“ನಾನು ಮತ್ತು ಗುಂಡ 2” ಚಿತ್ರದ ‘ಓಂ ಶಿವಾಯ, ನಮೋ ಶಿವಾಯ’ ಹಾಡು ಬಿಡುಗಡೆ
ಗುಂಡ (ನಾಯಿ) ಮತ್ತು ಅದರ ಮಾಲೀಕ ಶಂಕರನ ನಡುವಿನ ಅವಿನಾಭಾವ ಸಂಬಂಧದ ಕಥೆಯಿದ್ದ ಚಿತ್ರ ‘ನಾನು ಮತ್ತು ಗುಂಡ’ ಈಗಾಗಲೇ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ನಿಂತಿದೆ. ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ನಾಯಕನಾಗಿ ನಟಿಸಿದ ಚಿತ್ರಕ್ಕೆ ರಘುಹಾಸನ್ ಆಕ್ಷನ್ ಕಟ್ ಹೇಳಿದ್ದರು. ಈಗ ಅದರ ಮುಂದುವರೆದ ಭಾಗವಾದ ‘ನಾನು ಮತ್ತು ಗುಂಡ-2’ ಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದು ಸೆಪ್ಟೆಂಬರ್ 5ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಡಾ.ವಿ.ನಾಗೇಂದ್ರಪ್ರಸಾದ್ ಶಿವನ ಮೇಲೆ ರಚಿಸಿರುವ ಹಾಗೂ ವಿಜಯಪ್ರಕಾಶ್ ದನಿಯಾಗಿರುವ ‘ಓಂ ಶಿವಾಯ, ನಮೋ ಶಿವಾಯ’ ಹಾಡಿನ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ರಘುಹಾಸನ್ ನಿರ್ದೇಶನದ ಜತೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ಚಿತ್ರದಲ್ಲಿ ರಾಕೇಶ್ ಆಡಿಗ, ರಚನಾ ಇಂದರ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಬಹಳ ದಿನಗಳ ನಂತರ ಆರ್‍ಪಿ ಪಟ್ನಾಯಕ್ ಅವರ ಸಂಗೀತದಲ್ಲಿ ಹಾಡಿರುವುದು ಖುಷಿಯಾಗಿದೆ, ಚಿತ್ರ ಪ್ರೇಕ್ಷಕರ ಮನ ಗೆಲ್ಲಲಿ ಎಂದು ಗಾಯಕ ವಿಜಯ ಪ್ರಕಾಶ್ ವಿಡಿಯೋ ಮೂಲಕ ಶುಭ ಹಾರೈಸಿದರು.
ಸಾಹಿತಿ ನಾಗೇಂದ್ರ ಪ್ರಸಾದ್ ಮಾತನಾಡಿ, ನಿರ್ದೇಶಕ ರಘುಹಾಸನ್ ಈ ಸಾಂಗ್ ಬಗ್ಗೆ ಹೇಳಿದಾಗ ತುಂಬಾ ವಿಷಯಗಳು ಇದರಲ್ಲಿವೆ ಎನಿಸಿತು, ಮನಸಿಗೆ ಇಳಿಯುವಂಥ ಕಂಟೆಂಟ್ ಈ ಹಾಡಲ್ಲಿದೆ, ಇದು ಪಕ್ಕಾ ಚಿತ್ರಗೀತೆ, ಸಿನಿಮಾದಲ್ಲಿ ನೋಡಿದಾಗ ತುಂಬಾ ಇಂಪ್ಯಾಕ್ಟ್ ಆಗುತ್ತೆ ಟ್ರೈಲರ್‍ನಲ್ಲಿ ಎಲ್ಲಾ ಎಮೋಷನ್ ಹೇಳುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ನಿರ್ದೇಶಕ ರಘುಹಾಸನ್ ಮಾತನಾಡಿ ಚಿತ್ರ 2022ರಲ್ಲಿ ಪ್ರಾರಂಭವಾಗಿತ್ತು, ಇದೀಗ ಬಿಡುಗಡೆಯಾಗುತ್ತಿದೆ, ಸಂಗೀತ ನಿರ್ದೇಶನ ಪಟ್ನಾಯಕ್ ಹಾಡಿನ ಟ್ಯೂನ್ ಕೊಟ್ಟಾಗ ತಕ್ಷಣ ನೆನಪಾಗಿದ್ದೇ ನಾಗೇಂದ್ರ ಪ್ರಸಾದ್, ಲಿರಿಕ್ ಇಷ್ಟಪಟ್ಟು ವಿಜಯ ಪ್ರಕಾಶ್ ಸೊಗಸಾಗಿ ಹಾಡಿಕೊಟ್ಟರು, ಹೊಡಿಬಡಿ ಕಥೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಏನಾದರೂ ಮಾಡಬೇಕೆಂದಾಗ ಹುಟ್ಟಿದ್ದೇ ಗುಂಡನ ಕಥೆ, ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ ಸೂಚಿಸದೆ ‘ಯು/ಎ’ ಕೊಟ್ಟಿದೆ, ಶಂಕರ ನಿಧನನಾದ ಮೇಲೆ ಆತನ ಮಗನಿಂದ ಕಥೆ ಕಂಟಿನ್ಯೂ ಆಗುತ್ತದೆ. ರಾಕೇಶ್ ಅಡಿಗ ಶಂಕರನ ಮಗನಾಗಿ ನಟಿಸಿದ್ದು, ಆತನಿಗೆ ನಾಯಿಯೇ ಪ್ರಪಂಚ. ಸೋಷಿಯಲ್ ಕನ್‍ಸರ್ನ್ ಜೊತೆಗೆ ಡಿವೈನ್ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ ಎಂದರು

ಚಿತ್ರವನ್ನು ಊಟಿ, ಶಿವಮೊಗ್ಗ, ತೀರ್ಥಹಳ್ಳಿ, ಬಾಳೆಹೊನ್ನೂರು, ಬೆಂಗಳುರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದಲ್ಲಿ 6 ಹಾಡುಗಳನ್ನು ಆರ್.ಪಿ. ಪಟ್ನಾಯಕ್ ಅವರು ಕಂಪೆÇೀಜ್ ಮಾಡಿಕೊಟ್ಟಿದ್ದಾರೆ. ತನ್ವಿಕ್ ಅದ್ಭುತವಾಗಿ ಚಿತ್ರವನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಿದರು.
ಉಳಿದಂತೆ ನಾಯಕ ರಾಕೇಶ್ ಅಡಿಗ, ನಾಯಕಿ ರಚನಾ ಇಂದರ್, ಛಾಯಾಗ್ರಾಹಕ ತನ್ವಿಕ್, ಬಾಲನಟ ಜೀವನ್ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು.
ಚಿತ್ರದಲ್ಲಿ ಡಾಗ್ ಸಿಂಬನ ಮಗ ನಟಿಸಿದ್ದಾನೆ. ಸಿಂಬ ನಾಲ್ಕು ದಿನವಷ್ಟೇ ಶೂಟಿಂಗ್‍ನಲ್ಲಿ ಭಾವಹಿಸಿ ಮೃತನಾಗಿದ್ದ. ನಂತರ ಅವನ ಮಗ ಸಿಂಬ ನಟಿಸಿದ್ದಾನೆ. ಶಂಕರನ ಮಗ ಹಾಗೂ ನಾಯಿಯ ಪಾತ್ರದ ಮೂಲಕ ಎರಡನೇ ಭಾಗದ ಚಿತ್ರಕಥೆ ಮುಂದುವರೆಯಲಿದೆ. ಅಲ್ಲದೆ ಸಿಂಬು ಜೊತೆ ಬಂಟಿ ಎಂಬ ನಾಯಿಯೂ ಈ ಚಿತ್ರದಲ್ಲಿ ಅಭಿನಯಿಸಿದೆ.ಚಿತ್ರದ ಸಂಭಾಷಣೆ ಹಾಗೂ ಸಾಹಿತ್ಯವನ್ನು ರೋಹಿತ್ ರಮನ್ ರಚಿಸಿದ್ದಾರೆ.


