Filming of 'Love You Muddu', based on a true story, completes

ನೈಜಘಟನೆಯ ಆಧಾರಿತ “ಲವ್ ಯು ಮುದ್ದು’ ಚಿತ್ರೀಕರಣ ಪೂರ್ಣ - CineNewsKannada.com

ನೈಜಘಟನೆಯ ಆಧಾರಿತ “ಲವ್ ಯು ಮುದ್ದು’ ಚಿತ್ರೀಕರಣ ಪೂರ್ಣ

ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಖ್ಯಾತಿಯ ಕುಮಾರ್ ಸಾರಥ್ಯದ ಹೊಸ ಸಿನಿಮಾ “ಲವ್ ಯು ಮುದ್ದು”ಈಗಾಗಲೇ ಟೈಟಲ್ ಮೂಲಕವೇ ನಿರೀಕ್ಷೆ ಹೆಚ್ಚಿಸಿದೆ.ಇದೀಗ ಈ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ.

ಲವ್ ಯು ಮುದ್ದು ಚಿತ್ರದ ಮೆಲೋಡಿ ಗೀತೆ ರಿಲೀಸ್ ಆಗಿದೆ. ಅನಿರುದ್ಧ್ ಶಾಸ್ತ್ತೀ ಸಾಹಿತ್ಯ ಬರೆದು ಸಂಗೀತ ನೀಡಿರುವ ಹಾಡಿಗೆ ಸೋನು ನಿಗಮ್, ಐಶ್ವರ್ಯ ರಂಗರಾಜನ್ ಹಾಗೂ ಸುರಭಿ ಭಾರದ್ವಾಜ್ ಕಂಠ ಕುಣಿಸಿದ್ದಾರೆ. ಲವ್ ಯು ಮುದ್ದು ಅಂತಾ ನಾಯಕ ಸಿದ್ದು ಕುಣಿದಿದ್ದು, ನಾಯಕಿ ರೇಷ್ಮಾ ಹಾಡಿನಲ್ಲಿ ಮಿಂಚಿದ್ದಾರೆ.

ಲವ್ ಯು ಮುದ್ದು ಮಹಾರಾಷ್ಟ್ರದಲ್ಲಿ ನಡೆದ ನೈಜ ಪ್ರೇಮ ಕಥಾ ಹಂದರ ಒಳಗೊಂಡಿದೆ. ಕಿರುತೆರೆ ಮತ್ತು ಅಜ್ಞಾತವಾಸಿ ಸಿನಿಮಾ ಖ್ಯಾತಿಯ ಸಿದ್ದು ನಾಯಕನಾಗಿ, ಯುವನಟಿ ರೇಷ್ಮಾ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ರಾಜೇಶ್ ನಟರಂಗ, ತಬಲಾ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ ಮತ್ತು ಉಷಾ ಚಿತ್ರದಲ್ಲಿದ್ದಾರೆ.

ಕಿಶನ್ ಎಂಟರ್‍ಟೈನ್ಮೆಂಟ್ ಬ್ಯಾನರ್‍ನಡಿ ಕಿಶನ್ ಟಿಎನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಲಕ್ಷ್ಮಿಕಾಂತ್ ಖಿS ಜೊತೆಯಾಗಿ ನಿಂತಿದ್ದಾರೆ. ಕೃಷ್ಣ ದೀಪಕ್ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರೀ ಸಂಗೀತ ನಿರ್ದೇಶನ ಹಾಗೂ ಸಿಎಸ್ ದೀಪು ಸಂಕಲನ ಚಿತ್ರಕ್ಕಿದೆ.

ಲವ್ ಯು ಮುದ್ದು ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ನಡೆಯುತ್ತಿವೆ. ಕಾರ್ಕಳ, ಕುಮಟಾ, ಬೆಂಗಳೂರು ಸುತ್ತಮುತ್ತ 45 ದಿನಗಳ ಶೂಟಿಂಗ್ ನಡೆಸಲಾಗಿದೆ. ಕಮರ್ಷಿಯಲ್ ಜೊತೆಗೆ ಕಾಮಿಡಿ ಸಿನಿಮಾ ಮಾಡ್ತಿದ್ದ ಕುಮಾರ್ ಮೊದಲ ಬಾರಿಗೆ ಪ್ರೇಕ್ಷಕರ ಎದುರು ಪ್ರೇಮಕಥೆ ಹೇಳು ಹೊರಟಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin