಿ ಯಾರು ಹಣ ಕಳೆದುಕೊಳ್ಳುವ ಹಾಗೆ ಆಗಬಾರದು ಸಿನಿಮಾ ಮಾಡುವ ಪ್ರತಿಯೊಬ್ಬರನ್ನು ಪ್ರೋತ್ಸಾಹಿಸುತ್ತೇನೆ. ಕನ್ನಡ ಚಿತ್ರರಂಗ ಬೆಳೆಯಬೇಕು ಕನ್ನಡ ಉಳಿಯಬೇಕು.ಚಿತ್ರತಂಡಕ್ಕೆ ಒಳಿತಾಗಲಿ ಎಂದು ಹಾರೈಸಿದರು.
ನಿರ್ದೇಶಕ ಹಾಗು ನಿರ್ಮಾಪಕ ಶಂಕರ್ ಪಿ.ವಿ ಮಾತನಾಡಿ ಸಣ್ಣ ವಯಸ್ಸಿನಿಂದಲೇ ಸಿನಿಮಾ ಹುಚ್ಚು ,ಮೊದಲಿಗೆ ನೋಡಿದ ಸಿನಿಮಾ ಅಂದ್ರೆ ಪುಟ್ನಂಜ ಅಲ್ಲಿಂದ ಹಂಸಲೇಖಾ ರವರ ನಂಟು ಬೆಳೀತು ಅಂತಾನೆ ನನ್ನ ನಂಬಿಕೆ ಹಾಗಾಗಿ ನನ್ನ ಮೊದಲ ಸಿನಿಮಾಕ್ಕೆ ಅವರನ್ನೇ ತೆಗೆದುಕೊಂಡಿದ್ದೇನೆ ಇದರಲ್ಲಿ ಅವರು ಐದು ಹಾಡುಗಳನ್ನು ಕೊಟ್ಟಿದ್ದಾರೆ ಅವರ ಆಶೀರ್ವಾದ ಸದಾ ನನಗೆ ಬೇಕು.ಈ ಸಿನಿಮಾದಲ್ಲಿ ಒಂದು ಹುಡುಗ ಹುಡುಗಿ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತಾಗಿ ಕಥೆ ಇದೆ ಅದು ಈಗಿನ ಸಮಾಜಕ್ಕೆ ತುಂಬ ಅವಶ್ಯಕವಾಗಿದೆ. ಅದಕ್ಕಾಗಿ ನೇಚರ್ ಲವ್ ಅಂತೆಯೇ ಒಂದು ಫ್ಯಾಮಿಲಿ ಎಂಟರ್ಟೈನರ್ ಸಿನಿಮಾವನ್ನು ಸೆಪ್ಟೆಂಬರ್ನಲ್ಲಿ ನಿಮ್ಮ ಮುಂದಿಡಲಿದ್ದೇವೆ ಎಂದರು.

ನಾಯಕ ಶ್ರೀಜಿತ್ ಸೂರ್ಯ ಮಾತನಾಡಿ ಸಿನಿಮಾದಲ್ಲಿ ಸತ್ಯ ಎಂಬ ಪಾತ್ರ ಮಾಡಿದ್ದೇನೆ ಹೆಸರಿಗೆ ತಕ್ಕಂತೆ ಆತ ಸತ್ಯವಂತನೇ ಅಲ್ಲದೆ ಮಹಾ ಪರಿಸರ ಪ್ರೇಮಿ. ಅಲ್ಲದೆ ಸೋಲ್ ಮೇಟ್ಸ್ ಅಂದ್ರೆ ಪರಿಸರ ಮತ್ತು ಅವನ ಹುಡುಗಿ ಇಬ್ರು ಅವನ ಸೋಲ್ ಮೇಟ್ಸ್ ಗಳಾಗಿ ಇರುತ್ತೆ ಹಾಗಾಗಿ ಈ ಟೈಟಲ್ ಸಿನಿಮಾಕ್ಕೆ ಸರಿಯಾಗಿ ಹೊಂದುತ್ತದೆ ಎಂದು ಹೇಳಿದರುಹೇಳಿದರು
ಮತ್ತೊಬ್ಬ ನಾಯಕ ಪ್ರಸನ್ನ ಶೆಟ್ಟಿ ಮಾತನಾಡಿ ಮೊದಲ ಸಿನಿಮಾ ಆದ್ದರಿಂದ ನಿರ್ದೇಶಕರಲ್ಲಿ ಪ್ರಶ್ನೆ ಕೇಳಿದ್ದೇನೆ ಅದಕ್ಕೆ ಅವರು ನನ್ನನ್ನು ತುಂಬಾ ನಂಬುತ್ತೇನೆ ಎಂಬ ಉತ್ತರವನ್ನು ಕೊಟ್ಟಿದ್ರು ಅಲ್ಲದೆ ಇವರು ತುಂಬಾ ಒಳ್ಳೆ ವ್ಯಕ್ತಿ ಮತ್ತು ಪ್ರತಿಯೊಂದು ಕೆಲಸವನ್ನು ಕೂಡ ತುಂಬ ಗಮನಹರಿಸಿ ಮಾಡುತ್ತಾರೆ ಹಾಗಾಗಿ ಎಲ್ಲರೂ ಅವರಿಗೆ ಸಹಕಾರ ನೀಡಲೇಬೇಕು.ನಾನು ಒಬ್ಬ ರಂಗಭೂಮಿ ಕಲಾವಿದ ಇದು ನನ್ನ ಈ ವರ್ಷದ ಎರಡನೇ ಸಿನಿಮಾ.ಇದರಲ್ಲಿ ನಾನು ಗೋಪಿ ಎಂಬ ಮುಗ್ಧ ಹಳ್ಳಿ ಹುಡುಗನ ಪಾತ್ರವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು
ನಾಯಕಿ ನಿಷ್ಕಲ ಶೆಟ್ಟಿ ಮಾತನಾಡಿ ತುಂಬ ಮೃದು ಮನಸಿನ ಹುಡುಗಿ ಭೂಮಿಯ ಪಾತ್ರವನ್ನು ಸಿನಿಮಾದಲ್ಲಿ ಮಾಡಿದ್ದೇನೆ.ಈ ಸಿನಿಮಾದ ಪ್ರತಿಯೊಂದು ಸಾಂಗ್ ಶೂಟಿಂಗ್ ಗಳೂ ತುಂಬಾ ನೆನಪಿದೆ.ಹಂಸಲೇಖಾ ರವರ ಜೊತೆಗೆ ಕೆಲಸ ಮಾಡಲು ಸಿಕ್ಕಿದ್ದು ತುಂಬ ಖುಷಿ ಇದೆ ಎಂದು ಹೇಳಿದರು

