“ಪಿಲಿನಲಿಕೆ” ನಟ ಜೈದ್ ಖಾನ್: ನಗದು ಬಹುಮಾನ ವಿತರಣೆ - CineNewsKannada.com

“ಪಿಲಿನಲಿಕೆ” ನಟ ಜೈದ್ ಖಾನ್: ನಗದು ಬಹುಮಾನ ವಿತರಣೆ

ಮಂಗಳೂರಿನಲ್ಲಿ ದಸರಾ ಸಂದರ್ಭದಲ್ಲಿ ಯುವ ನಾಯಕ ಮಿಥುನ್ ರೈ ಆಯೋಜಿಸಿದ್ದ “ಪಿಲಿನಲಿಕೆ” ಅದ್ದೂರಿಯಾಗಿ ನೆರವೇರಿತು. ಕಲಾವಿದರಾದ ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಝೈದ್ ಖಾನ್, ಪೂಜಾ ಹೆಗ್ಡೆ, ಕ್ರೀಡಾಪಟುಗಳಾದ ಅಜಿಂಕ್ಯ ರಹಾನೆ, ಜಿತೇಶ್ ಶರ್ಮ ಸೇರಿದಂತೆ ಅನೇಕ ಗಣ್ಯರು ಭಾಗಿದ್ದರು.

“ಪಿಲಿನಲಿಕೆ” (ಹುಲಿ ನೃತ್ಯ) ಒಂದು ತಂಡದ ನೃತ್ಯ ಕಂಡು ವೀಕ್ಷಿಸಿ ಬಹಳ ಸಂತೋಷಪಟ್ಟ ನಟ ಝೈದ್ ಖಾನ್ ಸ್ಥಳದಲ್ಲೇ ತಂಡಕ್ಕೆ ಎರಡು ಲಕ್ಷ ರೂಪಾಯಿಗಳ ಬಹುಮಾನ ಘೋಷಣೆ ಮಾಡುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ.

ಸೊಗಸಾಗಿ ಹುಲಿನೃತ್ಯ ಮಾಡಿದ ಹುಡುಗನ ಪ್ರತಿಭೆಗೆ ಮನಸೋತ ಝೈದ್ ಖಾನ್ ಆ ಹುಡುಗನಿಗೆ ಐವತ್ತು ಸಾವಿರ ರೂಪಾಯಿ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ಪ್ರಸ್ತುತ ಝೈದ್ ಖಾನ್ ನಾಯಜಕನಾಗಿ ನಟಿಸುತ್ತಿರುವ “ಕಲ್ಟ್” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಪ್ರೇಕ್ಷಕರ ಮನ ಗೆದ್ದಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin