Lifestyle, Automobile and Furniture Expo hosted by actor Rana Chachar

ಲೈಫ್ ಸ್ಟೈಲ್ ,ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ ಪೋಗೆ ನಟ ರಾಣಾ ಚಾಲನೆ - CineNewsKannada.com

ಲೈಫ್ ಸ್ಟೈಲ್ ,ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ ಪೋಗೆ ನಟ ರಾಣಾ ಚಾಲನೆ

ಟಿವಿ9 ಕನ್ನಡ ವಾಹಿನಿಯಿಂದ ಲೈಫ್ ಸ್ಟೈಲ್, ಆಟೊಮೊಬೈಲ್ ಮತ್ತು ಫರ್ನಿಚರ್ ಎಕ್ಸ್ ಪೋ ಗೆ ನಟ ರಾಣಾ ಚಾಲನೆ ನೀಡಿದರು. ಈ ಎಕ್ಸ್ ಪೋ, ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಕ್ಟೋಬರ್ 5ರವರೆಗೆ ನಡೆಯಲಿದೆ

ಫ್ಯಾಶನ್ ಜಗತ್ತಿನ ದೊಡ್ಡ ಬ್ರ್ಯಾಂಡ್‍ಗಳು, ಹೊಚ್ಚ ಹೊಸ ಕಾರುಗಳು, ಆಕರ್ಷಕ ಪೀಠೋಕರಣಗಳು ಒಂದೇ ವೇದಿಕೆಯಲ್ಲಿ ಲಭ್ಯವಿರಲಿವೆ ಹೊಸ ವಾಹನಗಳ ಅನ್ವೇಷಣೆಯಲ್ಲಿರುವವರಿಗೆ, ಹೋಮ್ ಡೆಕೋರೇಶನ್ ಆಸಕ್ತರಿಗೆ ಈ ಎಕ್ಸ್ ಪೋ ಸರಿಯಾದ ವೇದಿಕೆಯಾಗಿದೆ.

ಎಲೆಕ್ಟ್ರಾನಿಕ್ ಗ್ಯಾಜೆಟ್: ಸ್ಮಾರ್ಟ್ ಹೋಮ್ ಟೆಕ್ನಾಲಜಿಯ ಇತ್ತೀಚಿನ ಉತ್ಪನ್ನಗಳು, ಅಡುಗೆಮನೆ ಪರಿಕರಗಳು, ಪರ್ಸನಲ್ ಗ್ಯಾಜೆಟ್‍ಗಳು ಮೊದಲಾದವನ್ನು ಈ ಎಕ್ಸ್ ಪೋ ದಲ್ಲಿ ಕಾಣಬಹುದು. ಹಾಗೆಯೇ, ದೇಶದ ಅತ್ಯುತ್ತಮ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‍ಗಳ ಉತ್ಪನ್ನಗಳ ಲಭ್ಯವಿದೆ

ಆಟೊಮೊಬೈಲ್ ಪೆವಿಲಿಯನ್: ಹೊಚ್ಚ ಹೊಸ ಬ್ರ್ಯಾಂಡ್‍ಗಳ ಎಲೆಕ್ಟ್ರಿಕ್ ವಾಹನಗಳು, ಎಸ್‍ಯುವಿ, ಬೈಕ್, ಸ್ಕೂಟರ್, ಕಾನ್ಸೆಪ್ಟ್ ಕಾರ್ ಇತ್ಯಾದಿಯ ಪ್ರದರ್ಶನ ಇರುತ್ತದೆ. ಟೆಸ್ಟ್ ರೈಡ್ ಮಾಡಿ ವಾಹನದ ಪ್ರತ್ಯಕ್ಷ ಅನುಭವ ಪಡೆಯಬಹುದು. ವಿಆರ್ ಮೂಲಕವೂ ವಾಹನದ ಡ್ರೈವಿಂಗ್ ಎಕ್ಸ್‍ಪೀರಿಯನ್ಸ್ ಪಡೆಯಬಹುದು.

ಫರ್ನಿಚರ್ ಮತ್ತು ಹೋಮ್ ಡೆಕೋರೇಶನ್: ಆಕರ್ಷಕ ಹಾಗೂ ಅತ್ಯುತ್ತಮ ಗುಣಮಟ್ಟದ ಪೀಠೋಪಕರಣಗಳು, ಇಂಟೀರಿಯರ್ ಡೆಕೋರೇಶನ್, ಸ್ಮಾರ್ಟ್ ಲಿವಿಂಗ್ ಸಲ್ಯೂಶನ್ಸ್ ಮತ್ತಿತರ ಉತ್ಪನ್ನಗಳು ಸಿಗಲಿವೆ

ಫ್ಯಾಷನ್ ಮತ್ತು ಜ್ಯುವೆಲರಿ: ಹೊಚ್ಚ ಹೊಸ ಫ್ಯಾಷನ್ ಟ್ರೆಂಡ್‍ಗಳು, ಡಿಸೈನರ್ ಕಲೆಕ್ಷನ್ಸ್, ಟ್ರೆಂಡಿ ಡಿಸೈನ್ ಇರುವ ಜ್ಯುವೆಲರಿಗಳನ್ನು ಮೇಳದಲ್ಲಿ ಲಭ್ಯವಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin