Anand Audio owns the audio rights of “Rakkasapuradol” starring actor Raj B Shetty.

ನಟ ರಾಜ್ ಬಿ ಶೆಟ್ಟಿ ನಟನೆಯ “ರಕ್ಕಸಪುರದೋಳ್” ಆಡಿಯೋ ಹಕ್ಕು ಆನಂದ್ ಆಡಿಯೋಗೆ - CineNewsKannada.com

ನಟ ರಾಜ್ ಬಿ ಶೆಟ್ಟಿ ನಟನೆಯ “ರಕ್ಕಸಪುರದೋಳ್” ಆಡಿಯೋ ಹಕ್ಕು ಆನಂದ್ ಆಡಿಯೋಗೆ

“ಸು ಫ್ರಮ್ ಸೋ” ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಚೈತನ್ಯ ಮತ್ತು ಭರವಸೆ ನೀಡಿದ ಚಿತ್ರ. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ರಾಜ್ ಬಿ ಶೆಟ್ಟಿ ನಟನೆಯ ಮತ್ತೊಂದು ಹೊಸ ಚಿತ್ರ “ರಕ್ಕಸಪುರದೋಳ್” ಚಿತ್ರ ಮೋಡಿಗೆ ಸಜ್ಜಾಗಿದೆ

ರಾಜ್ ಬಿ ಶೆಟ್ಟಿ ಅಭಿನಯದಲ್ಲಿ ಮೂಡಿಬರುತ್ತಿರುವ “ರಕ್ಕಸಪುರದೋಳ್” ಚಿತ್ರಕ್ಕೆ ರವಿ ಸಾರಂಗ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಕನ್ನಡ ನಾಡಿನ ಪ್ರತಿಷ್ಠಿತ ಆಡಿಯೋ ಕಂಪನಿ ಆನಂದ್ ಆಡಿಯೋ ತನ್ನ ತೆಕ್ಕೆಗೆ ತೆಗೆದುಕೊಂಡಿದೆ

“ಸು ಫ್ರಮ್ ಸೋ” ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟ ರಾಜ್ ಬಿ ಶೆಟ್ಟಿ ಮತ್ತೊಂದು ಯಶಸ್ವಿ ಚಿತ್ರವನ್ನು ಪ್ರೇಕ್ಷಕರ ಮುಂದೆ ಇಡಲು ಎಲ್ಲಾ ಸಿದ್ದತೆ ಮತ್ತು ಸಜ್ಜು ಮಾಡಿಕೊಂಡಿದ್ದಾರೆ. ಗಣೇಶ್ ಹಬ್ಬದ ಸಂದರ್ಭದಲ್ಲಿ “ರಕ್ಕಸಪುರದೋಳ್” ಚಿತ್ರದ ಆಡಿಯೋ ಹಕ್ಕು ಮಾರಾಟವಾಗಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ.

ಕನ್ನಡ ಮತ್ತು ಮಲೆಯಾಲಂನಲ್ಲಿ ಚಿತ್ರ ಮೂಡಿಬರುತ್ತಿದ್ದು ಡಾ, ಕೆ ರವಿವರ್ಮ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ವಿಲಿಯಂ ಡೆವಿಡ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin