Temple built by producer S.V. Babu in Chandapur

ಚಂದಾಪುರದಲ್ಲಿ ನಿರ್ಮಾಪಕ ಎಸ್.ವಿ. ಬಾಬು ಅವರಿಂದ ದೇಗುಲ ನಿರ್ಮಾಣ - CineNewsKannada.com

ಚಂದಾಪುರದಲ್ಲಿ ನಿರ್ಮಾಪಕ ಎಸ್.ವಿ. ಬಾಬು ಅವರಿಂದ ದೇಗುಲ ನಿರ್ಮಾಣ

ಕನ್ನಡದಲ್ಲಿ ಜೋಶ್',ಸವಿಸವಿ ನೆನಪು’, `ಹನಿಮೂನ್ ಎಕ್ಸ್ ಪ್ರೆಸ್ ಮುಂತಾದ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಮತ್ತು ಖ್ಯಾತ ಉದ್ಯಮಿ ಎಸ್.ವಿ. ಬಾಬು, ಚಂದಾಪುರದಲ್ಲಿರುವ ಜಿ.ಪಿ.ಆರ್. ಗ್ರಾಂಡೆ ಲೇಔಟ್‍ನಲ್ಲಿ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಲಕ್ಷ್ಮೀ, ಪದ್ಮಾವತಿ ದೇವಿ ದೇವಸ್ಥಾನವನ್ನು ಕಟ್ಟಿಸಿದ್ದು, ಈ ದೇವಸ್ಥಾನದ ಪ್ರಾಣ ಪ್ರತಿಷ್ಠಪನಾ ಮಹೋತ್ಸವ ಇತ್ತೀಚೆಗೆ ನಡೆದಿದೆ.

ಸುಮಾರು ಎಂಟು ಸಾವಿರ ಚದುರಡಿ ವಿಸ್ತೀರ್ಣದಲ್ಲಿ ಭವ್ಯ ದೇವಸ್ಥಾನದಲ್ಲಿ ಕಟ್ಟಲಾಗಿದೆ. ಆಯೋಧ್ಯೆಯ ಶ್ರೀ ರಾಮ ಮಂದಿರ ದೇವಸ್ಥಾನದ ರಾಮ್ ಲಲ್ಲಾ ಮೂರ್ತಿಯನ್ನು ಕೆತ್ತಿರುವ ಮೈಸೂರಿನ ಅರುಣ್ ಯೋಗಿರಾಜ್ ತಂಡದವರು, ಈ ದೇವಸ್ಥಾನದ ಮೂರ್ತಿಗಳನ್ನು ಕೆತ್ತಿದ್ದಾರೆ.

ಮೂರು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆದ ದೇವಸ್ಥಾನ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದು, ಈ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಕಾರ್ಯದರ್ಶಿ ಡಿ.ಕೆ. ರಾಮಕೃಷ್ಣ, ನಟಿಯರಾದ ಪ್ರಿಯಾ ಹಾಸನ್, ಕಾರುಣ್ಯ ರಾಮ್ ಮುಂತಾದವರು ಹಾಜರಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin