"Varnataranga" movie expected to release in November

“ವರ್ಣತರಂಗ” ಚಿತ್ರ ನವಂಬರ್ ತಿಂಗಳಲ್ಲಿ ಬಿಡುಗಡೆ ನಿರೀಕ್ಷೆ - CineNewsKannada.com

“ವರ್ಣತರಂಗ” ಚಿತ್ರ ನವಂಬರ್ ತಿಂಗಳಲ್ಲಿ ಬಿಡುಗಡೆ ನಿರೀಕ್ಷೆ

“ವರ್ಣ ತರಂಗ” ಚಿತ್ರ ಅಡೆ ತಡೆಗಳನ್ನು ದಾಟಿ ಬಿಡುಗಡೆಗೆ ಸಿದ್ದವಾಗಿದೆ, ಎಲ್ಲಾ ಅಂದುಕೊಂಡಂತೆ ಆದರೆ ನವಂಬರ್ ತಿಂಗಳಲ್ಲಿ ಚಿತ್ರ ರಾಜ್ಯದ್ಯಂತ ತೆರೆಗೆ ಬರುವ ನಿರೀಕ್ಷೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಉದ್ಯಮಿ ಬಿ.ಶಿವಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ, ಅವರೊಂದಿಗೆ ಸೆಲ್ವರಾಜ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ, ನಿರ್ಮಾಪಕರ ಸಂಬಂಧಿಯೂ ಆಗಿರುವ ನಿರ್ದೇಶಕ ತೀರ್ಥೆಶ್ ಕೊರಮೇರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ಚಿತ್ರ ಈಗ ಬಿಡುಗಡೆಯ ಸನಿಹದಲ್ಲಿದೆ ಈ ಹಿನ್ನೆಲೆಯಲ್ಲಿ ಚಿತ್ರದ ಹಾಡುಗಳ ಬಿಡುಗಡೆ ಇತ್ತು. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.,

ನಿರ್ದೇಶಕ ತೀರ್ಥೇಶ್ ಕೊರಮೇರು ಮಾತನಾಡಿ, ಮೂಲತಹ ವಿಎಫ್‍ಎಕ್ಸ್ ತಂತ್ರಜ್ಞ, ವರ್ಣತರಂಗ ಅಂದರೆ ಬಣ್ಣಗಳ ಅಲೆಗಳು ಎಂಬರ್ಥ ಕೊಡುತ್ತದೆ. ಒಬ್ಬ ವ್ಯಕ್ತಿ ಕಲರ್ ಫುಲ್ ಆಗಿ ನಿಜ ಜೀವನದಲ್ಲಿ ಹೇಗಿರುತ್ತಾನೆ. ಆತ ನಕರಾತ್ಮಕವಾಗಿ ಚಿಂತನೆ ಮಾಡುತ್ತಾ, ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳುತ್ತಾನೆ.ಸಿನಿಮಾದಲ್ಲಿ ಸಾಕಷ್ಟು ಕುತೂಹಲಗಳಿವೆ,ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ ಎಂದರು

ಚಿತ್ರವನ್ನು ಬೆಂಗಳೂರು, ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಎಫ್‍ಎಕ್ಸ್ ಶೇಕಡ ಇಪ್ಪತ್ತೈದರಷ್ಟು ಬರುತ್ತದೆ.. 2022ರಲ್ಲಿ ಆರಂಭವಾಗಿದ್ದ ಸಿನಿಮಾ ವಿವಿಧ ಕಾರಣಗಳಿಂದ ತಡ ಆಯಿತು,ಈಗ ಬಿಡುಗಡೆ ಹಂತಕ್ಕೆ ಬಂದಿದೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು

ನಾಯಕ ತಿಲಕ್ ಮಾತನಾಡಿ, ಚಿತ್ರದಲ್ಲಿ ಎಸಿಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ., ಚಿತ್ರದ ಬೇರೆ ಬೇರೆ ಕಮಿಟ್ ಮೆಂಟ್ ಇದೆ, ಗಡ್ಡ ಬಿಟ್ಟಿದೇನೆ ಏನು ಮಾಡುವುದು ಎಂದು ನಿರ್ದೇಶಕರನ್ನು ಕೇಳಿದೆ, ಅದಕ್ಕೆ ಅವರು ಮಫ್ತಿಯಲ್ಲಿರುವ ಪೊಲೀಸ್ ಅಧಿಕಾರಿ, ಹೀಗಾಗಿ ಗಡ್ಡ ಬಿಟ್ಟರೆ ತೊಂದರೆ ಇಲ್ಲ ಎಂದರು, ಹೀಗಾಗಿ ಚಿತ್ರದಲ್ಲಿ ನಟಿಸಿದ್ದೇನೆ. ಒಳ್ಳೆಯ ಪಾತ್ರ, ಚಿತ್ರ ಕೂಡ ಎಂದು ಮಾಹಿತಿ ನೀಡಿದರು

ಮತ್ತೊಬ್ಬ ನಟ ವರ್ಧನ್ ಮಾತನಾಡಿ ಚಿತ್ರದಲ್ಲಿ ಹ್ಯಾಕರ್ ಪಾತ್ರ, ಇದುವರೆಗೂ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಸಿಕೊಂಡಿದ್ದೇನೆ. ಚಿತ್ರದಲ್ಲಿ ನಾನೂ ಒಬ್ಬ ನಾಯಕ, ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರ ಪ್ರೋತ್ಸಾಹ ಇರಲಿ ಎಂದರು.

ನಾಯಕಿ ಸಾಕ್ಷಿ ಮೇಘನಾ ಮಾತನಾಡಿ, ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ, ಗಂಭೀರವಾಗಿ ಇರುವ ಅಗತ್ಯವಿಲ್ಲ. ನಗು ನಗುತ್ತಾ ಜೊತೆಗೆ ಚೈಲ್ಡ್ ರೀತಿ ಆಡುವ ಪಾತ್ರ, ಪಾತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದೇನೆ, ಎಲ್ಲರ ಸಹಕಾರ ಮತ್ತು ಬೆಂಬಲವಿರಲಿ ಎಂದು ಹೇಳಿದರು

ನಿರ್ಮಾಪಕ ಬಿ.ಶಿವಕುಮಾರ್ ಮಾತನಾಡಿ,ಚಿತ್ರ ಅಂದುಕೊಂಡಂತೆ ಚೆನ್ನಾಗಿ ಮೂಡಿ ಬಂದಿದೆ, ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತಿದ್ದೇವೆ ಎಲ್ಲರ ಸಹಕಾರ ಇರಲಿ ಎಂದರು

ಬಾರ್‍ದಲ್ಲಿ ಬರುವ ‘ಸುಕ್ಕ ಸುಕ್ಕ’ ಗೀತೆಗೆ ಚಂದನ್‍ಶೆಟ್ಟಿ ಧ್ವನಿಯಾಗಿದ್ದಾರೆ. ಸದ್ಯದಲ್ಲೆ ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದು, ಇನ್ನರೆಡು ತಿಂಗಳಿಲ್ಲಿ ತೆರೆಗೆ ತರಲು ತಂಡ ಯೋಜನೆ ರೂಪಿಸಿಕೊಂಡಿದೆ.

ಚಿತ್ರದ ತಾರಾಬಳಗದಲ್ಲಿ ತಿಲಕ್. ಜೀವಿತಾ, ಸಾಕ್ಷಿ ಮೇಘನಾ ,.ವರ್ಧನ್, ಹೇಮಂತ್, ರಮೇಶ್ ಪಂಡಿತ್, ಬಲರಾಜವಾಡಿ, ಟೆನ್ನಿಸ್‍ಕೃಷ್ಣ, ಜಯರಾಮ್, ಬಿರಾದಾರ್, ಭಗತ್, ಸುಂದರ್‍ಭಟ್ ಮುಂತಾದವರು ನಟಿಸಿದ್ದಾರೆ.

ಸಂಗೀತ ಆಕಾಶ್‍ರೆಡ್ಡಿ-ಯಶವಂತ್‍ಭೂಪತಿ, ಛಾಯಾಗ್ರಹಣ ಮನುಗೌಡ, ಸಂಕಲನ ವೆಂಕಿ.ಯುಡಿವಿ, ಸಾಹಿತ್ಯ ವಿ.ಎನ್.ಸ್ವಾಮಿ-ಆಕಾಶ್‍ರೆಡ್ಡಿ-ಮಿಥುನ್‍ಸುವರ್ಣ, ಕಾರ್ಯಕಾರಿ ನಿರ್ಮಾಪಕ ಕೆ.ಬಾಲಸುಬ್ರಮಣ್ಯನ್, ಸಾಹಸ ಥ್ರಿಲ್ಲರ್‍ಮಂಜು-ಕುಂಗುಫೂ ಚಂದ್ರು-ನರಸಿಂಹ, ನೃತ್ಯ ನಾಗಿ-ಆನಂದ್ ಅವರದಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin